Mysuru News: ಟೊಮೆಟೊ ಬೆಳೆಯನ್ನು ಕಳ್ಳರಿಂದ ಸಂರಕ್ಷಿಸಲು ತೋಟದಲ್ಲಿ ಸಿಸಿಟಿವಿ ಅಳವಡಿಸಿಕೊಂಡ ಹುಣಸೂರಿನ ರೈತ ಸಹೋದರರು
ಹೆಚ್ಚಿನ ಬೆಳೆಗಾರರು ರಾತ್ರಿಯೆಲ್ಲ ಟಾರ್ಚ್ ಮತ್ತು ಕೋಲುಗಳನ್ನು ಹಿಡಿದಿಕೊಂಡು ಫಸಲನ್ನು ಕಾಯುತ್ತಿದ್ದಾರೆ.
ಮೈಸೂರು: ಟೊಮೆಟೊಗೆ ಹೊನ್ನಿನ ಬೆಲೆ ಇನ್ನೂ ಮುಂದುವರೆದಿದೆ. ಹಣ್ಣುಗಳ ಇಳುವರಿಗೆ ಬಂಪರ್ ಬೆಲೆ (bumper price) ಸಿಗುತ್ತಿರೋದು ಬೆಳೆಗಾರರಲ್ಲಿ ಅಪಾರ ಸಂತಸ ಉಂಟು ಮಾಡಿದ್ದೇನೋ ನಿಜ, ಆದರೆ ಕುಯ್ಲಿಗೆ ಬಂದ ಬೆಳೆಯನ್ನು ಹಗಲು-ರಾತ್ರಿ ಕಾಯುವುದು ಅವರಿಗೆ ತಲೆನೋವು ತಂದಿದೆ. ಟೊಮೆಟೊ ಕಳ್ಳತನದ ಪ್ರಕರಣಗಳು ಹೆಚ್ಚಿತ್ತಿರುವ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ಹೆಚ್ಚಿನ ಬೆಳೆಗಾರರು ರಾತ್ರಿಯೆಲ್ಲ ಟಾರ್ಚ್ ಮತ್ತು ಕೋಲುಗಳನ್ನು ಹಿಡಿದಿಕೊಂಡು ಫಸಲನ್ನು ಕಾಯುತ್ತಿದ್ದಾರೆ. ಜಿಲ್ಲೆಯ ಹುಣಸೂರು ತಾಲ್ಲೂಕಿನ ಕುಪ್ಪೆ ಗ್ರಾಮದ ರೈತ ಸಹೋದರರಾಗಿರುವ ನಾಗೇಶ್ (Nagesh) ಮತ್ತು ಕೃಷ್ಣ (Krishna) ತಮ್ಮ ಮೂರು ಎಕರೆ ಜಮೀನಲ್ಲಿ ಬೆಳೆದಿರುವ ಟೊಮೆಟೊ ಫಸಲನ್ನು ಕಳ್ಳರಿಂದ ಸಂರಕ್ಷಿಸಲು ತೋಟ ಮತ್ತು ತಮ್ಮ ಮನೆಯ ಮುಂದೆ ಸಿಸಿಟಿವಿ ಕೆಮೆರಾಗಳನ್ನು ರೂ. 36,000 ವೆಚ್ಚದಲ್ಲಿ ಅಳವಡಿಸಿಕೊಂಡಿದ್ದಾರೆ. ಅವರ ಜಮೀನಲ್ಲಿ ಕಳ್ಳತನದ ಪ್ರಯತ್ನ ನಡೆದ ಬಳಿಕ ಅವರು ಈ ಪ್ಲ್ಯಾನ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ