Chikkaballapur News: ಚಿಕ್ಕಬಳ್ಳಾಪುರ: ಗಿಫ್ಟ್ ಪಡೆಯಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಎಂಬಿಎ ಪದವೀಧರೆ!

ಚಿಕ್ಕಬಳ್ಳಾಪುರ ತಾಲ್ಲೂಕು ಮಂಚನಬೆಲೆ ಗ್ರಾಮದ ನಿವಾಸಿ ಎಂಬಿಎ ಪಧವೀಧರೆ ಕುಮಾರಿ ನಯನಾ ಆನ್​ಲೈನ್ ವಂಚನೆಗೆ ಒಳಗಾಗಿ 2,19,603 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

Chikkaballapur News: ಚಿಕ್ಕಬಳ್ಳಾಪುರ: ಗಿಫ್ಟ್ ಪಡೆಯಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಎಂಬಿಎ ಪದವೀಧರೆ!
ಸಾಂದರ್ಭಿಕ ಚಿತ್ರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Ganapathi Sharma

Updated on: Jul 25, 2023 | 9:25 PM

ಚಿಕ್ಕಬಳ್ಳಾಪುರ: ಬಿ.ಇ, ಎಂ.ಬಿ.ಎ ಸೇರಿದಂತೆ ಕೆಲವು ವೃತ್ತಿಪರ ಕೋರ್ಸ್​​​ಗಳ ವಿದ್ಯಾಬ್ಯಾಸ ಮಾಡಿದವರು ವಿದ್ಯಾವಂತರು, ಬುದ್ಧಿವಂತರು, ತರ್ಕಬದ್ದರು ಅನ್ನುವ ನಂಬಿಕೆ ಸಾಮಾನ್ಯ. ಆದರೆ ಇಲ್ಲಿ (Chikkaballapur) ಎಂಬಿಎ ಪದವೀಧರೆಯೊಬ್ಬರು ಉಡುಗೊರೆಯ ಆಸೆಗೆ ಬಿದ್ದು 2,19,603 ರೂಪಾಯಿಗಳನ್ನು ಕಳೆದುಕೊಂಡು (Online Fraud) ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕು ಮಂಚನಬೆಲೆ ಗ್ರಾಮದ ನಿವಾಸಿ ಎಂಬಿಎ ಪಧವೀಧರೆ ಕುಮಾರಿ ನಯನಾ, ಮೋಸ ಹೋಗಿರುವ ಯುವತಿ. ನಯನಾ ಪೋನ್ ನಂಬರ್​​ಗೆ ಕರೆ ಮಾಡಿದ ಸೈಬರ್ ವಂಚಕರು, ತಾವು ರಿಲಯನ್ಸ್ ಎಜಿ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಾರೆ. ನಿಮಗೆ 05 ಗಿಫ್ಟ್​​ಗಳು ಬಂದಿವೆ, ನೀವು ನಿಮಗೆ ಯಾವುದು ಬೇಕೋ ಅದನ್ನು ಸೆಲೆಕ್ಟ್ ಮಾಡಿ ಕಳುಹಿಸಲು ತಿಳಿಸಿದ್ದಾರೆ. ವಂಚಕರ ಮಾತು ನಂಬಿದ ನಯಾನಾ, 05 ಐಟಂ ಗಳನ್ನು ಸೆಲೆಕ್ಟ್ ಮಾಡಿ ಕಳುಹಿಸಿದ್ದಾರೆ. ನಂತರ 9651160917 ಪೋನ್ ನಂಬರ್ ನಿಂದ ಕರೆ ಮಾಡಿದ ವಂಚಕರು ಸೆಲೆಕ್ಟ್ ಮಾಡಿರುವ ಗಿಪ್ಟ್ ಬರಬೇಕಾದರೆ ನೀವು 9863 ರೂ.ಗಳನ್ನು ಕಳುಹಿಸಬೇಕು ಎಂದು ತಿಳಿಸಿದ್ದಾರೆ. ಅವರ ಮಾತು ನಂಬಿದ ನಯನಾ ಗಿಫ್ಟ್​ಗಳಿಗೆಲ್ಲ ಲೆಕ್ಕ ಹಾಕಿ ಒಟ್ಟು 2,19,603 ರೂಪಾಯಿಗಳನ್ನು ವರ್ಗಾಯಿಸಿದ್ದರು. ಕೊನೆಗೆ ಮೋಸು ಹೋಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: Chikkaballapur: ಹೆಂಡತಿ ಮಕ್ಕಳಿದ್ದರೂ ಪಕ್ಕದ ಮನೆಯಾಕೆ ಜೊತೆ ಮದುವೆಗೆ ಪ್ಲಾನ್, ಪ್ರಶ್ನಿಸಿದ ಯುವತಿಯ ತಾಯಿಗೆ ಚಾಕು ಇರಿತ

ಸದ್ಯ ತನಗಾದ ಅನ್ಯಾಯವನ್ನು ಸರಿ ಪಡಿಸಿಕೊಡುವಂತೆ ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಕಲಂ 66(ಸಿ), 66(ಡಿ) ಐಟಿ ಆ್ಯಕ್ಟ್ ಮತ್ತು ಕಲಂ 406, 419, 420 ಐಪಿಸಿ ರೀತ್ಯಾ ಪ್ರಕರಣದ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ