ಮಂಗಾಟ: ವೃದ್ಧ ವಿಧವೆಯ 25 ಸಾವಿರ ಹಣ, ಒಡವೆ ಹೊತ್ತೊಯ್ದ ಕಪಿ ಸೈನ್ಯ!

| Updated By: ಸಾಧು ಶ್ರೀನಾಥ್​

Updated on: Aug 19, 2020 | 12:28 PM

ಚೆನ್ನೈ: ಕೋತಿಗಳ ದಂಡೊಂದು ವೃದ್ಧ ವಿಧವೆಯೊಬ್ಬರ ಮನೆಗೆ ನುಗ್ಗಿ ನಗದು ಮತ್ತು ಒಡವೆ ಹೊತ್ತೊಯ್ದಿರುವ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಾಯೂರಿನಲ್ಲಿ ಬೆಳಕಿಗೆ ಬಂದಿದೆ. ಕಳೆದ ಮಂಗಳವಾರ 70 ವರ್ಷದ ವೃದ್ಧ ವಿಧವೆ ಶಾರದಮ್ಮಾಳ್​ ತಮ್ಮ ಗುಡಿಸಲಿನ ಮುಂದೆ ಬಟ್ಟೆ ಒಗೆಯುವಾಗ ಕೋತಿಗಳ ದಂಡೊಂದು ಗುಡಿಸಲಿಗೆ ಲಗ್ಗೆಯಿಟ್ಟು ಮನೆಯಲ್ಲಿದ್ದ ಬಾಳೆಹಣ್ಣು ಹಾಗೂ ಅಕ್ಕಿ ಮೂಟೆಯೊಂದನ್ನು ಹೊತ್ತೊಯ್ದಿದ್ದವು. ವೃದ್ಧೆಯ ದುರಾದೃಷ್ಟಕ್ಕೆ ಹಲವೆಡೆ ಕೂಲಿನಾಲಿ ಮಾಡಿ ಬಂದ ಹಣದಲ್ಲಿ ಅಲ್ಪಸ್ವಲ್ಪ ಮೊತ್ತವನ್ನ ಅದೇ ಅಕ್ಕಿ ಮೂಟೆಯಲ್ಲಿ ಕೂಡಿಟ್ಟಿದ್ದರಂತೆ. ಹೀಗಾಗಿ, ಮಂಗಗಳು […]

ಮಂಗಾಟ: ವೃದ್ಧ ವಿಧವೆಯ 25 ಸಾವಿರ ಹಣ, ಒಡವೆ ಹೊತ್ತೊಯ್ದ ಕಪಿ ಸೈನ್ಯ!
Follow us on

ಚೆನ್ನೈ: ಕೋತಿಗಳ ದಂಡೊಂದು ವೃದ್ಧ ವಿಧವೆಯೊಬ್ಬರ ಮನೆಗೆ ನುಗ್ಗಿ ನಗದು ಮತ್ತು ಒಡವೆ ಹೊತ್ತೊಯ್ದಿರುವ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಾಯೂರಿನಲ್ಲಿ ಬೆಳಕಿಗೆ ಬಂದಿದೆ.

ಕಳೆದ ಮಂಗಳವಾರ 70 ವರ್ಷದ ವೃದ್ಧ ವಿಧವೆ ಶಾರದಮ್ಮಾಳ್​ ತಮ್ಮ ಗುಡಿಸಲಿನ ಮುಂದೆ ಬಟ್ಟೆ ಒಗೆಯುವಾಗ ಕೋತಿಗಳ ದಂಡೊಂದು ಗುಡಿಸಲಿಗೆ ಲಗ್ಗೆಯಿಟ್ಟು ಮನೆಯಲ್ಲಿದ್ದ ಬಾಳೆಹಣ್ಣು ಹಾಗೂ ಅಕ್ಕಿ ಮೂಟೆಯೊಂದನ್ನು ಹೊತ್ತೊಯ್ದಿದ್ದವು. ವೃದ್ಧೆಯ ದುರಾದೃಷ್ಟಕ್ಕೆ ಹಲವೆಡೆ ಕೂಲಿನಾಲಿ ಮಾಡಿ ಬಂದ ಹಣದಲ್ಲಿ ಅಲ್ಪಸ್ವಲ್ಪ ಮೊತ್ತವನ್ನ ಅದೇ ಅಕ್ಕಿ ಮೂಟೆಯಲ್ಲಿ ಕೂಡಿಟ್ಟಿದ್ದರಂತೆ. ಹೀಗಾಗಿ, ಮಂಗಗಳು ಅದ್ನೂ ಸಹ ಹೊತ್ತೊಯ್ದಿವೆ .

ಎಷ್ಟೇ ಹುಡುಕಿದ್ರೂ ನಗದು ಮತ್ತು ಒಡವೆ ಸಿಗಲಿಲ್ಲ
ಕೋತಿಗಳು ಮೂಟೆಯನ್ನ ಕಸಿದುಕೊಂಡು ಹೋಗೋದನ್ನ ಕಂಡ ಶಾರದಮ್ಮಾಳ್ ಕೂಡಲೇ ಸಹಾಯಕ್ಕಾಗಿ ಮೊರೆಯಿಟ್ಟಳು. ಈ ವೇಳೆಗೆ ಮಂಗಗಳು ಅಲ್ಲೇ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಕೂತು ಅಕ್ಕಿ ಮತ್ತು ಬಾಳೆಹಣ್ಣನ್ನು ತಿನ್ನೋಕೆ ಶುರುಮಾಡಿದ್ವು. ಮಂಗಗಳನ್ನ ಓಡಿಸಲು ಸ್ಥಳೀಯರು ಯತ್ನಿಸಿದಾಗ ಅಲ್ಲಿಂದ ಕಾಲ್ಕಿತ್ತ ಕೋತಿಗಳು ಮೂಟೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಪಲಾಯನ ಮಾಡಿವೆ. ಎಷ್ಟೇ ಹುಡುಕಿದ್ರೂ ವೃದ್ಧೆಗೆ ಮೂಟೆಯೊಳಗಿದ್ದ ನಗದು ಮತ್ತು ಒಡವೆಗಳಿದ್ದ ಬ್ಯಾಗ್​ ಪತ್ತೆಯಾಗಲೇ ಇಲ್ಲ.

ಇತರರ ಜಮೀನಿನಲ್ಲಿ ಕೂಲಿ ಮಾಡಿ ಹಾಗೂ MGNREGA ಉದ್ಯೋಗ ಖಾತ್ರಿ ಯೋಜನೆಯಡಿ ಬಂದ ಹಣವನ್ನ ಕೂಡಿಟ್ಟಿದ್ದ ಸರತಂಬಾಳ್​ ಇದೀಗ ತಮ್ಮೆಲ್ಲಾ ಉಳಿತಾಯವನ್ನು ಕಳೆದುಕೊಂಡಿದ್ದಾರೆ. ಇನ್ನು ಬದುಕು ಸಾಗಿಸಲು ವೃದ್ಧ ವಿಧವೆಯು ಪಡಬೇಕಾದ ಪಾಡು ಆ ದೇವರೇ ಬಲ್ಲ.