AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಹೆಣ್ಣು ಹುಡುಕಿಕೊಡುವುದಾಗಿ ವಂಚನೆ, ಹುಡುಗಿ ಇಲ್ಲ ಹಣವೂ ಕೊಡದೇ ಮೋಸ

ಮದುವೆ ಆಗಲು ಹೆಣ್ಣು ಹುಡುಕಿಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿದವನ ವಿರುದ್ಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣ ನೀಡಿ ಮೋಸ ಹೋದ ರವಿಚಂದ್ರನ್ ದೂರು ದಾಖಲಿಸಿದ್ದಾರೆ.

Bengaluru News: ಹೆಣ್ಣು ಹುಡುಕಿಕೊಡುವುದಾಗಿ ವಂಚನೆ, ಹುಡುಗಿ ಇಲ್ಲ ಹಣವೂ ಕೊಡದೇ ಮೋಸ
ಸಾಂದರ್ಭಿಕ ಚಿತ್ರ
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Jul 25, 2023 | 7:14 AM

ಬೆಂಗಳೂರು, ಜುಲೈ 25: ಮದುವೆ(Marriage) ವಯಸ್ಸು ಆಗುತ್ತಿದ್ದಂತೆ ಮ್ಯಾಟ್ರಿಮೋನಿಯಲ್ಲಿ(Matrimony) ಖಾತೆ ತೆರೆದು ಸಂಗಾತಿ ಹುಡುಕುವುದು ಈಗ ಸಾಮಾನ್ಯ ಸಂಗತಿ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ವಂಚಕರು(Cheating) ಅಮಾಯಕರ ಮೇಲೆ ಕಣ್ಣಿಟ್ಟಿರುತ್ತಾರೆ. ಸಮಯ ಸಿಕ್ಕಿದ ತಕ್ಷಣ ಬಲೆ ಬೀಸಿ ವಂಚಿಸುತ್ತಾರೆ. ಮದುವೆ ಆಗಲು ಹೆಣ್ಣು ಹುಡುಕಿಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿದವನ ವಿರುದ್ಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಧಾಕರ್ ಅಲಿಯಾಸ್ ವೆಂಕಟಾಚಾರಿ ಎಂಬ ವ್ಯಕ್ತಿ ತಾನು ಬ್ರಾಹ್ಮಣ ವೇದಿಕೆ ಟ್ರಸ್ಟ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ನಂಬಿಸಿ ರವಿಚಂದ್ರನ್ ಎಂಬುವವರಿಗೆ ವಂಚಿಸಿದ್ದಾನೆ.

ರವಿಚಂದ್ರನ್ ಎಂಬುವವರು ತಮ್ಮ ಪುತ್ರ ಚಂದ್ರಶೇಖರ್​ಗೆ ಮ್ಯಾಟ್ರಿಮೋನಿಯಲ್ಲಿ ಹೆಣ್ಣು ಹುಡುಕುತ್ತಿದ್ದರು. ಈ ವೇಳೆ ಫೋನ್ ಕರೆ ಮೂಲಕ ಪರಿಚಯವಾದ ಆರೋಪಿ ಸುಧಾಕರ್, ತಾನು ಬ್ರಾಹ್ಮಣ ವೇದಿಕೆ ಟ್ರಸ್ಟ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ ನಿಮ್ಮ ಪುತ್ರನಿಗೆ ಸೂಕ್ತ ಹೆಣ್ಣು ಹುಡುಕಿಕೊಡುತ್ತೇನೆ ಎಂದು ಹಂತಹಂತವಾಗಿ 86 ಸಾವಿರ ರೂಪಾಯಿ ಪಡೆದು ವಂಚಿಸಿದ್ದಾನೆ. ನಂತರ ಹೆಣ್ಣು ತೋರಿಸದೆ, ಹಣವನ್ನೂ ಹಿಂದಿರುಗಿಸದೆ ಸುಧಾಕರ್​ ಪರಾರಿಯಾಗಿದ್ದಾನೆ. ಸದ್ಯ ಈ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಸುಧಾಕರ್ ಅಲಿಯಾಸ್ ವೆಂಕಟಾಚಾರಿ ವಿರುದ್ಧ ರವಿಚಂದ್ರನ್ ಅವರು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕಾರು ಹಾಗೂ ಕ್ಯಾಂಟರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಲೋಕೋಪಯೋಗಿ ಇಲಾಖೆ ಅಧಿಕಾರಿ ಸಾವು

ಸಿಲಿಕಾನ್ ಸಿಟಿಯ ಡ್ರಗ್ ತಯಾರಿಕಾ ಅಡ್ಡೆ ಪತ್ತೆ ಹಚ್ಚಿದ ಖಾಕಿ

ಬೆಂಗಳೂರಿನಲ್ಲಿ ಮಾದಕ ಲೋಕಕ್ಕೆ ಬ್ರೇಕ್ ಇಲ್ಲದಂತಾಗಿದೆ. ಒಂದು ಬಾಗಿಲು ಮುಚ್ಚಿದ್ರೆ ಮತ್ತೊಂದು ಬಾಗಿಲ ಮೂಲಕ ಎಂಟ್ರಿ ಕೊಡೊ ಡ್ರಗ್ ಪೆಡ್ಲರ್ ಗಳು ಡ್ರಗ್ ದಂಧೆಯನ್ನ ಎಗ್ಗಿಲ್ಲದೇ ನಡೆಸುತಿದ್ದಾರೆ. ಇನ್ನು ಇಂತಹದೇ ಡ್ರಗ್ ದಂಧೆಯೊಂದರ ಭೇಟೆಗಿಳಿದ ವಿವಿಪುರಂ ಪೊಲೀಸರು ಡ್ರಗ್ ತಯಾರಿಕಾ ಅಡ್ಡೆ ಪತ್ತೆ ಮಾಡೊದ್ರ ಜೊತೆಗೆ ಬರೊಬ್ಬರಿ 2 ಕೋಟಿ ಮೌಲ್ಯದ ಪರಿಶುದ್ಧ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.

ನೈಜಿರಿಯಾ ಮೂಲದ ಜಾನಿ ವಿಸಾ ಅವಧಿ ಮುಗಿದರೂ ಅಕ್ರಮವಾಗಿ ಉಳಿದುಕೊಂಡಿದ್ದಾನೆ. ಹೀಗಿದ್ದುಕೊಂಡೆ ಡ್ರಗ್ ಲೋಕದ ನಂಟು ಬೆಳಸಿಕೊಂಡ ಈತ ಮಾರಾಟದ ಜೊತೆಗೆ ಡ್ರಗ್ ತಯಾರಿಕೆ ಸಹ ತಿಳಿದಿದ್ದ. ಅದರಂತೆ ಗೋವಾ ಹಾಗೂ ಹೊರಗಡೆಯಿಂದ ಪ್ಯೂರ್ ಎಂಡಿಎಂಎ ತರೆಸಿಕೊಳ್ಳುತಿದ್ದ ಈತ ಅದನ್ನು ಕ್ರಿಸ್ಟಲ್ ಗಳಾಗಿ ಮಾಡಿ ಪಿಲ್ಸ್ ಆಗಿ ತಯಾರಿಸುತಿದ್ದ. ಬಳಿಕ ತನ್ನದೇ ಮಾದರಿಯ ಡ್ರಗ್ ಕುಕ್ ಮಾಡಿ ತನ್ನ ಸಂಪರ್ಕದ ಗ್ರಾಹಕರಿಗೆ ಮಾರಾಟ ಮಾಡುತಿದ್ದ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ