ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಮೃತಪಟ್ಟ ಗಂಡನಿಗೆ (Father) ಪತ್ನಿ (Mother) ಮನೆಯಲ್ಲಿಯೇ ಅಂತ್ಯಸಂಸ್ಕಾರ (Last rites) ಮಾಡಿ, ಕೈತೊಳದುಕೊಂಡಿದ್ದಾರೆ. ಅವರದು ಅವಿದ್ಯಾವಂತ ಕುಟುಂಬ ಎಂದೇನೂ ಅಲ್ಲ.. ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದ ಕುಟುಂಬವದು. ವಿವರಕ್ಕೆ ಹೋಗುವುದಾದರೆ.. ಕರ್ನೂಲ್ ಜಿಲ್ಲೆಯ ಪಟಿಕೊಂಡ ಪಟ್ಟಣದ ಪೋತುಗಂಟಿ ಹರಿಕೃಷ್ಣ ಪ್ರಸಾದ್ ಮತ್ತು ಲಲಿತಾ ದಂಪತಿ ಜೀವನ ಸಾಗಿಸುತ್ತಿದ್ದಾರೆ. ಹರಿಕೃಷ್ಣ ಪ್ರಸಾದ್ ಮೆಡಿಕಲ್ ಶಾಪ್ ನಡೆಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಕರ್ನೂಲಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕಿರಿಯ ಮಗ ಕೆನಡಾದಲ್ಲಿ ನೆಲೆಸಿದ್ದಾನೆ! (Horrifying News)
ಹೀಗಿರುವ ಕುಟುಂಬದಲ್ಲಿ ಅಕ್ಷರಶಃ ಹೊಗೆಯಾಡಿದೆ! ಇಂದು ಬೆಳಗ್ಗೆ ಹರಿಕೃಷ್ಣ ಪ್ರಸಾದ್ ಅವರ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಾಲೋನಿ ನಿವಾಸಿಗಳು ಗಮನಿಸಿದ್ದಾರೆ. ಮಾಹಿತಿ ಪಡೆದ ಸ್ಥಳೀಯ ಪೊಲೀಸರು, ಎಎಸ್‌ಐ ವೆಂಕಟೇಶ್ವರಲು ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಮೃತನ ಪತ್ನಿ ಲಲಿತಾ ಅವರನ್ನು ವಿಚಾರಣೆಗೊಳಪಡಿಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿವೆ. ಸೋಮವಾರ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಇಬ್ಬರು ಪುತ್ರರು ಸರಿಯಾಗಿ ಆರೈಕೆ ಮಾಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಅಲ್ಲದೆ, ಪುತ್ರರಿಬ್ಬರೂ ಆಸ್ತಿಗಾಗಿಯೇ ತಮ್ಮ ಬಳಿ ಬರುತ್ತಿದ್ದರು. ತಂದೆಯ ಸಾವಿನ ವಿಚಾರ ತಿಳಿದರೆ ಇಬ್ಬರು ಪುತ್ರರು ಬಂದು ಆಸ್ತಿ ವಿಚಾರದಲ್ಲಿ ಜಗಳ ಮಾಡುತ್ತಾರೆ ಎಂಬ ಆತಂಕ, ಭಯದಿಂದ ರಟ್ಟಿನ ಡಬ್ಬಿಗಳನ್ನು ಹಾಕಿ ಪತಿಯ ದೇಹಕ್ಕೆ ಬೆಂಕಿ ಹಚ್ಚಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಪೊಲೀಸರು ಕೂಡ ಮ್ಲಾನವದನರಾಗಿದ್ದಾರೆ. ಆಘಾತಗೊಂಡಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:57 pm, Mon, 29 May 23