5 ವರ್ಷಗಳಿಂದ ಬಾಲಕಿಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ್ದ ತಮಿಳುನಾಡು ಚರ್ಚ್‌ನ ಪಾದ್ರಿ ಬಂಧನ
ತಾನು 14ರ ಹರೆಯದವಳಾಗಿದ್ದಾಗ ಕಳೆದ 5 ವರ್ಷಗಳಿಂದ ಚರ್ಚ್‌ಗೆ ಭೇಟಿ ನೀಡಿದಾಗಲೆಲ್ಲ ಪಾದ್ರಿ ಬೆದರಿಕೆಯೊಡ್ಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತೂತುಕುಡಿ: 14 ವರ್ಷದ ಬಾಲಕಿಯಾಗಿದ್ದಾಗ ತನ್ನ ಮೇಲೆ ನಿರಂತರ ಲೈಂಗಿಕ ಕಿರುಕುಳ (sexual harassment )ನೀಡಿದ್ದಾರೆ ಎಂದು ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯ ಕ್ರೈಸ್ತ ಪಾದ್ರಿಯ ವಿರುದ್ಧ ಯುವತಿಯೊಬ್ಬರು ಆರೋಪ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, 2012, (POCSO Act) ಅಡಿಯಲ್ಲಿ ಕದಂಬೂರ್ ಎಲ್ಲಾ ಮಹಿಳಾ ಪೊಲೀಸರು ಪಾದ್ರಿಯನ್ನು ಬಂಧಿಸಿದ್ದಾರೆ.ಚಿನ್ನಾಕುಲಂ ಪ್ರದೇಶದ ಸಮೀಪದ ಕೀಳಕೋಟ್ಟೈ ಚರ್ಚ್‌ನ ಪಾದ್ರಿ ವಿನೋದ್ ಜೋಶ್ವಾ (40) ವಿರುದ್ಧ ದೂರು ದಾಖಲಾಗಿದ್ದು, ಮೊಬೈಲ್ ಫೋನ್‌ಗಳಲ್ಲಿ ವಿಡಿಯೊ ಕರೆಗಳು ಮತ್ತು ಪಠ್ಯ ಸಂದೇಶಗಳ ಮೂಲಕ ಆತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ತಾನು 14ರ ಹರೆಯದವಳಾಗಿದ್ದಾಗ ಕಳೆದ 5 ವರ್ಷಗಳಿಂದ ಚರ್ಚ್‌ಗೆ ಭೇಟಿ ನೀಡಿದಾಗಲೆಲ್ಲ ಪಾದ್ರಿ ಬೆದರಿಕೆಯೊಡ್ಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಷಯವನ್ನು ಯಾರಿಗಾದರೂ ಹೇಳಿದರೆ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.ಇದಕ್ಕೆ ಹೆದರಿ ಭಯಭೀತಳಾದ ಯುವತಿ ತನ್ನ ತಂದೆತಾಯಿಗಳಿಗೆ ಕೂಡಾ ಈ ವಿಷಯ ತಿಳಿಸಿರಲಿಲ್ಲ.
ಇದನ್ನೂ ಓದಿ: ಹೈದರಾಬಾದ್: ಅಪ್ರಾಪ್ತ ಸೋದರಳಿಯನ ಸಹಾಯದಿಂದ ಪತಿಯನ್ನು ಕೊಂದ ಮಹಿಳೆಗೆ ಜೀವಾವಧಿ ಶಿಕ್ಷೆ
ಆದರೆ, ಕಳೆದ ವರ್ಷ ಮದುವೆಯಾದ ನಂತರವೂ ಆತ ಕೆಟ್ಟ್ಟ ಉದ್ದೇಶದಿಂದ ಕರೆ ಮಾಡಿ ಸಂದೇಶ ಕಳುಹಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿನೋದ್ ಕಳೆದ 10 ವರ್ಷಗಳಿಂದ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದು, ಚರ್ಚ್‌ನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಸಹ ನಡೆಸುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:02 pm, Tue, 20 June 23