ರೈತರ ಪ್ರತಿಭಟನೆಯ ಲಾಭ ಪಡೆದ ಟೆಲಿಕಾಂ ಸಂಸ್ಥೆಗಳು: ಜಿಯೋ ಆರೋಪ ಆಧಾರರಹಿತ ಎಂದ ಏರ್​ಟೆಲ್

ಏರ್​ಟೆಲ್ ವಿರುದ್ಧದ ಜಿಯೋ ಆರೋಪ ಯಾವುದೇ ಸಾಕ್ಷಿ ಹೊಂದಿಲ್ಲ ಜಿಯೋ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳೊಂದಿಗೆ ಏರ್​ಟೆಲ್ ಸಂಬಂಧ ಹೊಂದಿಲ್ಲ ಎಂದು ಟೆಲಿಕಾಂ ವಿಭಾಗಕ್ಕೆ ಏರ್​ಟೆಲ್ ಹೇಳಿದೆ.

ರೈತರ ಪ್ರತಿಭಟನೆಯ ಲಾಭ ಪಡೆದ ಟೆಲಿಕಾಂ ಸಂಸ್ಥೆಗಳು: ಜಿಯೋ ಆರೋಪ ಆಧಾರರಹಿತ ಎಂದ ಏರ್​ಟೆಲ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 11:15 PM

ದೆಹಲಿ: ಜಿಯೋ ಟವರ್ ಹಾಳುಗೆಡಹುವ, ತಡೆಯೊಡ್ಡುವ ಕೃತ್ಯ ಎಸಗಿದವರಿಗೆ ಪ್ರತಿಸ್ಪರ್ಧಿ ಟೆಲಿಕಾಂ ಕಂಪೆನಿಗಳು ಕುಮ್ಮಕ್ಕು ನೀಡಿವೆ ಎಂಬ ಜಿಯೋ ಆರೋಪವನ್ನು ಉದ್ದೇಶಿಸಿ ಏರ್​ಟೆಲ್ ಟೆಲಿಕಾಂ ವಿಭಾಗಕ್ಕೆ (DoT) ಪತ್ರ ಬರೆದಿದೆ. ಜಿಯೋ ಮಾಡಿರುವ ಆರೋಪ ಆಧಾರರಹಿತ ಎಂದು ಏರ್​ಟೆಲ್ ಕಟುವಾಗಿ ಪ್ರತಿಕ್ರಿಯಿಸಿದೆ.

ಏರ್​ಟೆಲ್ ವಿರುದ್ಧದ ಜಿಯೋ ಆರೋಪ ಯಾವುದೇ ಸಾಕ್ಷಿ ಹೊಂದಿಲ್ಲ ಎಂದು ಟೆಲಿಕಾಂ ವಿಭಾಗಕ್ಕೆ ಏರ್​ಟೆಲ್ ಹೇಳಿದೆ. ಜಿಯೋ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳೊಂದಿಗೆ ಏರ್​ಟೆಲ್ ಸಂಬಂಧ ಹೊಂದಿಲ್ಲ. ಹಾಗಾಗಿ, ದೂರನ್ನು ತಿರಸ್ಕರಿಸಬೇಕು ಎಂದು ಏರ್​ಟೆಲ್ ತಿಳಿಸಿದೆ.

ಏರ್​ಟೆಲ್, ಟೆಲಿಕಾಂ ಕಾರ್ಯದರ್ಶಿ ಅನ್ಶು ಪ್ರಕಾಶ್​ಗೆ ಬರೆದಿರುವ ಪತ್ರದಲ್ಲಿ, ರಿಲಯನ್ಸ್ ಜಿಯೋ, ಡಿಸೆಂಬರ್ 28ರಂದು ಪತ್ರದ ಮೂಲಕ ಮಾಡಿರುವ ಆರೋಪದ ಬಗ್ಗೆ ಅರಿವಿದೆ. ಅಂಥದ್ದೇ ಆರೋಪವನ್ನು ಜಿಯೋ ಡಿಸೆಂಬರ್ ಮೊದಲ ವಾರದಲ್ಲೂ ಮಾಡಿತ್ತು. ಅದಕ್ಕೆ ಏರ್​ಟೆಲ್ ಪ್ರತಿಕ್ರಿಯಿಸಿತ್ತು ಎಂದು ವಿವರಿಸಿದೆ.

ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಜಿಯೋ ಈ ದೂರು ನೀಡಿತ್ತು. ಜಿಯೋ ಆರೋಪಕ್ಕೆ ಏರ್​ಟೆಲ್ ಮುಖ್ಯ ನಿಯಂತ್ರಕ ಅಧಿಕಾರಿ ರಾಹುಲ್ ವಾಟ್ಸ್ ಟೆಲಿಕಾಂ ವಿಭಾಗಕ್ಕೆ ಬರೆದ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜಿಯೋ ಸಿಮ್ ತಿರಸ್ಕರಿಸುವ ರೈತರ ಆಂದೋಲನದಲ್ಲಿ ಏರ್​ಟೆಲ್ ಪಾತ್ರವಹಿಸಿದೆ ಎಂಬ ಆರೋಪ ಆಧಾರ ರಹಿತವಾಗಿದೆ. ಮಾತ್ರವಲ್ಲ, ಇದು ಅತಿರೇಕದ ಆರೋಪವಾಗಿದೆ ಎಂದು ಹೇಳಿದ್ದಾರೆ.

ಗ್ರಾಹಕರನ್ನು ಜಿಯೋನಿಂದ ಪೋರ್ಟ್ ಮಾಡುವಂತೆ ಏರ್​ಟೆಲ್ ಬಲವಂತ ಮಾಡಿದೆ ಎಂದು ಜಿಯೋ ಸಂಸ್ಥೆ ನಂಬಿರುವ ಬಗ್ಗೆ ಏರ್​ಟೆಲ್ ಆಶ್ಚರ್ಯ ವ್ಯಕ್ತಪಡಿಸಿದೆ. ಏರ್​ಟೆಲ್ ಅಷ್ಟು ಸರ್ವಶಕ್ತವಾಗಿದ್ದರೆ, ಮೂರು ವರ್ಷಗಳ ಹಿಂದೆ ಗ್ರಾಹಕರ ಮೇಲೆ ಜಿಯೋ ಪ್ರಭಾವ ಹೆಚ್ಚುತ್ತಿದ್ದಾಗಲೇ ಏರ್​ಟೆಲ್ ಕ್ರಮ ಕೈಗೊಳ್ಳುತ್ತಿತ್ತು ಎಂದು ಸಂಸ್ಥೆ ಹೇಳಿದೆ.

ಹರ್ಯಾಣ ಹಾಗೂ ಪಂಜಾಬ್ ಭಾಗಗಳಲ್ಲಿ ನಡೆದ ಜಿಯೋ ಮೇಲಿನ ಹಾನಿಗೆ ಏರ್​ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಹಂಚಿಕೆದಾರರು, ಚಾನಲ್ ಪಾರ್ಟ್ನರ್​ಗಳು ಕಾರಣ ಎಂದು ಜಿಯೋ ಆರೋಪಿಸಿತ್ತು. ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಪ್ರತಿಸ್ಪರ್ಧಿ ಕಂಪೆನಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಜಿಯೋ ತಿಳಿಸಿತ್ತು.

Published On - 1:39 pm, Sun, 3 January 21

ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ