24 ಗಂಟೆಯಲ್ಲಿ 2.5 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣ; ಭಾರತದ ವಿಶ್ವದಾಖಲೆ ಇದು ಎಂದ ಸಚಿವ ನಿತಿನ್ ಗಡ್ಕರಿ

|

Updated on: Apr 03, 2021 | 2:23 PM

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ನಮ್ಮ ದೇಶ ಅಭೂತಪೂರ್ವವಾಗಿ ಪ್ರಗತಿ ಸಾಧಿಸುತ್ತಿದೆ. 2020-21ರ ವರ್ಷದಲ್ಲಿ ಒಂದು ದಿನಕ್ಕೆ 37 ಕಿ.ಮೀ.ಹೆದ್ದಾರಿ ನಿರ್ಮಿಸಲಾಗುತ್ತಿದೆ ಎಂದು ಸ್ವಲ್ಪ ದಿನಗಳ ಹಿಂದೆ ಕೇಂದ್ರ ಸಾರಿಗೆ ಸಚಿವಾಲಯ ಹೇಳಿತ್ತು.

24 ಗಂಟೆಯಲ್ಲಿ 2.5 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣ; ಭಾರತದ ವಿಶ್ವದಾಖಲೆ ಇದು ಎಂದ ಸಚಿವ ನಿತಿನ್ ಗಡ್ಕರಿ
ನಿತಿನ್​ ಗಡ್ಕರಿ
Follow us on

ಲಖನೌ: 2.5 ಕಿಮೀ ಉದ್ದದ ಚತುಷ್ಪಥ ಕಾಂಕ್ರೀಟ್​ ರಸ್ತೆಯನ್ನು ಕೇವಲ 24 ಗಂಟೆಯಲ್ಲಿ ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದೇವೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸೋಲಾಪುರ- ಬಿಜಾಪುರ ಮಧ್ಯ 25 ಕಿಮೀ ದೂರದ ಡಾಂಬರು ರಸ್ತೆಯನ್ನು ಸಹ 24 ಗಂಟೆಯಲ್ಲಿ ನಿರ್ಮಿಸಲಾಗಿದ್ದು, ಇದೂ ಕೂಡ ವಿಶ್ವದಾಖಲೆ ಹೌದು ಎಂದು ಹೇಳಿದ್ದಾರೆ.

ಲಖನೌನ ಖುರಾಮ್ ನಗರ ಮೇಲ್ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಿ, ತೆಧಿ ಪುಲಿಯಾ ಫ್ಲೈಓವರ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ನಿತಿನ್​ ಗಡ್ಕರಿ, ರಸ್ತೆ ನಿರ್ಮಾಣದಲ್ಲಿ ಭಾರತ ಇದೀಗ ವಿಶ್ವದಾಖಲೆ ಬರೆದಿದೆ. 24 ಗಂಟೆಯಲ್ಲಿ 2.5 ಕಿಮೀ ದೂರದ ಚತುಷ್ಪಥ ರಸ್ತೆ ಹಾಗೂ 25 ಕಿಮೀ ದೂರದ ಏಕಪಥ ರಸ್ತೆ ನಿರ್ಮಿಸಿ ಗಿನ್ನೀಸ್ ದಾಖಲೆ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.

21ನೇ ಶತಮಾನದ ರಾಜಕೀಯ ಅಭಿವೃದ್ಧಿ ಪರ ರಾಜಕೀಯ. ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತದ ನಿರ್ಣಯ ಕೈಗೊಂಡಿದ್ದಾರೆ. ಭಾರತ 5 ಟ್ರಿಲಿಯನ್​ ಆರ್ಥಿಕತೆಯ ಗುರು ತಲುಪುವ ಮಹದೋದ್ದೇಶವನ್ನು ಹೊಂದಲಾಗಿದೆ. ಮುಂದಿನ 5 ವರ್ಷಗಳಲ್ಲಿ 111 ಲಕ್ಷ ಕೋಟಿ ರೂ. ವೆಚ್ಚದ ಮೂಲಸೌಕರ್ಯಗಳನ್ನು ನಿರ್ಮಿಸಬೇಕಾಗಿದ್ದು, ಅದರಲ್ಲಿ ರಸ್ತೆ ವಲಯದ ಜವಾಬ್ದಾರಿ ನನ್ನದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ನಮ್ಮ ದೇಶ ಅಭೂತಪೂರ್ವವಾಗಿ ಪ್ರಗತಿ ಸಾಧಿಸುತ್ತಿದೆ. 2020-21ರ ವರ್ಷದಲ್ಲಿ ಒಂದು ದಿನಕ್ಕೆ 37 ಕಿ.ಮೀ.ಹೆದ್ದಾರಿ ನಿರ್ಮಿಸಲಾಗುತ್ತಿದೆ ಎಂದು ಸ್ವಲ್ಪ ದಿನಗಳ ಹಿಂದೆ ಕೇಂದ್ರ ಸಾರಿಗೆ ಸಚಿವಾಲಯ ಹೇಳಿತ್ತು. ಅಲ್ಲದೆ, 2014ರ ಏಪ್ರಿಲ್​ನಲ್ಲಿ 91,287 ಕಿ.ಮೀ ಇದ್ದ ರಾಷ್ಟ್ರೀಯ ಹೆದ್ದಾರಿಗಳ ಉದ್ದ, 2021ರ ಮಾರ್ಚ್​ 20ರಂದು 1,37,625 ಕಿಮೀಗೆ ಏರಿಕೆಯಾಗಿದೆ. ಅಂದರೆ ಶೇ.50 ರಷ್ಟು ಹೆಚ್ಚಾಗಿದೆ. ಇದೆಲ್ ಸಾಧ್ಯವಾಗಿದ್ದು ಇಡೀ ಇಲಾಖೆಯ, ಅಧಿಕಾರಿಗಳ ತಂಡದ ಶ್ರಮದಿಂದ ಎಂದೂ ಹೇಳಿದೆ.

With the construction of a 2 and Half km 4 lane road India holds world record

 

ಇದನ್ನೂ ಓದಿ:ಹಾರೆ ಹಿಡಿದು ಮಣ್ಣು ಅಗೆದ ಶಾಸಕ ಎಂ.ಪಿ. ರೇಣುಕಾಚಾರ್ಯಗೆ ಕೂಲಿ ಕಾರ್ಮಿಕರಿಂದ ಹೂ ಹಾರ -ಹೂ ಮಳೆ

IPL 2021: ಐಪಿಎಲ್​ನಲ್ಲಿ ಕೊಹ್ಲಿಗೆ ಕಂಟಕವಾಗಲಿದ್ದಾನೆ ಆರ್​ಸಿಬಿಯ ಈ ಮಾಜಿ ಆಟಗಾರ! ಅಂಕಿ- ಅಂಶವೂ ಅದನ್ನೇ ಹೇಳುತ್ತಿದೆ

Published On - 2:15 pm, Sat, 3 April 21