AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ ಖರ್ಜೂರ ಬೆಳೆದು ಭರಪೂರ ಲಾಭ ಕಂಡ ರೈತ! ಉಷ್ಣವಲಯದ ಬೆಳೆ ಬಯಲುಸೀಮೆಯಲ್ಲಿ ಕಮಾಲ್

ಗ್ರಾಮ ಪಂಚಾಯತಿ ಅಧ್ಯಕ್ಷನೋರ್ವ ಎಲ್ಲರೂ ಬೆಳೆಯುವ ಬೆಳೆಯನ್ನು ಹೊರತುಪಡಿಸಿ ಉಷ್ಣವಲಯದಲ್ಲಿ ಮಾತ್ರ ಬೆಳೆಯುವ ಖರ್ಜೂರ ಬೆಳೆಯನ್ನು ಬೆಳೆದು, ಭರಪೂರ ಆದಾಯ ಗಳಿಸುತ್ತಿದ್ದಾನೆ. ಇನ್ನು ಪಕ್ಕದಲ್ಲೆ ಖರ್ಜೂರ ಬೆಳೆದ ಮಾಹಿತಿ ಪಡೆದ ರಾಜಧಾನಿ ಬೆಂಗಳೂರಿನ ಜನ, ಖರ್ಜೂರ ತೋಟಕ್ಕೆ ಆಗಮಿಸಿ ತೋಟದಲ್ಲಿ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಎಲ್ಲಿ ಅಂತೀರಾ? ಇಲ್ಲಿದೆ ನೋಡಿ.

ಚಿಕ್ಕಬಳ್ಳಾಪುರದಲ್ಲಿ ಖರ್ಜೂರ ಬೆಳೆದು ಭರಪೂರ ಲಾಭ ಕಂಡ ರೈತ! ಉಷ್ಣವಲಯದ ಬೆಳೆ ಬಯಲುಸೀಮೆಯಲ್ಲಿ ಕಮಾಲ್
ಖರ್ಜೂರ ಬೆಳೆದು ಭರ್ಜರಿ ಲಾಭ ಗಳಿಸುತ್ತಿರುವ ರೈತ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 26, 2023 | 7:45 AM

Share

ಚಿಕ್ಕಬಳ್ಳಾಪುರ, ಜು.26: ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ಪ್ರಗತಿಪರ ರೈತ ಹಾಗೂ ಸ್ಥಳಿಯ ಹಂಪಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಕೂಡ ಆಗಿರುವ ಲಕ್ಷ್ಮಿನಾರಾಯಣ ಅವರು ಈಗ ಕಲರ್ ಪುಲ್ ಖರ್ಜೂರ(Dates)ಬೆಳೆದು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರೈತ ಲಕ್ಷ್ಮಿನಾರಾಯಣಗೆ 10 ಎಕರೆ ಕೃಷಿ ಜಮೀನು ಇದ್ದು, ಯಾವಾಗಲೂ ಸಂಪ್ರದಾಯ ಬದ್ದ ಬೆಳೆಗಳನ್ನು ಬೆಳೆದು ಕೈ ಸುಟ್ಟುಕೊಂಡಿದ್ರು. ಇದರಿಂದ ಸ್ನೇಹಿತರ ಮಾಹಿತಿಯ ಮೆರೆಗೆ ಈಗ ಉಷ್ಣವಲಯದಲ್ಲಿ ಬೆಳೆಯುವ ಖರ್ಜೂರ ಬೆಳೆದು ಭರಪೂರ ಆದಾಯ ಗಳಿಸುತ್ತಿದ್ದಾರೆ.

ಬರ್ಹಿ ಎಂಬ ಖರ್ಜೂರ ತಳಿ

ಇನ್ನೂ ರೈತ ಲಕ್ಷ್ಮಿನಾರಾಯಣ, ಸದ್ಯಕ್ಕೆ ನಾಲ್ಕು ಎಕರೆ ಪ್ರದೇಶದಲ್ಲಿ ಬರ್ಹಿ ಎನ್ನುವ ಖರ್ಜೂರ ತಳಿಯನ್ನು ಬೆಳೆದಿದ್ದು, ಇದು ನಾಲ್ಕು ವರ್ಷದ ಬೆಳೆಯಾಗಿದೆ. 4 ಎಕರೆಯಲ್ಲಿ 260 ಖರ್ಜೂರ ಗಿಡಗಳಿದ್ದು, ಅದರಲ್ಲಿ ಬಹುತೇಕ ಗಿಡಗಳು ಸದ್ಯಕ್ಕೆ ಖರ್ಜೂರ ಹಣ್ಣು ಬಿಟ್ಟಿವೆ. ಇನ್ನು ಇದನ್ನು ಬೆಳೆಯಲು ವಿಶೇಷವಾದ ತಂತ್ರಜ್ಞಾನವನ್ನೇನು ಅಳವಡಿಸಿಲ್ಲ. ನೀರನ್ನು ಕಡಿಮೆ ಪ್ರಮಾಣದಲ್ಲಿ ಬಿಟ್ಟು, ಉತ್ತಮ ಬೆಳೆಯನ್ನ ಬೆಳೆದಿದ್ದಾರೆ. ಜೊತೆಗೆ ರೈತ ತಾನು ಬೆಳೆದ ಖರ್ಜೂರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ತೆಗೆದು ಹರಿಬಿಟ್ಟಿದ್ದು, ಫೋಟೋ ನೋಡಿ ಮಾರು ಹೋಗಿರುವ ಸ್ಥಳಿಯರು ಹಾಗೂ ಬೆಂಗಳೂರಿನ ಐಟಿ ಬಿಟಿ ಸಾಪ್ಟವೇರ್ ಇಂಜಿನಿಯರ್​ಗಳು ತೋಟಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಕೆ.ಜಿ ಖರ್ಜೂರಕ್ಕೆ 200ರೂಪಾಯಿ ನೀಡಿ ಖರೀದಿ ಮಾಡುತ್ತಿದ್ದಾರೆ.

ಇದನ್ನೂ ಓದಿ:Mysuru News: ಟೊಮೆಟೊ ಬೆಳೆಯನ್ನು ಕಳ್ಳರಿಂದ ಸಂರಕ್ಷಿಸಲು ತೋಟದಲ್ಲಿ ಸಿಸಿಟಿವಿ ಅಳವಡಿಸಿಕೊಂಡ ಹುಣಸೂರಿನ ರೈತ ಸಹೋದರರು

ಉಷ್ಣವಲಯದಲ್ಲಿ ಹೆರಳವಾಗಿ ಬೆಳೆಯಾಗುವ ಖರ್ಜೂರವನ್ನು ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆಯಲು ಆರಂಭಿಸಿದ್ದಾರೆ. ಇದರಿಂದ ರೈತರಿಗೆ ಕೈ ತುಂಬ ಕಾಸು, ಜೊತೆಗೆ ಸ್ಥಳೀಯವಾಗಿ ಗ್ರಾಹಕರಿಗೆ ಸಿಗುವ ಖರ್ಜೂರ ಹಣ್ಣಿನ್ನ ಸವಿಯುವ ಭಾಗ್ಯ ದೊರೆತಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ