Monsoon: ಧುಮ್ಮಿಕ್ಕಿ ಹರಿಯುವ ಜಲಪಾತದ ಜಾರುವ ಬಂಡೆಗಳ ಮೇಲೆ ನಿಂತು ಯುವಕರ ಮೋಜ ಮಸ್ತಿ
ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ಡ್ಯಾಂ, ನದಿ, ಕೆರೆಗಳು ತುಂಬಿ ಹರಿಯುತ್ತಿವೆ. ಸೇತುವೆಗಳು ಮುಳುಗಿ ಜನ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಳೆದುಕೊಂಡಿದ್ದಾರೆ. ಜಲಪಾತಗಳು ಮೈ ತುಂಬಿ ಹರಿಯುತ್ತಿವೆ. ಇಂತಹ ಸಮಯದಲ್ಲಿ ಅನಾಹುತಗಳು ಕೂಡ ಹೆಚ್ಚಾಗಿದ್ದು ಪ್ರವಾಸಿಗರು ಜೀವದ ಹಂಗನ್ನು ತೊರೆದು ಮೋಜು ಮಸ್ತಿಗಿಳಿದಿದ್ದಾರೆ. ಇದು ಭಯ ಹುಟ್ಟಿಸುತ್ತಿದೆ.
Updated on:Jul 25, 2023 | 12:48 PM

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಶ್ರಮಬಿಂದುಸಾಗರ ಬ್ಯಾರೇಜ್ ಮೇಲೆ ನಿಂತು ಯುವಕರು ಸೆಲ್ಫಿ, ರೀಲ್ಸ್ಗಾಗಿ ಮುಗಿಬಿದ್ದಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಪ್ರಾಣದ ಅಪಾಯವನ್ನೂ ಲೆಕ್ಕಿಸದೆ ಹರಿಯುವ ನೀರಿನಲ್ಲಿ ಬೈಕ್ ತೊಳೆಯುತ್ತಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಬಳಿ ಇರುವ ಕೂಡುಗೆ ಫಾಲ್ಸ್ನ ದೃಶ್ಯಗಳಿವು. ಜಾರುವ ಬಂಡೆಗಳ ಮೇಲೆ ನಿಂತು ಪ್ರವಾಸಿಗರು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.

ಧುಮ್ಮುಕ್ಕಿ ಹರಿಯುತ್ತಿರುವ ಜಲಪಾತದ ಬಳಿ ನಿಂತು ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಸ್ವಲ್ಪ ಯಾಮಾರಿದ್ರು ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ.

ಉಡುಪಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು ಸ್ಥಳೀಯರು ಎಚ್ಚರಿಕೆ ನೀಡಿದರೂ ಪ್ರವಾಸಿಗರು ಸಮುದ್ರ ತೀರಕ್ಕೆ ತೆರಳುತ್ತಿದ್ದಾರೆ. ತ್ರಾಸಿ-ಮರವಂತೆ ಬೀಚ್ ಬಳಿ ಯುವಕರು ಸೆಲ್ಫಿಗೆ ಮುಗಿಬಿದ್ದಿದ್ದಾರೆ.

ಪಿಎಸ್‌ಐ ಹರೀಶ್ ಆರ್ ನಾಯ್ಕ್ ಅಪಾಯವನ್ನೂ ಲೆಕ್ಕಿಸದೆ ಮೋಜು ಮಸ್ತಿಯಲ್ಲಿ ಕಳೆದೋದ ಪ್ರವಾಸಿಗರಿಗೆ ಕ್ಲಾಸ್ ತೆಗೆದುಕೊಂಡರು. ಪ್ರವಾಸಿಗರು ಬೀಚ್ಗೆ ಇಳಿಯದಂತೆ ರಿಬ್ಬನ್ ಹಾಗೂ ಸೂಚನಾ ಫಲಕ ಅಳವಡಿಸಲಾಗಿದೆ.
Published On - 12:43 pm, Tue, 25 July 23



















