Jagannath Rath Yatra 2023: ಪುರಿಯಲ್ಲಿ ಜಗನ್ನಾಥ ರಥಯಾತ್ರೆ ಆರಂಭ; ಭಕ್ತರಿಗೆ ಶುಭ ಹಾರೈಸಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ

ಪುರಿಯಲ್ಲಿ ಇಂದಿನಿಂದ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಪ್ರಾರಂಭವಾಗಿದೆ. ಭಕ್ತರಿಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

Jagannath Rath Yatra 2023: ಪುರಿಯಲ್ಲಿ ಜಗನ್ನಾಥ ರಥಯಾತ್ರೆ ಆರಂಭ; ಭಕ್ತರಿಗೆ ಶುಭ ಹಾರೈಸಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ
ಸಾಂದರ್ಭಿಕ ಚತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 20, 2023 | 6:59 PM

ಪುರಿಯಲ್ಲಿ ಇಂದಿನಿಂದ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ (Jagannath Rath Yatra 2023) ಪ್ರಾರಂಭವಾಗಿದೆ. ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರಾ ದೇವಿಯನ್ನು ವೈದಿಕ ವಿಧಿವಿಧಾನಗಳ ಮೂಲಕ ಯಾತ್ರೆ ನಡೆಯಲಿದ್ದು, ಅಲ್ಲಿ ಸೇರಿರುವ ಭಕ್ತರು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಪಹಂಡಿ, ದೇವತೆಗಳನ್ನು ರಥಗಳಿಗೆ ಕರೆದೊಯ್ಯುವ ಧಾರ್ಮಿಕ ಮೆರವಣಿಗೆ ಇಂದು ಬೆಳಿಗ್ಗೆ ಪ್ರಾರಂಭವಾಯಿತು. ಭಕ್ತರು ಮೂರ್ತಿಯನ್ನು ಶಾಸ್ತ್ರೋಕ್ತ ಮೆರವಣಿಗೆ ಮೂಲಕ ದೇವಸ್ಥಾನದಿಂದ ಹೊರಗೆ ತಂದು ರಥದಲ್ಲಿ ಕೂರಿಸಿದರು.  ಬಲಭದ್ರ ಮತ್ತು ದೇವಿ ಸುಭದ್ರೆಯ ಯಾತ್ರೆ ನಂತರ ಜಗನ್ನಾಥನ ಯಾತ್ರೆ ನಡೆಯುತ್ತಿದೆ. ಸಂಜೆ 4 ಗಂಟೆ ಸುಮಾರಿಗೆ ಭಕ್ತರು ರಥಗಳನ್ನು ಎಳೆಯಲು ಪ್ರಾರಂಭಿಸಿದ್ದಾರೆ.

ಪುರಿ ದೇವಸ್ಥಾನದಿಂದ ಆರಂಭವಾಗುವ ಯಾತ್ರೆಯು ಸುಮಾರು 3 ಕಿಲೋಮೀಟರ್ ದೂರದವರೆಗೆ ನಡೆದು ಶ್ರೀ ಗುಂಡಿಚಾ ದೇವಸ್ಥಾನದಲ್ಲಿ ಮುಕ್ತಾಯಗೊಳ್ಳಲಿದೆ. ಬಲಭದ್ರ ದೇವರ ತಾಳಧ್ವಜವು ಪುರಿ ಭವ್ಯ ರಸ್ತೆಯಲ್ಲಿ ಸಾಗಲಿದೆ, ಇದರ ಮೊದಲು ಸುಭದ್ರಾದೇವಿಯ ದರ್ಪದಾಳವು ಸಾಗಲಿದೆ. ಮೂರು ರಥಗಳಲ್ಲಿ ದೊಡ್ಡದಾದ ಜಗನ್ನಾಥನ ನಂದಿಘೋಷವು ಎರಡು ರಥಗಳ ನಂತರ ಸಾಗಲಿದೆ. ಸೂರ್ಯಾಸ್ತದ ಮೊದಲು ರಥಗಳು ಗುಂಡಿಚಾ ದೇವಸ್ಥಾನವನ್ನು ತಲುಪಲಿದೆ. ಜಗನ್ನಾಥ ಪುರಿ ದೇವಸ್ಥಾನದ ದೇವರು ಮತ್ತು ದೇವತೆಯನ್ನು ನೋಡಲು ಎಲ್ಲಾ ಧರ್ಮದ ಭಕ್ತರಿಗೆ ಅವಕಾಶವನ್ನು ನೀಡುವ ಏಕೈಕ ದಿನ ಇದ್ದಾಗಿದೆ. ಬೇರೆ ಬೇರೆ ದೇಶಗಳಿಂದಲ್ಲೂ ಭಕ್ತರು ಇಲ್ಲಿಗೆ ಬರುತ್ತಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಥಯಾತ್ರೆಗೆ  ಹಾಗೂ ಭಕ್ತರಿಗೂ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಭಕ್ತಿ ಮತ್ತು ಸಮರ್ಪಣೆಯ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಭಕ್ತರಿಗೆ ಶುಭಾಶಯ ಕೋರಿದ್ದಾರೆ. ಜಗನ್ನಾಥನ ದಿವ್ಯ ಪ್ರಯಾಣವು ಜನರ ಜೀವನದಲ್ಲಿ ಆರೋಗ್ಯ, ಸಂತೋಷ ಮತ್ತು ಆಧ್ಯಾತ್ಮಿಕ ಸಮೃದ್ಧಿಯನ್ನು ತುಂಬಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:Puri Sri Jagannath Rath Yatra 2022: ಪ್ರಖ್ಯಾತ ಭಗವಾನ್ ಜಗನ್ನಾಥ ರಥಯಾತ್ರೆಯ ಭಾವಚಿತ್ರಗಳು ಇಲ್ಲಿವೆ

ಗೃಹ ಸಚಿವ ಅಮಿತ್ ಶಾ ಇಂದು ಅಹಮದಾಬಾದ್‌ನ ಜಗನ್ನಾಥ ದೇವಸ್ಥಾನದಲ್ಲಿ ಮಂಗಳ ಆರತಿಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಪ್ರತಿ ವರ್ಷ ಇಲ್ಲಿನ ದೇವರ ದರ್ಶನದ ಅನುಭವ ದಿವ್ಯ ಮತ್ತು ಅವಿಸ್ಮರಣೀಯ. ಎಲ್ಲರಿಗೂ ಮಹಾಪ್ರಭುಗಳ ಆಶೀರ್ವಾದ ಸಿಗಲಿ ಎಂದು ಹಾರೈಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Tue, 20 June 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್