ಕಳೆದ ಒಂದೆರಡು ವರ್ಷಗಳಿಂದೀಚೆಗೆ ಭಾರತ ಸರ್ಕಾರವು ಸಾಕಷ್ಟು ಚೀನಾ ಅಪ್ಲಿಕೇಷನ್ಗಳನ್ನು ನಿಷೇಧಿಸಿದೆ. ಅಪ್ಲಿಕೇಷನ್ಗಳಲ್ಲಿ ಅಂಥದ್ದೇನಿತ್ತು, ಯಾಕಾಗಿ ನಿಷೇಧಿಸಲಾಗಿದೆ ಎನ್ನುವ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಈ ಕುರಿತು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಈ ಕುರಿತು ಮಾಹಿತಿ ನೀಡಿದ್ದಾರೆ. ಭದ್ರತೆಯ ದೃಷ್ಟಿಯಿಂದ ಚೀನಾ ಅಪ್ಲಿಕೇಷನ್ಗಳನ್ನು ಭಾರತದಲ್ಲಿ ನಿಷೇಧಿಸಲಾಯಿತು, ಅಪ್ಲಿಕೇಷನ್ಗಳ ಮೂಲಕ ತಪ್ಪು ಮಾಹಿತಿಯನ್ನು ಹರಡಬಹುದಾಗಿತ್ತು.
ರೈಸಿನಾ ಡೈಲಾಗ್‌ನ ಎಂಟನೇ ಆವೃತ್ತಿಯ ಭಾಗವಾಗಿ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ ಅವರು ಶೋಟಾಪ್‌ಗಳು: ಕರೆನ್ಸಿಸ್ ಆಫ್ ಪವರ್ ಮತ್ತು ಪರ್ಸುಯೇಷನ್: ರಿಫ್ಲೆಕ್ಷನ್ಸ್ ಆನ್ ದಿ ಫ್ಯೂಚರ್ ಎಂಬ ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
138 ಬೆಟ್ಟಿಂಗ್ ಆಪ್‌ಗಳು ಮತ್ತು 94 ಲೋನ್ ನೀಡುವ ಆ್ಯಪ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಮತ್ತು ನಿರ್ಬಂಧಿಸಲಾಗಿದೆ. ಚೀನಾದ ಆ್ಯಪ್‌ಗಳ ಮೇಲಿನ ನಿಷೇಧದ ಕುರಿತು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ಮಾತನಾಡಿ, ಸುಳ್ಳು ಮತ್ತು ನಕಲಿ ಮಾಹಿತಿ ಹರಡುವುದನ್ನು ತಡೆಯಲು ಚೀನಾದ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ಚೀನಾದ ಆ್ಯಪ್‌ಗಳ ಮೂಲಕ ಸುಲಿಗೆ ಮಾಡಲಾಗುತ್ತಿದ್ದು, ಆ ಸಂಸ್ಥೆಗಳು ಮತ್ತು ವ್ಯಕ್ತಿಗಳು ನಡೆಸುತ್ತಿರುವ ಮೊಬೈಲ್ ಆ್ಯಪ್‌ಗಳ ಮೂಲಕ ಸಾಲ ಪಡೆದವರಿಂದ ಈ ಬಗ್ಗೆ ದೂರುಗಳು ಬಂದಿವೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: Chinese App Ban: ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್‌ಗಳ ನಿಷೇಧ; ಭಾರತ ತುರ್ತು ಕ್ರಮ
ಈ ಮೂಲಕ ಜನರನ್ನು ಸಾಲ ಪಡೆಯಲು ಆಮಿಷ ಒಡ್ಡಲಾಗುತ್ತದೆ ಮತ್ತು ನಂತರ ವಾರ್ಷಿಕವಾಗಿ ಶೇ.3,000 ರಷ್ಟು ಬಡ್ಡಿಯನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಸಾಲ ಪಡೆದವರು ಸಂಪೂರ್ಣ ಸಾಲವನ್ನು ಬಿಟ್ಟು ಬಡ್ಡಿಯನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ, ಈ ಅಪ್ಲಿಕೇಶನ್‌ಗಳನ್ನು ಪ್ರತಿನಿಧಿಸುವ ಜನರು ಸಾಲದ ಸುಳಿಗೆ ಸಿಲುಕಿದ ಜನರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು.
ತೆಲಂಗಾಣ, ಒಡಿಶಾ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಈ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಕೇಳಿದ್ದವು ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ವಿವರಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ