ಕೇರಳದಲ್ಲಿ ಕಾರಿನ ಮೇಲೆ ಬಂಡೆ ಉರುಳಿ ಬಿದ್ದು ಮಹಿಳೆ ಸಾವು

|

Updated on: Aug 14, 2023 | 11:03 AM

ಕೇರಳದ ಗುಡ್ಡಗಾಡು ಪ್ರದೇಶವಾದ ಕುಟ್ಟಿಕ್ಕಾನಂ-ವಲಂಜಗನಂ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಬಂಡೆಯೊಂದು ಬಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಅಪ್ರಾಪ್ತ ಮಕ್ಕಳು ಸೇರಿದಂತೆ ಐವರು ಅಪಘಾತದಲ್ಲಿ ಬದುಕುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿ ಕಾರಿನ ಮೇಲೆ ಬಂಡೆ ಉರುಳಿ ಬಿದ್ದು ಮಹಿಳೆ ಸಾವು
ಪ್ರಾತಿನಿಧಿಕ ಚಿತ್ರ
Follow us on

ಕೇರಳದ ಗುಡ್ಡಗಾಡು ಪ್ರದೇಶವಾದ ಕುಟ್ಟಿಕ್ಕಾನಂ-ವಲಂಜಗನಂ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಬಂಡೆಯೊಂದು ಬಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಅಪ್ರಾಪ್ತ ಮಕ್ಕಳು ಸೇರಿದಂತೆ ಐವರು ಅಪಘಾತದಲ್ಲಿ ಬದುಕುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಡುಕ್ಕಿ ನಿವಾಸಿ ಸೋಮಿನಿ (66) ಅವರು ಮತ್ತೊಂದು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ವಾಹನವನ್ನು ಮಾರ್ಗದಲ್ಲಿ ನಿಲ್ಲಿಸಿದಾಗ ಕೆಸರು ಸಹಿತ ಬಂಡೆಯು ಕಾರಿನ ಮೇಲೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ: Maharashtra: ರಾಯಗಢದಲ್ಲಿ ಭೂಕುಸಿತ, 16 ಸಾವು, ಹಲವು ಮಂದಿಗೆ ಗಾಯ

ಅವರು ಆಹಾರ ಸೇವಿಸಲು ಕಾರನ್ನು ನಿಲ್ಲಿಸಿದಾಗ, ಎಡಭಾಗದಲ್ಲಿ ಸಣ್ಣ ಭೂಕುಸಿತ ಸಂಭವಿಸಿದೆ ಮತ್ತು ಬಂಡೆಯು ಕಾರಿನ ಮೇಲೆ ಬಿದ್ದಿತು. ಇತರರನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿದರು, ಆದರೆ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಕಾರಿನಲ್ಲಿದ್ದವರು ವೀಕೆಂಡ್ ಎಂಜಾಯ್ ಮಾಡಿ ಮನೆಗೆ ಹಿಂದಿರುಗುತ್ತಿದ್ದರು. ಕಾರಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ