ರಾಹುಲ್ ಅಥವಾ ಪ್ರಿಯಾಂಕಾ; ನಿಮ್ಮಿಬ್ಬರಲ್ಲಿ ನಿಷ್ಪ್ರಯೋಜಕರು ಯಾರು ಎಂದು ಲೋಕಸಭೆಯಲ್ಲಿ ನೋಡಬಹುದು: ಬಿಜೆಪಿ

|

Updated on: Jun 18, 2024 | 9:22 PM

“ಪ್ರಿಯಾಂಕಾ ವಯನಾಡ್‌ನಿಂದ ಸ್ಪರ್ಧಿಸಲು ಹೋದರೆ ಸಾಕು, ವಯನಾಡ್ ಜನರು ಯಾವಾಗಲೂ ಕುಟುಂಬದವರು ಯಾರಾದರೂ ಬೇಕು ಎಂದು ಬಯಸುತ್ತಾರೆ. ಸಂಸತ್ತಿನಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಇವರಿಬ್ಬರಲ್ಲಿ ಯಾರು ಹೆಚ್ಚು ನಿಷ್ಪ್ರಯೋಜಕರಾಗಿದ್ದಾರೆ ಎಂಬ ಸ್ಪರ್ಧೆಯನ್ನು  ಕಾಣಬಹುದು ಎಂದು ಅಲೋಕ್ ಹೇಳಿದ್ದಾರೆ.

ರಾಹುಲ್ ಅಥವಾ ಪ್ರಿಯಾಂಕಾ; ನಿಮ್ಮಿಬ್ಬರಲ್ಲಿ ನಿಷ್ಪ್ರಯೋಜಕರು ಯಾರು ಎಂದು ಲೋಕಸಭೆಯಲ್ಲಿ ನೋಡಬಹುದು: ಬಿಜೆಪಿ
ಪ್ರಿಯಾಂಕಾ -ರಾಹುಲ್ ಗಾಂಧಿ
Follow us on

ದೆಹಲಿ ಜೂನ್ 18: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ವಯನಾಡ್ (Wayanad) ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಆ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ, ಬಿಜೆಪಿ ಕುಟುಂಬ ರಾಜಕೀಯದಲ್ಲಿ ತೊಡಗಿರುವ ಗಾಂಧಿ ಪರಿವಾರದ ಮೇಲೆ ವಾಗ್ದಾಳಿ ಮಾಡಿದೆ. ಕೇರಳದ ವಯನಾಡ್‌ನಿಂದ ಸ್ಪರ್ಧಿಸುವ ಪ್ರಿಯಾಂಕಾ ನಿರ್ಧಾರದ ಬಗ್ಗೆ ಬಿಜೆಪಿ ನಾಯಕ ಅಜಯ್ ಅಲೋಕ್, ಗಾಂಧಿ ಕುಟುಂಬದ ವಿರುದ್ಧ ವ್ಯಂಗ್ಯವಾಡಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕಾ ಅವರಲ್ಲಿ ಯಾರು ಹೆಚ್ಚು “ನಿಷ್ಪ್ರಯೋಜಕರು” ಎಂದು ಸಂಸತ್ತಿನಲ್ಲಿ ಕಾಣಬಹುದು ಎಂದು ಅಜಯ್ ಅಲೋಕ್ ಕೇಳಿದ್ದಾರೆ.

“ಪ್ರಿಯಾಂಕಾ ವಯನಾಡ್‌ನಿಂದ ಸ್ಪರ್ಧಿಸಲು ಹೋದರೆ ಸಾಕು, ವಯನಾಡ್ ಜನರು ಯಾವಾಗಲೂ ಕುಟುಂಬದವರು ಯಾರಾದರೂ ಬೇಕು ಎಂದು ಬಯಸುತ್ತಾರೆ. ಸಂಸತ್ತಿನಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಇವರಿಬ್ಬರಲ್ಲಿ ಯಾರು ಹೆಚ್ಚು ನಿಷ್ಪ್ರಯೋಜಕರಾಗಿದ್ದಾರೆ ಎಂಬ ಸ್ಪರ್ಧೆಯನ್ನು  ಕಾಣಬಹುದು ಎಂದು ಅಲೋಕ್ ಹೇಳಿದ್ದಾರೆ.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೋಮವಾರ ವಯನಾಡ್‌ನಿಂದ ಪ್ರಿಯಾಂಕಾ ಗಾಂಧಿ ಅಭ್ಯರ್ಥಿಯನ್ನು ಘೋಷಿಸಿದ ನಂತರ ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರು ಗೆದ್ದಿರುವ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರವನ್ನು ರಾಹುಲ್ ಗಾಂಧಿ ಉಳಿಸಿಕೊಳ್ಳಲು ನಿರ್ಧರಿಸಿದ ನಂತರ ವಯನಾಡ್ ಕ್ಷೇತ್ರದಲ್ಲಿ ಉಪಚುನಾವಣೆ ಅನಿವಾರ್ಯವಾಯಿತು.

ಈ ಹಿಂದೆ, ಮಾಜಿ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಿಯಾಂಕಾ ಗಾಂಧಿ “ಅತ್ಯಂತ ಜನಪ್ರಿಯ” ಮುಖ ಎಂದು ಹೇಳಿದ್ದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಸದ್ಯ ಈ ಹುದ್ದೆಯನ್ನು ಮಲ್ಲಿಕಾರ್ಜುನ ಖರ್ಗೆ ನಿರ್ವಹಿಸುತ್ತಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕಿ ಅನ್ನಿ ರಾಜಾ ಕೂಡ ರಾಹುಲ್ ಗಾಂಧಿ ಅವರನ್ನು ರಾಜಕೀಯ ನೈತಿಕತೆಯ ಬಗ್ಗೆ ವಾಗ್ದಾಳಿ ನಡೆಸಿದ್ದು, ಅವರು ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ವಯನಾಡಿನ ಮತದಾರರಿಗೆ ತಿಳಿಸಿಲ್ಲ ಎಂದು ಹೇಳಿದರು.

“ಅದು ಅವರ ಪಕ್ಷದ ನಿರ್ಧಾರ ಮತ್ತು ಅದು ಅವರ ಹಕ್ಕು. ರಾಜಕೀಯ ನೈತಿಕತೆಯನ್ನು ಉಳಿಸಿಕೊಳ್ಳಲು, ರಾಹುಲ್ ಗಾಂಧಿ ಅವರಿಗೆ ಭಾರಿ ಬಹುಮತ ಮತ್ತು ಗೆಲುವು ನೀಡಿದ್ದರಿಂದ ಮತದಾರರಿಗೆ ತಿಳಿಸಬೇಕು ಎಂದು ನಾನು ಆ ಬಾರಿ (ಚುನಾವಣೆಯಲ್ಲಿ) ಹೇಳಿದ್ದೆ. ಅವರು ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ಯೋಜಿಸುತ್ತಿದ್ದಾರೆ ಎಂದು ತಿಳಿಸಬೇಕಿತ್ತು, ಇದು ವಯನಾಡಿನ ಮತದಾರರಿಗೆ ಅನ್ಯಾಯವಾಗಿದೆ ಎಂದು ಅನ್ನಿ ರಾಜಾ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರ: ಉದ್ಘಾಟನೆಗೆ ಮುನ್ನವೇ ಕುಸಿದು ಬಿತ್ತು ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಸೇತುವೆ

ವಯನಾಡ್ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಗೆದ್ದರೆ, ನೆಹರು-ಗಾಂಧಿ ಕುಟುಂಬದ ಮೂವರು ಸದಸ್ಯರು ಸಂಸತ್ತಿನಲ್ಲಿ ಸಂಸದ ಸ್ಥಾನವನ್ನು ಅಲಂಕರಿಸುತ್ತಾರೆ, ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಈಗಾಗಲೇ ಸದಸ್ಯರಾಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ