WHO ಅನುಮತಿ ನೀಡದಿರೋ ಲಸಿಕೆ ಬಳಸಲು ಭಾರತೀಯರೇನು ಹಂದಿಗಳೇ: ಸುಬ್ರಹ್ಮಣ್ಯಂ ಸ್ವಾಮಿ
ಆಸ್ಟ್ರಾಜೆನಿಕಾ ಲಸಿಕೆಯನ್ನು ಭಾರತದಲ್ಲಿ ಬಳಕೆಗೆ ಅನುಮತಿ ನೀಡಿರೋದನ್ನ ವಿರೋಧಿಸಿರೋ ನ್ಯಾಯವಾದಿ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಲಸಿಕೆ ಬಳಸಲು ಹಾಗೂ ಪ್ರಯೋಗಿಸಲು ಭಾರತೀಯರೇನು ಹಂದಿಗಳೇ ಎಂದು ಪ್ರಶ್ನಿಸಿದ್ದಾರೆ.

ದೆಹಲಿ: ಆಡಳಿತ ಪಕ್ಷದಲ್ಲಿದ್ದರೂ ಕೆಲ ವಿಚಾರಗಳಲ್ಲಿ ತಮ್ಮ ಸ್ವಂತಿಕೆ ಬಿಟ್ಟುಕೊಡದ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಸುಬ್ರಮಣಿಯನ್ ಸ್ವಾಮಿ ಆಸ್ಟ್ರಾಜೆನಿಕ್ ವ್ಯಾಕ್ಸಿನ್ನನ್ನು ಭಾರತದಲ್ಲಿ ಬಳಸಲು ಅನುಮತಿ ನೀಡಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ಆಸ್ಟ್ರಾಜೆನಿಕಾ ಲಸಿಕೆಯನ್ನು ಭಾರತದಲ್ಲಿ ಬಳಕೆಗೆ ಅನುಮತಿ ನೀಡಿರೋದನ್ನ ವಿರೋಧಿಸಿರೋ ನ್ಯಾಯವಾದಿ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಲಸಿಕೆ ಬಳಸಲು ಹಾಗೂ ಪ್ರಯೋಗಿಸಲು ಭಾರತೀಯರೇನು ಹಂದಿಗಳೇ ಎಂದು ಪ್ರಶ್ನಿಸಿದ್ದಾರೆ. WHO ಅನುಮತಿ ನೀಡದಿರೋ ವ್ಯಾಕ್ಸಿನ್ಗೆ ಭಾರತದಲ್ಲಿ ಅನುಮತಿ ನೀಡಿರುವುದಕ್ಕೆ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
WHO hasn't cleared AstraZeneca even for emergency use!! Are Indians going to be Guinea pigs?
— Subramanian Swamy (@Swamy39) January 2, 2021
ಕೊರೊನಾ ವಿರುದ್ಧ ಹೋರಾಟಕ್ಕೆ 2 ಲಸಿಕೆಗಳು ಸಿದ್ಧ; ಕೊವಿಶೀಲ್ಡ್, ಕೊವ್ಯಾಕ್ಸಿನ್ಗೆ DCGI ಅನುಮೋದನೆ
ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ತುರ್ತು ಬಳಕೆಗೆ DCGI ಒಪ್ಪಿಗೆ; ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ ಮೋದಿ