ದೆಹಲಿ: ಸೀರಮ್ ಇನ್ಸ್ಟಿಟ್ಯೂಟ್ನ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅವಕಾಶ ನೀಡಿದ ಭಾರತದ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಸ್ವಾಗತಿಸಿದೆ.
ಇಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಅಧ್ಯಕ್ಷ ವಿ.ಜಿ. ಸೋಮಾನಿ ಲಸಿಕೆಗಳ ತುರ್ತು, ನಿರ್ಬಂಧಿತ ಬಳಕೆಗೆ ಅನುಮತಿ ನೀಡಿದ್ದನ್ನು ಘೋಷಿಸಿದ ಬಳಿಕ ಟ್ವೀಟ್ ಮಾಡಿರುವ ಡಬ್ಲ್ಯುಎಚ್ಒದ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಕ್ಷೇತ್ರಪಾಲ ಸಿಂಗ್, ಆಗ್ನೇಯ ಏಷ್ಯಾ ಭಾಗದಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿದ ಮೊದಲ ದೇಶ ಭಾರತ. ಈ ನಿರ್ಧಾರವನ್ನು WHO ಸ್ವಾಗತಿಸುತ್ತದೆ. ಭಾರತದ ಈ ಕ್ರಮ ಆಗ್ನೇಯ ಏಷ್ಯಾ ಭಾಗದಲ್ಲಿ ಕೊವಿಡ್-19 ವಿರುದ್ಧ ಹೋರಾಟವನ್ನು ಬಲಗೊಳಿಸಲಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಎರಡು ಲಸಿಕೆಗಳು ಬಳಕೆಗೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
WHO welcomes India's decision giving emergency use authorization to #COVID-19 #vaccines –
Dr Poonam Khetrapal Singh, Regional Director,
WHO South-East Asia Region pic.twitter.com/jyQGI6Gymp— WHO South-East Asia (@WHOSEARO) January 3, 2021
ಕೊರೊನಾ ವಿರುದ್ಧ ಹೋರಾಟಕ್ಕೆ 2 ಲಸಿಕೆಗಳು ಸಿದ್ಧ; ಕೊವಿಶೀಲ್ಡ್, ಕೊವ್ಯಾಕ್ಸಿನ್ಗೆ DCGI ಅನುಮೋದನೆ