ದೆಹಲಿ: ಪ್ರಯಾಗ್‌ರಾಜ್‌ನಲ್ಲಿ ಗ್ಯಾಂಗ್ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ (Atiq Ahmed) ಮತ್ತು ಆತನ ಸಹೋದರ ಅಶ್ರಫ್ ಹತ್ಯೆ(Ashraf) ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ (Uttar Pradesh) ಸರ್ಕಾರವನ್ನು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಇಬ್ಬರನ್ನು ಮಾಧ್ಯಮದ ಮುಂದೆ ಕರೆ ತಂದಿದ್ದು ಯಾಕೆ ಎಂದು ಸುಪ್ರೀಂಕೋರ್ಟ್ ಕೇಳಿದೆ. ಏಪ್ರಿಲ್ 15 ರಂದು ರಾತ್ರಿ ಮಾಧ್ಯಮ ಸಂವಾದದ ವೇಳೆ ಅಹ್ಮದ್ ಸಹೋದರರನ್ನು ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದರು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗಾಗಿ ಇಬ್ಬರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮೂವರು ಶೂಟರ್‌ಗಳು ಪತ್ರಕರ್ತರ ಸೋಗಿನಲ್ಲಿ ಬಂದು ಗುಂಡು ಹಾರಿಸಿದ್ದಾರೆ. ಇವರನ್ನು ಬಂಧಿಸಲಾಗಿದೆ.
ಅದೇ ವೇಳೆ ಮೂರು ವಾರಗಳಲ್ಲಿ ಹತ್ಯೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಇಬ್ಬರನ್ನು (ಅತೀಕ್ ಅಹ್ಮದ್ ಮತ್ತು ಅಶ್ರಫ್) ಆಸ್ಪತ್ರೆಯೊಳಗೆ ವ್ಯಾನ್‌ನಲ್ಲೇ ಯಾಕೆ ಕರೆದೊಯ್ದಿಲ್ಲ? ಅವರನ್ನು ಮಾಧ್ಯಮದ ಮುಂದೆ ಮೆರವಣಿಗೆ ನಡೆಸಿದ್ದೇಕೆ ಎಂದು ಎಂದು ಸುಪ್ರೀಂಕೋರ್ಟ್ ಯುಪಿ ಸರ್ಕಾರವನ್ನು ಕೇಳಿದೆ.
#BREAKING #SupremeCourt seeks a comprehensive affidavit from the State of UP on the steps taken to inquire into the killings of Atiq Ahmed and brother Ashraf Ahmad when they were in police custody and also the previous encounter killings of the accused in Umesh Pal Murder case. https://t.co/5p5FfqiOFn
— Live Law (@LiveLawIndia) April 28, 2023
ಅತೀಕ್ ಪುತ್ರ ಅಸದ್ ಅಹ್ಮದ್‌ನ ಎನ್‌ಕೌಂಟರ್‌ನ ಸ್ಥಿತಿಗತಿ ವರದಿಯನ್ನು ಸಹ ಸುಪ್ರೀಂಕೋರ್ಟ್ ಕೇಳಿದೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ವಾಂಟೆಡ್ ಆಗಿದ್ದ ಅಸದ್ನನ್ನು ಏಪ್ರಿಲ್ 13 ರಂದು ಝಾನ್ಸಿಯಲ್ಲಿ ಉತ್ತರ ಪ್ರದೇಶದ ಎಸ್ ಟಿಎಫ್ ಗುಂಡಿಕ್ಕಿ ಹತ್ಯೆ ಮಾಡಿತ್ತು.
ಇದನ್ನೂ ಓದಿ:Ajay Alok: ನಿತೀಶ್ ಕುಮಾರ್ ಆಪ್ತರಾಗಿದ್ದ ಅಜಯ್ ಅಲೋಕ್ ಬಿಜೆಪಿಗೆ ಸೇರ್ಪಡೆ
ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ದೀಪಂಕರ್ ದತ್ತ ಅವರ ಪೀಠವು ಅತೀಕ್ ಅಹ್ಮದ್ ಮತ್ತು ಅಶ್ರಫ್ ಹತ್ಯೆಯ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ವಕೀಲ ವಿಶಾಲ್ ತಿವಾರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸುತ್ತಿದೆ.
ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಅವರನ್ನು ಬಂಧಿಸಲು ಪೊಲೀಸರು ನಿರಂತರವಾಗಿ ಶೋಧ ನಡೆಸುತ್ತಿದ್ದಾರೆ. ಕೊಸಾಂಬಿಯಲ್ಲಿ ಶೈಸ್ತಾ ಪತ್ತೆಗಾಗಿ ದಾಳಿ ನಡೆಸಲಾಗಿದೆ. ಶೈಸ್ತಾ ತನ್ನ ಪತಿ ಅತೀಕ್ ಅಹ್ಮದ್ ಮತ್ತು ಮಗ ಅಸದ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಏತನ್ಮಧ್ಯೆ, ಎಸ್‌ಐಟಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಮೂಲಗಳ ಪ್ರಕಾರ, ಎಸ್‌ಐಟಿಗೆ ಅತೀಕ್‌ನ ಮಾವ ಐಡಿ ಕಾರ್ಡ್ ಮತ್ತು ಫೋನ್ ನಂಬರ್ ಇರುವ ಡೈರಿ ಸಿಕ್ಕಿದೆ. ಮೂಲಗಳ ಪ್ರಕಾರ, ಅತೀಕ್ ಅವರ ಪತ್ನಿ ಶೈಸ್ತಾಗೆ ಸಹಾಯ ಮಾಡುವ ಅನೇಕ ಜನರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇದ್ದಾರೆ ಎಂಬ ಮಾಹಿತಿಯೂ ಬಂದಿದೆ ಎಂದು ಝೀ ನ್ಯೂಸ್ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Fri, 28 April 23