ಸೋಷಿಯಲ್ ಮೀಡಿಯಾಗಳಲ್ಲಿ ಎಂತೆಂಥಾ ವಿಚಿತ್ರ, ವಿಶಿಷ್ಟ, ವಿಲಕ್ಷಣ ವಿಡಿಯೋಗಳನ್ನು ನೋಡಿರುತ್ತೇವೆ. ಆದರೆ ಈಗ ವೈರಲ್ ಆಗಿರುವ ವಿಡಿಯೋ ಇದೆಲ್ಲಕ್ಕೂ ಮಿಗಿಲಾಗಿದೆ. ವಿಲಕ್ಷಣ ಮಾತ್ರವಲ್ಲ, ಗಲೀಜು ಎನ್ನಿಸುತ್ತದೆ. ಮತ್ತೇನಲ್ಲ.. ಯುವತಿಯೊಬ್ಬಳು ಟಾಯ್ಲೆಟ್ನ ಕಮೋಡ್ನಲ್ಲಿ ಪಾನೀಯವನ್ನು ತಯಾರಿಸಿ, ಪಾರ್ಟಿಗೆ ಬಂದ ಅತಿಥಿಗಳಿಗೆ ನೀಡುವ ವಿಡಿಯೋ ಇದು..!
ಅಸಹ್ಯ ಹುಟ್ಟಿಸುವ ಈ ವಿಡಿಯೋಕ್ಕೆ ಇದೀಗ 6.6 ಮಿಲಿಯನ್ಸ್ಗೂ ಅಧಿಕ ವೀವ್ಸ್ ಬಂದಿದೆ. ವಿಡಿಯೋ ನೋಡಿದ ನೆಟ್ಟಿಗರು ನಿಜಕ್ಕೂ ದಿಗಿಲುಹುಟ್ಟಿಸುವಂತಿದೆ ಎಂದಿದ್ದಾರೆ. ಅಯ್ಯೋ..ಇದನ್ನು ನಂಬಲೇ ಸಾಧ್ಯವಾಗುತ್ತಿಲ್ಲ ಎಂದೂ ಹೇಳಿದವರು ಇದ್ದಾರೆ.
ಯುವತಿ ಮೊದಲು ವೆಸ್ಟರ್ನ್ ಟಾಯ್ಲೆಟ್ ಕಮೋಡ್ನಲ್ಲಿ ಐಸ್ಕ್ರೀಮ್, ಕ್ಯಾಂಡಿಗಳನ್ನು ತುಂಬುತ್ತಾಳೆ. ಅದಾದ ಬಳಿಕ ಫ್ಲಶ್ ಬಾಕ್ಸ್ ತೆರೆದು ಅದರಲ್ಲಿ, ಫಾಂಟಾ, ಸ್ಪಿರಿಟ್, ಫ್ರೂಟ್ ಫ್ರಂಚ್ಗಳನ್ನು ಸುರಿಯುತ್ತಾಳೆ. ನಂತರ ಆಕೆ ಫ್ಲಶ್ ಮಾಡುತ್ತಾಳೆ. ಅಲ್ಲಿಗೆ ಫ್ಲಶ್ ಟ್ಯಾಂಕ್ನಲ್ಲಿದ್ದ ಪಾನೀಯಗಳು, ಕಮೋಡ್ನಲ್ಲಿದ್ದ ಕ್ಯಾಂಡಿ, ಐಸ್ಕ್ರೀಂಗಳ ಜತೆ ಮಿಶ್ರಣಗೊಂಡು ಪಾನೀಯ ಸಿದ್ಧವಾಗುತ್ತದೆ. ಹಾಗೇ, ಆ ನೀರನ್ನು ಆಕೆ ಗ್ಲಾಸ್ಗೆ ಹಾಕುತ್ತಾಳೆ.
ಟ್ವಿಟರ್ನಲ್ಲಿ ಸಿಕ್ಕಾಪಟೆ ವೈರಲ್ ಆಗಿರುವ ಈ ವಿಡಿಯೋ ನೋಡಿದ ಜನರು ಅಸಹ್ಯ ವ್ಯಕ್ತಪಡಿಸಿದ್ದಾರೆ. ಇದು ಗಲೀಜಿನ ಪರಮಾವಧಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
White people need to be STOP pic.twitter.com/vbb85Yk4W5
— Curlyixing (@curlyixing) April 22, 2021