AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ಉದ್ಘಾಟನೆಗೆ ಮುನ್ನವೇ ಕುಸಿದು ಬಿತ್ತು ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಸೇತುವೆ

ಸಿಕ್ತಿ ಪ್ರದೇಶದಲ್ಲಿ ಬಕ್ರಾ ನದಿಗೆ 12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆ ಇದಾಗಿದೆ.  ಸೇತುವೆಯ ಒಂದು ಬದಿ ಕುಸಿಯುತ್ತಿರುವುದನ್ನು ವೈರಲ್ ವಿಡಿಯೊ ತೋರಿಸುತ್ತದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಿಹಾರದ ಅರಾರಿಯಾ ಜಿಲ್ಲೆಯ ಕುರ್ಸಕಾಂತ ಮತ್ತು ಸಿಕ್ತಿ ನಡುವಿನ ಪ್ರಯಾಣವನ್ನು ಸುಲಭಗೊಳಿಸುವುದಕ್ಕಾಗಿ ಈ  ಸೇತುವೆಯನ್ನು ನಿರ್ಮಿಸಲಾಗಿತ್ತು.

ಬಿಹಾರ: ಉದ್ಘಾಟನೆಗೆ ಮುನ್ನವೇ ಕುಸಿದು ಬಿತ್ತು ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಸೇತುವೆ
ಕುಸಿದ ಸೇತುವೆ
Follow us
ರಶ್ಮಿ ಕಲ್ಲಕಟ್ಟ
|

Updated on: Jun 18, 2024 | 8:40 PM

ದೆಹಲಿ ಜೂನ್ 18: ಬಿಹಾರದ (Bihar) ಅರಾರಿಯಾದಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ಹೊಸದಾಗಿ ನಿರ್ಮಿಸಲಾದ ಸೇತುವೆಯ (bridge Collapse) ಒಂದು ಭಾಗ ಮಂಗಳವಾರ ಕುಸಿದಿದೆ. ಸಿಕ್ತಿ ಪ್ರದೇಶದಲ್ಲಿ ಬಕ್ರಾ ನದಿಗೆ ₹12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆ ಇದಾಗಿದೆ.  ಸೇತುವೆಯ ಒಂದು ಬದಿ ಕುಸಿಯುತ್ತಿರುವುದನ್ನು ವೈರಲ್ ವಿಡಿಯೊ ತೋರಿಸುತ್ತದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಿಹಾರದ ಅರಾರಿಯಾ ಜಿಲ್ಲೆಯ ಕುರ್ಸಕಾಂತ ಮತ್ತು ಸಿಕ್ತಿ ನಡುವಿನ ಪ್ರಯಾಣವನ್ನು ಸುಲಭಗೊಳಿಸುವುದಕ್ಕಾಗಿ ಈ  ಸೇತುವೆಯನ್ನು ನಿರ್ಮಿಸಲಾಗಿತ್ತು.

ಸಿಕ್ತಿ ಶಾಸಕ ವಿಜಯ್ ಕುಮಾರ್ ಎಎನ್‌ಐಗೆ ಹೇಳಿಕೆ ನೀಡಿದ್ದು, ನಿರ್ಮಾಣ ಕಂಪನಿಯ ಮಾಲೀಕರ ನಿರ್ಲಕ್ಷ್ಯದಿಂದ ಸೇತುವೆ ಕುಸಿದಿದೆ. ಆಡಳಿತವು ತನಿಖೆ ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು  ಹೇಳಿದ್ದಾರೆ. ಸೇತುವೆ ನಿರ್ಮಾಣಕ್ಕೆ ಕಡಿಮೆ ಬೆಲೆಯ ಸಾಮಗ್ರಿಗಳನ್ನು ಬಳಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸೇತುವೆ ಕುಸಿಯುತ್ತಿರುವ ವಿಡಿಯೊ

ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಇನಾಯತ್ ಖಾನ್ ಭರವಸೆ ನೀಡಿದರು.

“ನದಿಯ ಹರಿವು ಬದಲಾದ ನಂತರ ಸೇತುವೆಯ ಉಪಯುಕ್ತತೆ ಕಡಿಮೆಯಾಗಿದೆ. ಆದರೆ, ಜಿಲ್ಲಾಡಳಿತ ಈ ಘಟನೆಯನ್ನು ಗಮನಕ್ಕೆ ತಂದಿದೆ. ಗ್ರಾಮೀಣ ಕಾಮಗಾರಿ ಇಲಾಖೆಯ ಅಧಿಕಾರಿಗಳು ನಾಳೆ ಅರಾರಿಯಾಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜೆಡಿಯು ನಾಯಕ ನೀರಜ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಹಲವಾರು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ; ಬಿಗಿ ಭದ್ರತೆ

ಮೂರನೇ ಹಂತದಲ್ಲಿ ಎಂಟು ಕಂಬಗಳನ್ನು ನಿರ್ಮಿಸಲಾಗಿದೆ. ಉಳಿದ ಎಂಟು ಪಿಲ್ಲರ್‌ಗಳನ್ನು ಮೊದಲ ಮತ್ತು ಎರಡನೇ ಹಂತದಲ್ಲಿ ನಿರ್ಮಿಸಲಾಗಿದೆ.ಮೊದಲ ಮತ್ತು ಎರಡನೇ ಹಂತಗಳಲ್ಲಿ ಮಾಡಿದ ಎಲ್ಲಾ ಕಂಬಗಳು ಹಾನಿಗೊಳಗಾಗದೆ ಉಳಿದಿವೆ. ಈ ವರ್ಷದ ಮಾರ್ಚ್‌ನಲ್ಲಿ ಸುಪೌಲ್ ಪಟ್ಟಣದಲ್ಲಿ ಕೋಸಿ ನದಿಗೆ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟಿದ್ದರು. ಕಳೆದ ವರ್ಷ ಸುಲ್ತಾನ್‌ಗುಂಜ್‌ನಲ್ಲಿ ಗಂಗಾ ನದಿಯ ಸೇತುವೆ ಕುಸಿದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP