ಬರಾಮುಲ್ಲಾ: ಪಾಕಿಸ್ತಾನದೊಂದಿಗೆ (Pakistan) ಯಾವುದೇ ಮಾತುಕತೆ ನಡೆಸುವ ಯೋಜನೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬುಧವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಕಿತ್ತೊಗೆಯುತ್ತದೆ. ಇದನ್ನು ದೇಶದ ಶಾಂತಿಯುತ ಪ್ರದೇಶವನ್ನಾಗಿ ಮಾಡಲಾಗುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಹೆಚ್ಚಳದಿಂದಾಗಿ ಇಲ್ಲಿನ ಯುವಕರಿಗೆ ಕೆಲಸ ಸಿಕ್ಕಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಬರಾಮುಲ್ಲಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ನಾವು ಪಾಕಿಸ್ತಾನ ಜತೆ ಮಾತನಾಡಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ನಾವೇಕೆ ಪಾಕಿಸ್ತಾನ ಜತೆ ಮಾತನಾಡಬೇಕು? ನಾವು ಬರಾಮುಲ್ಲಾದ ಜನರಲ್ಲಿ ಮಾತನಾಡುತ್ತೇವೆ, ನಾವು ಕಾಶ್ಮೀರದ ಜನರಲ್ಲಿ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರಗಳ ಮೇಲೆ ಟೀಕಾ ಪ್ರಹಾರ ನಡೆಸಿದ ಶಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಅವ್ಯವಸ್ಥೆ ಸೃಷ್ಟಿಸಿದ್ದಕ್ಕಾಗಿ ಅಬ್ದುಲ್ಲಾ, ಮುಫ್ತಿ ಮತ್ತು ಗಾಂಧಿ ಕುಟುಂಬವನ್ನು ದೂಷಿಸಬೇಕು ಎಂದು ಹೇಳಿದ್ದಾರೆ.
ಕಳೆದ 70 ವರ್ಷಗಳಲ್ಲಿ ಮುಫ್ತಿ ಮತ್ತು ಅವರ ಸಂಗಡಿಗರು, ಅಬ್ದುಲ್ಲಾ ಮತ್ತು ಅವರ ಮಗ ಇಲ್ಲಿ ಅಧಿಕಾರದಲ್ಲಿದ್ದರು. ಆದರೆ 1 ಲಕ್ಷ ವಸತಿರಹಿತ ಜನರಿಗೆ ಮನೆ ನೀಡಲು ಸಾಧ್ಯವಾಗಿಲ್ಲ, 2014- 2022ರ ಅವಧಿಯಲ್ಲಿ ಮೋದಿಜಿ ಈ 1 ಲಕ್ಷ ಜನರಿಗೆ ವಸತಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಮೋದಿಜೀ ಅವರ ಆಡಳಿತದ ಮಾಡೆಲ್ ಅ ಭಿವೃದ್ಧಿ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತದೆ . ಅದೇ ವೇಳೆ ಗುಪ್ಕಾರ್ ಮಾಡೆಲ್ ಯುವ ಜನಾಂಗದ ಕೈಯಲ್ಲಿ ಕಲ್ಲು ಮತ್ತು ಗನ್ ನೀಡುತ್ತದೆ. ಮೋದಿಯವರ ಮಾಡೆಲ್ಗೂ ಗುಪ್ಕಾರ್ ಮಾಡೆಲ್ಗೂ ತುಂಬಾನೇ ವ್ಯತ್ಯಾಸ ಇದೆ ಎಂದು ಶಾ ಹೇಳಿದ್ದಾರೆ.
ಮೋದಿಜೀ ಅವರ ಆಡಳಿತದ ಮಾಡೆಲ್ಅಭಿವೃದ್ಧಿ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತದೆ . ಅದೇ ವೇಳೆ ಗುಪ್ಕಾರ್ ಮಾಡೆಲ್ ಯುವ ಜನಾಂಗದ ಕೈಯಲ್ಲಿ ಕಲ್ಲು ಮತ್ತು ಗನ್ ನೀಡುತ್ತದೆ. ಮೋದಿಯವರ ಮಾಡೆಲ್ ಗೂ ಗುಪ್ಕಾರ್ ಮಾಡೆಲ್ ಗೂ ತುಂಬಾನೇ ವ್ಯತ್ಯಾಸ ಇದೆ ಎಂದು ಶಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಬಗ್ಗೆ ಮಾತನಾಡಿದ ಗೃಹ ಸಚಿವರು, ಮತದಾರರ ಪಟ್ಟಿಯನ್ನು ಕಂಪೈಲ್ ಮಾಡುವುದನ್ನು ಪೂರ್ಣಗೊಳಿಸಿದ ತಕ್ಷಣ, ಜಮ್ಮು ಮತ್ತು ಕಾಶ್ಮೀರದಲ್ಲಿ “ಸಂಪೂರ್ಣ ಪಾರದರ್ಶಕತೆಯೊಂದಿಗೆ” ಚುನಾವಣೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಶ್ರೀನಗರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಂದು ಅವರು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುವ ಕೊನೆಯ ದಿನವಾಗಿದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಅಮಿತಾ ಶಾ ಅವರದ್ದು ಇದು ಎರಡನೇ ಭೇಟಿಯಾಗಿದೆ.