ದೆಹಲಿ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸದಿದ್ದರೆ ಮುಂದಿನ ಸಭೆಗಳಿಗೆ ಹಾಜರಾಗಲ್ಲ: ಎಎಪಿ
ಬಿಹಾರದ ಪಾಟ್ನಾದಲ್ಲಿ ವಿಪಕ್ಷಗಳ ಸಭೆ ನಡೆದ ನಂತರ ವಿಪಕ್ಷ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದರು. ವಿಪಕ್ಷಗಳ ಈ ಸಭೆಯಲ್ಲೇ ಕಾಂಗ್ರೆಸ್ ಮತ್ತು ಎಎಪಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಇದರ ನಂತರ ಪಕ್ಷದ ಹೇಳಿಕೆ ನೀಡಿದೆ ಎಂದು ಮೂಲಗಳು ಹೇಳಿವೆ.
ದೆಹಲಿ: ಪಾಟ್ನಾದಲ್ಲಿ (Patna) ನಡೆದ 16 ಪಕ್ಷಗಳ ಸಭೆಯ ನಂತರ ಒಗ್ಗಟ್ಟಿನ ಕುರಿತು ಪ್ರತಿಪಕ್ಷಗಳ ಪತ್ರಿಕಾಗೋಷ್ಠಿ ನಡೆಯುತ್ತಿರುವಾಗಲೇ, ಆಮ್ ಆದ್ಮಿ ಪಕ್ಷ (AAP) ಪಟ್ಟು ಹಿಡಿದು ನಿಂತಿದೆ. ದೆಹಲಿ ಸುಗ್ರೀವಾಜ್ಞೆಯನ್ನು (Delhi Ordinances) ಕಾಂಗ್ರೆಸ್ ವಿರೋಧಿಸದಿದ್ದರೆ ಕಾಂಗ್ರೆಸ್ ಅನ್ನು ಒಳಗೊಂಡಿರುವ ಯಾವುದೇ ಪ್ರತಿಪಕ್ಷಗಳ ಸಭೆಗಳ ಭಾಗವಾಗುವುದಿಲ್ಲ ಎಂದು ಎಎಪಿ ಹೇಳಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಎಎಪಿ, ಕಾಂಗ್ರೆಸ್‌ನ ಹಿಂಜರಿಕೆ ಮತ್ತು ಟೀಮ್ ಪ್ಲೇಯರ್ ಆಗಿ ಕಾರ್ಯನಿರ್ವಹಿಸಲು ನಿರಾಕರಿಸುವುದರಿಂದ ಎಎಪಿಯು ಕಾಂಗ್ರೆಸ್ ಅನ್ನು ಒಳಗೊಂಡಿರುವ ಯಾವುದೇ ಮೈತ್ರಿಕೂಟದ ಭಾಗವಾಗಲು ತುಂಬಾ ಕಷ್ಟವಾಗುತ್ತದೆ. ಕಾಂಗ್ರೆಸ್ ಕಪ್ಪು ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಖಂಡಿಸಿ, ರಾಜ್ಯಸಭೆಯಲ್ಲಿ ಅದರ ಎಲ್ಲಾ 31 ರಾಜ್ಯಸಭಾ ಸಂಸದರು ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಾರೆ ಎಂದು ಘೋಷಿಸುವವರೆಗೆ ಕಾಂಗ್ರೆಸ್ ಭಾಗವಹಿಸುವ ಸಮಾನ ಮನಸ್ಕ ಪಕ್ಷಗಳ ಭವಿಷ್ಯದ ಸಭೆಗಳಲ್ಲಿ ನಾವು ಭಾಗವಹಿಸಲ್ಲ ಎಂದಿದೆ ಎಎಪಿ.
ಅದೇ ವೇಳೆ ಕಾಂಗ್ರೆಸ್ ದೆಹಲಿಯ ಜನರೊಂದಿಗೆ ಇದೆಯೇ ಅಥವಾ ಮೋದಿ ಸರ್ಕಾರದೊಂದಿಗಿದೆಯೇ ಎಂಬುದನ್ನು ನಿರ್ಧರಿಸಬೇಕು ಎಂದು ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಹೇಳಿದೆ.
Our statement on the meeting of political parties on June 23, 2023, in Patna.#OppositionMeeting pic.twitter.com/Mb3u1G75Cf
— AAP (@AamAadmiParty) June 23, 2023
ಬಿಹಾರದ ಪಾಟ್ನಾದಲ್ಲಿ ವಿಪಕ್ಷಗಳ ಸಭೆ ನಡೆದ ನಂತರ ವಿಪಕ್ಷ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದರು. ವಿಪಕ್ಷಗಳ ಈ ಸಭೆಯಲ್ಲೇ ಕಾಂಗ್ರೆಸ್ ಮತ್ತು ಎಎಪಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಇದರ ನಂತರ ಪಕ್ಷದ ಹೇಳಿಕೆ ನೀಡಿದೆ ಎಂದು ಮೂಲಗಳು ಹೇಳಿವೆ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸುಗ್ರೀವಾಜ್ಞೆ ವಿಷಯದ ಬಗ್ಗೆ ಕಾಂಗ್ರೆಸ್ ನಿಲುವು ಏನು ಎಂದು ಕೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳಒಪ್ಪಂದವಿಗೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ. ದೆಹಲಿ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸದಿದ್ದರೆ ಮುಂದಿನ ಸಭೆಗಳಿಗೆ ಹಾಜರಾಗಲ್ಲ ಎಂದು ಎಎಪಿ ಮುಖ್ಯ ವಕ್ತಾರ ಪ್ರಿಯಾಂಕಾ ಕಕ್ಕರ್ ಸಭೆ ನಡೆಯುವುದಕ್ಕಿಂತ ಕೆಲವೇ ನಿಮಿಷಗಳ ಮೊದಲು ಎನ್‌ಡಿಟಿವಿಗೆ ಹೇಳಿದ್ದಾರೆ.
ಆದಾಗ್ಯೂ ಸುಗ್ರೀವಾಜ್ಞೆ ವಿಷಯದ ಬಗ್ಗೆ ಖರ್ಗೆ ಅವರಲ್ಲಿ ಕೇಳಿದಾಗ ಇದನ್ನು ವಿರೋಧಿಸುವುದು ಅಥವಾ ಅದನ್ನು ಪ್ರಸ್ತಾಪಿಸುವುದು ಹೊರಗೆ ನಡೆಯುವುದಿಲ್ಲ, ಅದು ಸಂಸತ್ತಿನಲ್ಲಿ ನಡೆಯುತ್ತದೆ. ಸಂಸತ್ತು ಪ್ರಾರಂಭವಾಗುವ ಮೊದಲು, ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಾದ ವಿಷಯಗಳ ಬಗ್ಗೆ ನಿರ್ಧರಿಸುತ್ತವೆ. ಅದು ಅವರಿಗೆ ತಿಳಿದಿದೆ. ಅವರ ನಾಯಕರು ಕೂಡ ನಮ್ಮ ಸರ್ವಪಕ್ಷ ಸಭೆಗಳಿಗೆ ಬರುತ್ತಾರೆ. ಇದರ ಬಗ್ಗೆ ಹೊರಗಡೆ ಏಕೆ ಪ್ರಚಾರವಾಗಿದೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪಾಟ್ನಾದಲ್ಲಿ ವಿಪಕ್ಷಗಳ ಸಭೆ ಅಂತ್ಯ; 2024ರ ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದ ನಾಯಕರು
ಪ್ರತಿಪಕ್ಷಗಳ ಸಭೆ ಕೇವಲ ಫೋಟೋ ಸೆಷನ್
ಜಮ್ಮುವಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಎಷ್ಟೇ ಪಕ್ಷಗಳು ಸಭೆಗೆ ಬಂದರೂ ಅವು ಎಂದಿಗೂ ಒಂದಾಗಲು ಸಾಧ್ಯವಿಲ್ಲ” ಎಂದು ಹೇಳಿದರು. “ಇಂದು ಪಾಟ್ನಾದಲ್ಲಿ ಫೋಟೋ ಸೆಷನ್ ನಡೆಯುತ್ತಿದೆ. ಅವರು (ಪ್ರತಿಪಕ್ಷಗಳು) ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎಗೆ ಸವಾಲು ಹಾಕಲು ಬಯಸುತ್ತಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪ್ರಧಾನಿ ಮೋದಿ ತಮ್ಮ ಸರ್ಕಾರವನ್ನು ರಚಿಸುತ್ತಾರೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ