ಪಡಿತರ ನೀಡಿಲ್ಲ ಎಂದು ಮಹಿಳಾ ಅಧಿಕಾರಿ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಜನ

|

Updated on: Jun 25, 2024 | 11:47 AM

ಪಡಿತರ ಕೊಟ್ಟಿಲ್ಲ ಎಂದು ಊರ ಜನ ಮಹಿಳಾ ಅಧಿಕಾರಿಯ ಕುತ್ತಿಗೆಗೆ ಚಪಲಿಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ಪಡಿತರ ನೀಡಿಲ್ಲ ಎಂದು ಮಹಿಳಾ ಅಧಿಕಾರಿ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಜನ
Follow us on

ಪಡಿತರ ನೀಡಿಲ್ಲ ಎನ್ನುವ ಕೋಪದಲ್ಲಿ ಮಹಿಳಾ ಅಧಿಕಾರಿಯ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಕಳೆದ ನಾಲ್ಕು ತಿಂಗಳಿಂದ ಪಡಿತರ ವಿತರಣೆ ಮಾಡಿಲ್ಲ ಎನ್ನುವ ಕೋಪಕ್ಕೆ ಸ್ಥಳೀಯರು ಮಹಿಳಾ ಅಧಿಕಾರಿ ಕುತ್ತಿಗೆಗೆ ಚಪ್ಪಲಿಹಾರ ಹಾಕಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ.

ಗೋಪೋಕಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಧುಬನ್ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಗೋಪೋಕಂದರ್ ಪೊಲೀಸ್ ಠಾಣೆಯ ಉಸ್ತುವಾರಿ ರಂಜಿತ್ ಮಂಡಲ್ ಮಾತನಾಡಿ, ಗ್ರಾಮಸ್ಥರು ತಮ್ಮ ಪ್ರತಿಭಟನೆಯ ಭಾಗವಾಗಿ ಗೋವಿಂದಪುರ-ಸಾಹೇಬ್‌ಗಂಜ್ ರಾಜ್ಯ ಹೆದ್ದಾರಿಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆದಿದ್ದರು.

ಫಲಾನುಭವಿಗಳನ್ನು ಸಮಾಧಾನ ಪಡಿಸಿ ಮಂಗಳವಾರ ಪಡಿತರ ವಿತರಿಸುವುದಾಗಿ ಭರವಸೆ ನೀಡಿ ರಸ್ತೆ ತಡೆ ಹಿಂಪಡೆಯಲಾಯಿತು ಎಂದರು.

ಮತ್ತಷ್ಟು ಓದಿ:ಪೋಕ್ಸೋ ಪ್ರಕರಣದ ಆರೋಪಿಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಸಂತ್ರಸ್ತೆ ಕುಟುಂಬಸ್ಥರು

ಸ್ಥಳೀಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಗೌತಮ್ ಮೋದಿ ಮಾತನಾಡಿ, ವಿತರಕರು ಮೇ ತಿಂಗಳಲ್ಲಿ ಶೇ 60ರಷ್ಟು ಮತ್ತು ಜೂನ್‌ನಲ್ಲಿ ಶೇ 7ರಷ್ಟು ಮಾತ್ರ ಆಹಾರಧಾನ್ಯಗಳನ್ನು ವಿತರಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಜಿಲ್ಲಾ ಸರಬರಾಜು ಅಧಿಕಾರಿ ವಿಶಾಲ್ ಕುಮಾರ್ ಮಾತನಾಡಿ, ಜೂನ್ 25ರಂದು ಪಡಿತರ ವಿತರಣೆ ಮಾಡುವಂತೆ ಬಿಡಿಒಗೆ ಸೂಚಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ