ಜೊತೆಗಿರುವುದಿಲ್ಲ ಎಂಬ ಕೋಪಕ್ಕೆ ಹೆತ್ತವರನ್ನೇ ಕೊಂದ ಯುವಕ; ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

ಅಯೋವಾದ ಸೀಡರ್ ರಾಪಿಡ್ಸ್‌ನಲ್ಲಿ ತನ್ನ ಹೆತ್ತವರನ್ನು ಕ್ರೂರವಾಗಿ ಕೊಂದ ಹದಿಹರೆಯದ ಎಥಾನ್ ಓರ್ಟನ್‌ಗೆ 50 ವರ್ಷಗಳ ನಂತರ ಪೆರೋಲ್‌ನ ಸಾಧ್ಯತೆಯೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಜೊತೆಗಿರುವುದಿಲ್ಲ ಎಂಬ ಕೋಪಕ್ಕೆ ಹೆತ್ತವರನ್ನೇ ಕೊಂದ ಯುವಕ; ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!
ಈಥೇನ್ ಓರ್ಟನ್
Follow us
|

Updated on: Jun 07, 2023 | 4:28 PM

ಅಮೆರಿಕಾದ ಅಯೋವಾದ (Iowa) ಸೀಡರ್ ರಾಪಿಡ್ಸ್‌ನಲ್ಲಿ ತನ್ನ ಹೆತ್ತವರನ್ನು ಕ್ರೂರವಾಗಿ ಕೊಂದ (Crime) ಹದಿಹರೆಯದ ಈಥೇನ್ ಓರ್ಟನ್‌ಗೆ (Ethan Orton) 50 ವರ್ಷಗಳ ನಂತರ ಪೆರೋಲ್‌ನ ಸಾಧ್ಯತೆಯೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಕ್ಟೋಬರ್ 2021 ರಲ್ಲಿ ಓರ್ಟನ್‌ ತಂದೆ ಕೇಸಿ ಓರ್ಟನ್ ಮತ್ತು ತಾಯಿ ಮಿಸ್ಟಿ ಸ್ಕಾಟ್ ಸ್ಲೇಡ್ ಅವರ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದನು. ಶಿಕ್ಷೆಯ ಸಮಯದಲ್ಲಿ, ಓರ್ಟನ್ ತನ್ನ ಕ್ರೂರ ನಡೆಗೆ ಪಶ್ಚಾತ್ತಾಪವನ್ನು ವ್ಯಕ್ತಪಡಿಸುವುದರ ಜೊತೆಗೆ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದನು.

“ನಾನು ಈ ಹಿಂದೆ ಹತ್ಯೆಯ ನಂತರ ನನ್ನ ಹೆತ್ತವರನ್ನು ಮರಳಿ ಪಡೆಯಲು ಬಯಸಿದ್ದೆ ಆದರೆ ಈಗ ತನ್ನ ಪರಿಸ್ಥಿತಿಯ ವಾಸ್ತವತೆಯನ್ನು ಒಪ್ಪಿಕೊಂಡಿದ್ದೇನೆ” ಎಂದು ಓರ್ಟನ್‌ ಒಪ್ಪಿಕೊಂಡನು.

ಪೋಲೀಸ್ ವರದಿಗಳ ಪ್ರಕಾರ, ಓರ್ಟನ್ ತನ್ನ ಹೆತ್ತವರನ್ನು ಇರಿದಿದ್ದಾನೆ ಮತ್ತು ತಾಯಿ ಇನ್ನೂ ಜೀವಂತವಾಗಿದ್ದಾಳೆಂದು ಗೊತ್ತಾದಾಗ ಅವರನ್ನು ಕೊಲ್ಲಲು ಕೊಡಲಿಯನ್ನು ಬಳಸಿದನು. ಓರ್ಟನ್ ರಕ್ತ ಅಂಟಿದ ಬಟ್ಟೆಯಲ್ಲಿ ಮನೆಯ ಹೊರಗೆ ಬಿದ್ದಿದ್ದನು. ಆ ಸಮಯದಲ್ಲಿ 17 ವರ್ಷ ವಯಸ್ಸಿನವನಾಗಿದ್ದರೂ, ಓರ್ಟನ್ ಅನ್ನು ಬಾಲಾಪರಾಧಿ ಎಂದು ಪರಿಗಣಿಸದೆ ಆರೋಪವನ್ನು ಹೊರಿಸಲಾಯಿತು.

ಫೋರೆನ್ಸಿಕ್ ಮನಶ್ಶಾಸ್ತ್ರಜ್ಞ ಟ್ರೇಸಿ ಥಾಮಸ್ ಅವರು ಓರ್ಟನ್ ಹೆತ್ತವರು ಅವನನ್ನು ತಿರಸ್ಕರಿದ್ದರು ಆದರೆ ಓರ್ಟನ್ ಹೆತ್ತವರಿಂದ ಪ್ರಶಂಸೆಯನ್ನು ಬಯಸುತ್ತಿದ್ದ ಎಂದು ಸಾಕ್ಷ್ಯ ನೀಡಿದರು. ಸ್ಲೇಡ್‌ನಿಂದ ಓರ್ಟನ್‌ಗೆ ಇಮೇಲ್ ಬಂದ ನಂತರ ಈ ಕೊಲೆಗಳು ಸಂಭವಿಸಿವೆ ಎಂದು ವರದಿಯಾಗಿದೆ, ಅವನು 18 ವರ್ಷಕ್ಕೆ ಬಂದ ನಂತರ ಹೆತ್ತವರು ಅವನ ಜೀವನದಲ್ಲಿ ಇರುವುದಿಲ್ಲ ಎಂದು ಮೇಲ್ ತಿಳಿಸಿತ್ತು.

ಇದನ್ನೂ ಓದಿ: ಚಿಂತಾಮಣಿಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್​​ಗಿರಿ

ಓರ್ಟನ್‌ ಮಾನಸಿಕ ಪರೀಕ್ಷೆಗೆ ಒಳಗಾದಾಗ ಅವನು ವಿಚಾರಣೆಗೆ ಅಸಮರ್ಥ ಎಂದು ಪರಿಗಣಿಸಿ ವಿಚಾರಣೆ ವಿಳಂಬವಾಯಿತು. ನಂತರ ನವೆಂಬರ್‌ನಲ್ಲಿ ಮಾನಸಿಕ ಪರೀಕ್ಷೆಯ ನಂತರ ವಿಚಾರಣೆಗೆ ನಿಲ್ಲಲು ಅವನು ಸಮರ್ಥನೆಂದು ಪರಿಗಣಿಸಲಾಯಿತು.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ