Suvendu Adhikari: ವಿಧಾನಸಭೆಯಿಂದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಅಮಾನತು ತಪ್ಪಿಸಿದ ಮಮತಾ ಬ್ಯಾನರ್ಜಿ

|

Updated on: Feb 14, 2023 | 9:45 AM

ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ(Suvendu Adhikari) ಅಧಿವೇಶನದಿಂದ ಅಮನಾತು ಆಗುವುದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಪ್ಪಿಸಿದ್ದಾರೆ.

Suvendu Adhikari: ವಿಧಾನಸಭೆಯಿಂದ  ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಅಮಾನತು ತಪ್ಪಿಸಿದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Image Credit source: NDTV
Follow us on

ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ(Suvendu Adhikari) ಅಧಿವೇಶನದಿಂದ ಅಮನಾತು ಆಗುವುದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಪ್ಪಿಸಿದ್ದಾರೆ. ಸುವೇಂದು ಅವರು ವಿಧಾನಸಭಾಧ್ಯಕ್ಷರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕುರಿತು ಮಾತನಾಡಿದ ಮಮತಾ ಬ್ಯಾನರ್ಜಿ, ವಿರೋಧ ಪಕ್ಷದ ನಾಯಕರ ವರ್ತನೆ ನಾಚಿಕೆಗೇಡಿನ ಸಂಗತಿ, ಎಲ್ಲಾ ಕಡೆಯೂ ಸಭೇಂದು ಅಂತಃ ಭಾಷೆಯನ್ನೇ ಬಳಕೆ ಮಾಡುತ್ತಾರೆ ಎಂದು ದೂರಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಧ್ಯಸ್ಥಿಕೆಯಿಂದ ಸುವೇಂದು ಅಧಿಕಾರಿ ಅಮಾನತು ತಡೆಯಲಾಯಿತು. ವಿರೋಧ ಪಕ್ಷದ ನಾಯಕರ ನಡವಳಿಕೆ ಎಷ್ಟು ನಾಚಿಕೆಗೇಡಿನ ಸಂಗತಿ, ಅವರು ನಮ್ಮ ವಿರುದ್ಧವೂ ಕೂಡ ಇಂತಹ ಭಾಷೆಯನ್ನೇ ಪ್ರಯೋಗ ಮಾಡುತ್ತಾರೆ, ಅವರ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ, ದಯವಿಟ್ಟು ಅವರನ್ನು ಕ್ಷಮಿಸಿ ಎಂದು ಮಮತಾ ಕೇಳಿಕೊಂಡರು.

ಮತ್ತಷ್ಟು ಓದಿ: Tripura Elections: ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ, ಮಮತಾ ಬ್ಯಾನರ್ಜಿ ತ್ರಿಪುರಾಗೆ ಭೇಟಿ

ಸುವೇಂದು ಅಧಿಕಾರಿ ವಾಸ್ತವವಾಗಿ ನಿಧಿ ದುರುಪಯೋಗ ಮತ್ತು ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ಮಾಡಿದ್ದರು. ತೃಣಮೂಲ ಕಾಂಗ್ರೆಸ್ ಶಾಸಕ ತಪಸ್ ರಾಯ್ ಅವರು ಸುವೇಂದು ಅಧಿಕಾರಿಯನ್ನು ಫೆಬ್ರವರಿ 20 ರವರೆಗೆ ಸದನದಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ವಿಶೇಷ ಹಕ್ಕು ಉಲ್ಲಂಘನೆಯ ಪ್ರಸ್ತಾಪವನ್ನು ಮಂಡಿಸಿದರು.

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಹಗರಣ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ನಾಯಕರು ಮತ್ತು ಸಚಿವರ ಬಂಧನ ಸೇರಿದಂತೆ ಹಲವು ಹಗರಣಗಳನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿಲ್ಲ ಎಂದು ಸುವೇಂದು ಅಧಿಕಾರಿ ಹೇಳಿದರು.