No-Confidence Motion: ಇಂದು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರತಿಪಕ್ಷಗಳ ನಿರ್ಧಾರ

|

Updated on: Jul 26, 2023 | 8:15 AM

ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ವಿಪಕ್ಷಗಳು ಸಿದ್ಧವಾಗಿವೆ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದೆ, ಇಂದು ಲೋಕಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

No-Confidence Motion: ಇಂದು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರತಿಪಕ್ಷಗಳ ನಿರ್ಧಾರ
ಪ್ರತಿಪಕ್ಷಗಳು
Follow us on

ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ವಿಪಕ್ಷಗಳು ಸಿದ್ಧವಾಗಿವೆ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದೆ, ಇಂದು ಲೋಕಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಬೆಳಗ್ಗೆ 10.30ಕ್ಕೆ ಕಾಂಗ್ರೆಸ್ ಸಂಸದೀಯ ಸಭೆ ನಡೆಯಲಿದೆ. ಒಟ್ಟು 26 ಪಕ್ಷಗಳ ಒಕ್ಕೂಟ INDIAದಿಂದ ಅವಿಶ್ವಾಸ ನಿರ್ಣಯ ಮಂಡನೆ ನಡೆಯಲಿದೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿ ಮುಂದುವರೆದಿದೆ. ಬುಧವಾರ ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲಿವೆ ಎಂದು ಅಧೀರ್ ರಂಜನ್ ಚೌಧರಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: Parliament Monsoon Session: ಲೋಕಸಭಾ ಅಧಿವೇಶನವನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಮಣಿಪುರ ಹಿಂಸಾಚಾರ

ಮಣಿಪುರದ ವಿಷಯದಲ್ಲಿ ವಿರೋಧ ಪಕ್ಷಗಳ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಳ್ಳದ ಕಾರಣ ಅವಿಶ್ವಾಸ ನಿರ್ಣಯವನ್ನು ಆಶ್ರಯಿಸದೆ ನಮಗೆ ಬೇರೆ ದಾರಿಯಿಲ್ಲ ಎಂದಿದ್ದಾರೆ. ಭಾರತದ ಪ್ರಧಾನ ಮಂತ್ರಿಯ ಹೊರತಾಗಿ ಅವರು ಸಂಸತ್ತಿನಲ್ಲಿ ನಮ್ಮ ನಾಯಕರೂ ಆಗಿದ್ದಾರೆ, ಆದರೆ ಅವರು ನಮ್ಮ ಬೇಡಿಕೆಯನ್ನು ತಿರಸ್ಕರಿಸುತ್ತಿದ್ದಾರೆ.

ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರಧಾನಿ ಅವರೇ ಉತ್ತರಿಸಬೇಕು ಎಂದು ಪ್ರಮುಖ ಪ್ರತಿಪಕ್ಷಗಳು ವಾದಿಸಿದರೆ. ಈ ಪ್ರಯತ್ನದಿಂದ ನಾವು ನಿರಾಶೆಗೊಂಡಿದ್ದೇವೆ ಮತ್ತು ಬೇರೆ ದಾರಿಯಿಲ್ಲದೆ ನಾವು ಅವಿಶ್ವಾಸ ನಿರ್ಣಯ ಎಂಬ ಸಂಸದೀಯ ಸಾಧನವನ್ನು ಆಶ್ರಯಿಸಬೇಕಾಗಿದೆ ಎಂದರು.

ಮಣಿಪುರದ ಪರಿಸ್ಥಿತಿ ಕುರಿತ ಚರ್ಚೆಗೆ ಕೇಂದ್ರ ಗೃಹ ಸಚಿವರೇ ಉತ್ತರ ನೀಡಲಿದ್ದಾರೆ ಎಂದು ಸರ್ಕಾರ ಪಟ್ಟು ಹಿಡಿದಿದೆ. ಅದೇ ವೇಳೆ, ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಉತ್ತರಿಸಬೇಕು ಎಂದು ವಿರೋಧ ಪಕ್ಷಗಳು ಸ್ಪಷ್ಟವಾಗಿ ಹೇಳಿವೆ.

ಅವಿಶ್ವಾಸ ನಿರ್ಣಯದ ಭವಿಷ್ಯವು ಈಗಾಗಲೇ ನಿರ್ಧಾರವಾಗಿದೆ ಏಕೆಂದರೆ ಸಂಖ್ಯೆಗಳು ಸ್ಪಷ್ಟವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಪರವಾಗಿವೆ ಮತ್ತು ವಿರೋಧ ಗುಂಪು ಕೆಳಮನೆಯಲ್ಲಿ 150 ಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ