Sign In

By signing in or creating an account, you agree with Associated Broadcasting Company's Terms & Conditions and Privacy Policy.

Gurugram Crime: ಡೇಟಿಂಗ್ ಆ್ಯಪ್​ನಲ್ಲಿ ಭೇಟಿ, ಹೋಟೆಲ್​ಗೆ ಕರೆಸಿಕೊಂಡು ಯುವತಿ ಮೇಲೆ ಇಬ್ಬರಿಂದ ಅತ್ಯಾಚಾರ

ಡೇಟಿಂಗ್ ಆ್ಯಪ್​ನಲ್ಲಿ ಭೇಟಿಯಾದ ವ್ಯಕ್ತಿಯು ಯುವತಿಯೊಬ್ಬಳನ್ನು ಹೋಟೆಲ್​ಗೆ ಕರೆಸಿಕೊಂಡು ಅತ್ಯಾಚಾರವೆಸಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

Gurugram Crime: ಡೇಟಿಂಗ್ ಆ್ಯಪ್​ನಲ್ಲಿ ಭೇಟಿ, ಹೋಟೆಲ್​ಗೆ ಕರೆಸಿಕೊಂಡು ಯುವತಿ ಮೇಲೆ ಇಬ್ಬರಿಂದ ಅತ್ಯಾಚಾರ
ಪೊಲೀಸ್Image Credit source: NDTV
Follow us
ನಯನಾ ರಾಜೀವ್
|

Updated on:Jul 26, 2023 | 9:38 AM

ಗುರುಗ್ರಾಮ, ಜುಲೈ 26: ಡೇಟಿಂಗ್ ಆ್ಯಪ್​ನಲ್ಲಿ ಭೇಟಿಯಾದ ವ್ಯಕ್ತಿಯು ಯುವತಿಯೊಬ್ಬಳನ್ನು ಹೋಟೆಲ್​ಗೆ ಕರೆಸಿಕೊಂಡು ಅತ್ಯಾಚಾರವೆಸಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಯುವತಿಯನ್ನು ಭೇಟಿ ಮಾಡಬೇಕೆಂದು ಹೋಟೆಲ್​ಗೆ ಕರೆಸಿಕೊಂಡ ವ್ಯಕ್ತಿಯು ಆತನ ಸ್ನೇಹಿತ ಜತೆ ಸೇರಿ ಅತ್ಯಾಚಾರವೆಸಗಿದ್ದಾನೆ.

ಮಹಿಳೆಯ ದೂರಿನ ಪ್ರಕಾರ, ಆಕೆ ಡೇಟಿಂಗ್ ಆ್ಯಪ್ ಮೂಲಕ ಆರೋಪಿಯನ್ನು ಭೇಟಿಯಾಗಿದ್ದಳು, ನಂತರ ಜೂನ್ 29 ರಂದು ಆಕೆಯನ್ನು ಆಹ್ವಾನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ಹೋಟೆಲ್ ತಲುಪಿದಾಗ, ಆತ ಏನೋ ತಿನ್ನಲು ಕೊಟ್ಟಿದ್ದ ಅದರಿಂದ ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಇದರ ಲಾಭ ಪಡೆದು ನನ್ನ ಮೇಲೆ ಅತ್ಯಾಚಾರವೆಸಗಿ ಕೃತ್ಯದ ವಿಡಿಯೋ ಕೂಡ ಮಾಡಿದ್ದಾರೆ. ಪ್ರಜ್ಞೆ ಬಂದ ನಂತರ ಆರೋಪಿಗಳು ಆಕೆಯ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೇಗೋ ಕಷ್ಟಪಟ್ಟು ಮನೆಗೆ ಮರಳಿದೆ ಈಗ ಪೊಲೀಸ್​ ಠಾಣೆಗೆ ಬಂದಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ.

ಮತ್ತಷ್ಟು ಓದಿ: Bengaluru News: ಹೆಣ್ಣು ಹುಡುಕಿಕೊಡುವುದಾಗಿ ವಂಚನೆ, ಹುಡುಗಿ ಇಲ್ಲ ಹಣವೂ ಕೊಡದೇ ಮೋಸ

ಸೆಕ್ಟರ್ 50 ಪೊಲೀಸ್ ಠಾಣೆಯಲ್ಲಿ ಇಬ್ಬರು ಅಪರಿಚಿತ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಪ್ರವೀಣ್ ಮಲಿಕ್ ಹೇಳಿದ್ದಾರೆ, ಈ ಕುರಿತು ತನಿಖೆ ನಡೆಯುತ್ತಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:54 am, Wed, 26 July 23