ಹೈದರಾಬಾದ್: ಅಪ್ರಾಪ್ತ ಸೋದರಳಿಯನ ಸಹಾಯದಿಂದ ಪತಿಯನ್ನು ಕೊಂದ ಮಹಿಳೆಗೆ ಜೀವಾವಧಿ ಶಿಕ್ಷೆ

|

Updated on: Jun 20, 2023 | 8:21 PM

ಹೈದರಾಬಾದ್‌ನ ಎಲ್‌ಬಿ ನಗರ ಪ್ರದೇಶದಲ್ಲಿ ಪತಿಯನ್ನು ಕೊಂದ ಪತ್ನಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿ ಮಹಿಳೆಯು ಹದಿಹರೆಯದ ಸೋದರಳಿಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

ಹೈದರಾಬಾದ್: ಅಪ್ರಾಪ್ತ ಸೋದರಳಿಯನ ಸಹಾಯದಿಂದ ಪತಿಯನ್ನು ಕೊಂದ ಮಹಿಳೆಗೆ ಜೀವಾವಧಿ ಶಿಕ್ಷೆ
ಪತಿಯನ್ನು ಹತ್ಯೆ ಮಾಡಿದ ಪತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈದರಾಬಾದ್​ನ ಸ್ಥಳೀಯ ನ್ಯಾಯಾಲಯ
Follow us on

ಹೈದರಾಬಾದ್: ಹದಿಹರೆಯದ ಸೋದರಳಿಯನೊಂದಿಗೆ ಸೇರಿ ತನ್ನ ಪತಿಯನ್ನು ಕೊಲೆ (Murder) ಮಾಡಿದ್ದ ಮಹಿಳೆಗೆ ಸ್ಥಳೀಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಮಹಿಳೆ ಮತ್ತು ಆಕೆ ಅಕ್ರಮ ಸಂಬಂಧ ಹೊಂದಿದ್ದ 16 ವರ್ಷದ ಸೋದರಳಿಯ ಅಂಬರ್‌ಪೇಟ್ ಪ್ರದೇಶದಲ್ಲಿ ಬೈಕ್‌ನಲ್ಲಿ ಶವ ಸಾಗಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.

ಹೈದರಾಬಾದ್‌ನ ಎಲ್‌ಬಿ ನಗರ ಪ್ರದೇಶದ ಮಹಿಳೆಯು 16 ವರ್ಷದ ಸೋದರಳಿಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. 2016ರ ಸೆಪ್ಟೆಂಬರ್ 23 ರಂದು ಇಬ್ಬರು ಜೊತೆಯಾಗಿದ್ದಾಗ ಪತಿಯ ಕೈಗೆ ಸಿಕ್ಕಿಬಿದ್ದರು. ಈ ವೇಳೆ ನಡೆದ ಜಗಳದಲ್ಲಿ ಪತ್ನಿ ತನ್ನ ಪತಿಯನ್ನೇ ಕೊಲೆ ಮಾಡಿದ್ದಳು. ಇದಕ್ಕೆ ಸೋದರಳಿಯನೂ ಸಾಥ್ ನೀಡಿದ್ದನು. ಹತ್ಯೆ ನಂತರ ಶವವನ್ನು ಬೈಕ್​ನಲ್ಲಿ ಸಾಗಿಸುತ್ತಿದ್ದಾಗ ಅಂಬರ್‌ಪೇಟ್ ಪ್ರದೇಶದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ: ಜೊತೆಗಿರುವುದಿಲ್ಲ ಎಂಬ ಕೋಪಕ್ಕೆ ಹೆತ್ತವರನ್ನೇ ಕೊಂದ ಯುವಕ; ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

ಕೊಲೆಯಾದ ಒಂದು ದಿನದ ನಂತರ ಅಂದರೆ ಸೆಪ್ಟೆಂಬರ್ 24 ರ ರಾತ್ರಿ, ಮಹಿಳೆ ಮತ್ತು ಸೋದರಳಿಯ ಜೊತೆಗೂಡಿ ಬೈಕ್‌ನಲ್ಲಿ ಶವವನ್ನು ಎಸೆಯಲು ಪ್ರಯತ್ನಿಸಿದರು, ಆದರೆ ಅಂಬರ್‌ಪೇಟ್ ಪ್ರದೇಶದಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರಂಭದಲ್ಲಿ ಸುಳ್ಳು ಮಾಹಿತಿ ನೀಡಿ ಪರಾರಿಯಾಗಲು ಯತ್ನಿಸಿದಾಗ ಹಿಡಿದ ಪೊಲೀಸರು ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಕೊಲೆ ಬಗ್ಗೆ ಬಾಯಿಬಿಟ್ಟಿದ್ದು, ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆಯಲು ಹೊರಟಿರುವುದಾಗಿ ಹೇಳಿದ್ದಾರೆ.

ಸದ್ಯ 2016ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆರೋಪಿ ಮಹಿಳೆಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದು, ಅಪ್ರಾಪ್ತ ವಯಸ್ಕನ ವಿರುದ್ಧದ ಪ್ರಕರಣ ಇನ್ನೂ ಬಾಲ ನ್ಯಾಯ ಮಂಡಳಿಯ ಮುಂದೆ ವಿಚಾರಣೆಯಲ್ಲಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ