AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಠಾಕ್ರೆ ಬಣದ ಇಬ್ಬರು ಸಂಸದರು, 5 ಶಾಸಕರು ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆ?

ಮಹಾರಾಷ್ಟ್ರದ ರಾಂತೆಕ್ ಲೋಕಸಭಾ ಸದಸ್ಯರಾಗಿರುವ ತುಮಾನೆ, ಶಿಂಧೆ ಬಣದ ಸಿದ್ಧಾಂತದಲ್ಲಿ ನಂಬಿಕೆ ಇರುವವರು ತಾವೂ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು

ಠಾಕ್ರೆ ಬಣದ ಇಬ್ಬರು ಸಂಸದರು, 5 ಶಾಸಕರು ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆ?
ಏಕನಾಥ್ ಶಿಂಧೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Oct 05, 2022 | 6:35 PM

Share

ಮುಂಬೈ: ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನಾದಿಂದ ಇಬ್ಬರು ಸಂಸದರು ಮತ್ತು ಐವರು ಶಾಸಕರು ಇಂದು (ಬುಧವಾರ) ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನಾ (Shivsena) ಬಣಕ್ಕೆ ಸೇರಲಿದ್ದಾರೆ ಎಂದು ಸಂಸದ ಕೃಪಾಲ್ ತುಮಾನೆ ಹೇಳಿದ್ದಾರೆ. ಮುಂಬೈ ಮತ್ತು ಮರಾಠವಾಡ ಪ್ರದೇಶದ ಸಂಸದರು ಶಿಂಧೆ ಬಣಕ್ಕೆ ಸೇರಲಿದ್ದಾರೆ  ಈ ಬಗ್ಗೆ ಸಂಜೆ ಗೊತ್ತಾಗುತ್ತದೆ ಎಂದು ಎಂದು ತುಮಾನೆ ಹೇಳಿದ್ದಾರೆ. ಮಹಾರಾಷ್ಟ್ರದ ರಾಂತೆಕ್ ಲೋಕಸಭಾ ಸದಸ್ಯರಾಗಿರುವ ತುಮಾನೆ, ಶಿಂಧೆ ಬಣದ ಸಿದ್ಧಾಂತದಲ್ಲಿ ನಂಬಿಕೆ ಇರುವವರು ತಾವೂ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು. ಶಿಂಧೆ ನೇತೃತ್ವದ ಬಣವು ಪ್ರಸ್ತುತ ಮುಖ್ಯಮಂತ್ರಿ ಸೇರಿದಂತೆ 40 ಶಾಸಕರು ಮತ್ತು 12 ಲೋಕಸಭಾ ಸದಸ್ಯರನ್ನು ಹೊಂದಿದ್ದರೆ ಮಾಜಿ ಮುಖ್ಯಮಂತ್ರಿ ಠಾಕ್ರೆ ನೇತೃತ್ವದ ಗುಂಪು 15 ಶಾಸಕರು ಮತ್ತು ಆರು ಲೋಕಸಭಾ ಸದಸ್ಯರನ್ನು ಒಳಗೊಂಡಿದೆ. ಈ ವರ್ಷದ ಜೂನ್‌ನಲ್ಲಿ ಶಿಂಧೆ ಬಣದ ಬಂಡಾಯದ ಮೊದಲು, ಶಿವಸೇನೆಯು ಮಹಾರಾಷ್ಟ್ರದಿಂದ 18 ಮತ್ತು ದಾದ್ರಾ ಮತ್ತು ನಗರ ಹವೇಲಿಯಿಂದ 18 ಲೋಕಸಭಾ ಸದಸ್ಯರನ್ನು ಹೊಂದಿತ್ತು. ಶಿಂಧೆ ಗುಂಪು ಇಂದು ಸಂಜೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಎಂಎಂಆರ್‌ಡಿಎ ಮೈದಾನದಲ್ಲಿ ದಸರಾವನ್ನು ಆಚರಿಸಲಿದೆ, ಆದರೆ ಠಾಕ್ರೆ ಬಣವು 1966 ರಲ್ಲಿ ಶಿವಸೇನೆ ಪ್ರಾರಂಭವಾದಾಗಿನಿಂದ ಮಧ್ಯ ಮುಂಬೈನ ದಾದರ್‌ನಲ್ಲಿರುವ ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ತನ್ನ ರ್ಯಾಲಿಯನ್ನು ನಡೆಸಲಿದೆ.

ಸಾಮಾನ್ಯವಾಗಿ ದಸರಾ ಮೇಳ ನಡೆಯುತ್ತಿರುವ ಶಿವಾಜಿ ಪಾರ್ಕ್​​​ನಲ್ಲೇ ದಸರಾ ಆಚರಣೆ ಮಾಡಲು ಠಾಕ್ರೆ ಬಣಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು. ನಾವು ಬಾಳಾ ಸಾಹೇಬ್ ಅವರ ಬೆಂಬಲಿಗರು ಎಂದು ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರ ದೊಡ್ಡ ಟ್ಯಾಟೂ ಹಾಕಿಕೊಂಡಿದ್ದ ಯುವಕ ಹೇಳಿದ್ದಾರೆ. ನಾವು ವಂಚಕರು ನಡೆಸುತ್ತಿರುವ ರ್ಯಾಲಿಗೆ ಹೋಗಲ್ಲ ಎಂದು ಠಾಕ್ರೆ ಬೆಂಬಲಿಗರು  ಹೇಳಿರುವುದಾಗಿ ಎನ್​​ ​​ಡಿಟಿವಿ ವರದಿ ಮಾಡಿದೆ.

ಆದಾಗ್ಯೂ, ಹಿಂದುತ್ವ ವಿಚಾರಧಾರೆಯನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ದಸರಾ ಆಚರಿಸುವುದಾಗಿ ಶಿಂಧೆ ಬಣ ಹೇಳಿದೆ. ಶಿಂಧೆ ಬಣದ ವೇದಿಕೆ ಮೇಲೆ 51 ಅಡಿ ಉದ್ದದ ಖಡ್ಗ ಇರಿಸಲಾಗಿದೆ ಈ ಬಗ್ಗೆ ಟೀಕೆ ಮಾಡಿದ ಆದಿತ್ಯ ಠಾಕ್ರೆ ಅವರ ರ್ಯಾಲಿ ಬರೀ ಸರ್ಕಸ್ ಎಂದಿದ್ದಾರೆ. ದಸರಾ ಮೇಳ ಬಗ್ಗೆ ಎನ್​​ ​​ಡಿಟಿವಿ ಜತೆ ಮಾತನಾಡಿದ ಶಿಂಧೆ,”ನಮ್ಮ ರ್ಯಾಲಿಗೆ ಶಿವಸೈನಿಕರು ಹೇಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂಬುದನ್ನು ಗಮನಿಸಿದರೆ, ಅವರು ನಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಮತ್ತು ನಮ್ಮ ನಿರ್ದೇಶನವನ್ನು ಒಪ್ಪುತ್ತಾರೆ ಎಂದು ನನಗೆ ಭರವಸೆ ಇದೆ ಎಂದು ಹೇಳಿದ್ದಾರೆ.

5,000 ಕ್ಕೂ ಹೆಚ್ಚು ಬಸ್‌ಗಳು, ವ್ಯಾನ್‌ಗಳು ಮತ್ತು ಕಾರುಗಳು ಮತ್ತು ವಿಶೇಷ ರೈಲು ಬೆಂಬಲಿಗರನ್ನು ಕರೆತರಲಿದೆ ಎಂದು ವರದಿಗಳು ತಿಳಿಸಿವೆ. ಒಂದು ವಾರದ ಹಿಂದೆಯೇ ಸಿದ್ಧತೆಗಳು ಪ್ರಾರಂಭವಾದಾಗಿನಿಂದ ಎರಡೂ ಮೈದಾನಗಳ ಸುತ್ತಲೂ ಪೊಲೀಸರು ಸರ್ಪಗಾವಲು ಹಾಕಿದ್ದಾರೆ.

Published On - 6:33 pm, Wed, 5 October 22