AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಳಿಯನನ್ನೇ ಕೊಂದ ಅತ್ತೆ.. ಕಾರಣ ಏನು ಗೊತ್ತಾ?

ಹೈದರಾಬಾದ್: ಮಗಳಿಗಾಗಿ, ಮಗಳ ಯೋಗಕ್ಷೇಮಕ್ಕೆ ತಾಯಿ ಸಾವಿರ ಸಾವಿರ ತ್ಯಾಗಕ್ಕೂ ಸಿದ್ಧವಾಗಿರ್ತ್ತಾಳೆ. ಆದ್ರೆ ಇಲ್ಲೊಬ್ಬ ತಾಯಿ ಅದಕ್ಕೆ ಕಳಂಕ ತಂದಿದ್ದು, ತಾಯಿಯೊಬ್ಬಳ ಅನಾಚಾರಕ್ಕಾಗಿ ಮಗಳೊಬ್ಬಳು ಅತ್ಮಹತ್ಯೆ ಮಾಡಿಕೊಳ್ಳುವಂತಾಗಿದ್ದಲ್ಲದೆ, ಅಳಿಯನನ್ನು ಅತ್ತೆ ಹತ್ಯೆಗೈದ ಆರೋಪ ಮುತ್ತಿನ ನಗರಿಯನ್ನು ಬೆಚ್ಚಿಬೀಳಿಸಿದೆ. ಅಕ್ರಮ ಸಂಬಂಧ ಇದ್ದ ವ್ಯಕ್ತಿ ಜೊತೆಗೆ ಮಗಳ ಮದುವೆ ಹೈದರಾಬಾದ್​ನ ರಾಮಂತಪುರದಲ್ಲಿ ಅನಿತಾ ಎಂಬ ಮಹಿಳೆ ತನ್ನ ಪ್ರಿಯಕರ ಹಾಗೂ ಮಗಳ ಗಂಡನನ್ನೇ ಹತ್ಯೆ ಮಾಡಿದ್ದಾಳೆ. ಹೀಗೆ ಕೊಲೆಯಾದವನ ಹೆಸರು ನವೀನ ಅಂತಾ. ಈ ನವೀನನಿಗೂ ಹಾಗೂ ಅನಿತಾಗೂ […]

ತನ್ನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಳಿಯನನ್ನೇ ಕೊಂದ ಅತ್ತೆ.. ಕಾರಣ ಏನು ಗೊತ್ತಾ?
ಆಯೇಷಾ ಬಾನು
|

Updated on: Oct 30, 2020 | 6:50 AM

Share

ಹೈದರಾಬಾದ್: ಮಗಳಿಗಾಗಿ, ಮಗಳ ಯೋಗಕ್ಷೇಮಕ್ಕೆ ತಾಯಿ ಸಾವಿರ ಸಾವಿರ ತ್ಯಾಗಕ್ಕೂ ಸಿದ್ಧವಾಗಿರ್ತ್ತಾಳೆ. ಆದ್ರೆ ಇಲ್ಲೊಬ್ಬ ತಾಯಿ ಅದಕ್ಕೆ ಕಳಂಕ ತಂದಿದ್ದು, ತಾಯಿಯೊಬ್ಬಳ ಅನಾಚಾರಕ್ಕಾಗಿ ಮಗಳೊಬ್ಬಳು ಅತ್ಮಹತ್ಯೆ ಮಾಡಿಕೊಳ್ಳುವಂತಾಗಿದ್ದಲ್ಲದೆ, ಅಳಿಯನನ್ನು ಅತ್ತೆ ಹತ್ಯೆಗೈದ ಆರೋಪ ಮುತ್ತಿನ ನಗರಿಯನ್ನು ಬೆಚ್ಚಿಬೀಳಿಸಿದೆ.

ಅಕ್ರಮ ಸಂಬಂಧ ಇದ್ದ ವ್ಯಕ್ತಿ ಜೊತೆಗೆ ಮಗಳ ಮದುವೆ ಹೈದರಾಬಾದ್​ನ ರಾಮಂತಪುರದಲ್ಲಿ ಅನಿತಾ ಎಂಬ ಮಹಿಳೆ ತನ್ನ ಪ್ರಿಯಕರ ಹಾಗೂ ಮಗಳ ಗಂಡನನ್ನೇ ಹತ್ಯೆ ಮಾಡಿದ್ದಾಳೆ. ಹೀಗೆ ಕೊಲೆಯಾದವನ ಹೆಸರು ನವೀನ ಅಂತಾ. ಈ ನವೀನನಿಗೂ ಹಾಗೂ ಅನಿತಾಗೂ ಅಕ್ರಮ ಸಂಬಂಧ ಇತ್ತು. ಆದರೆ ಇದನ್ನೆಲ್ಲಾ ಮುಚ್ಚಿಟ್ಟು ಅನಿತಾ ತನ್ನ ಮಗಳನ್ನೇ ನವೀನನಿಗೆ ಮದುವೆ ಮಾಡಿ ಕೊಟ್ಟಿದ್ದಳಂತೆ. ಆದರೆ ಅನಿತಾ ಮಗಳನ್ನು ಮದುವೆಯಾಗಿದ್ದ ನವೀನ ಆಕೆಯ ತಾಯಿ ಅಂದರೆ ಅನಿತಾಳ ಜೊತೆಗೂ ಸಂಬಂಧವನ್ನು ಮುಂದುವರಿಸಿದ್ದ.

ಇದು ಅನಿತಾಳ ಮಗಳಿಗೆ ಗೊತ್ತಾಗಿ, ತನ್ನ ತಾಯಿಯ ಹೇಯ ಕೃತ್ಯದ ಬಗ್ಗೆ ಬೇಸರಗೊಂಡಿದ್ದಳು. ಮತ್ತೊಂದ್ಕಡೆ ಗಂಡ ನವೀನ ಕೂಡ ಕಿರುಕುಳ ನೀಡುತ್ತಿದ್ದ. ಹೀಗಾಗಿ ಅನಿತಾಳ ಮಗಳು ಆತ್ಮಹತ್ಯೆಗೆ ಶರಣಾಗಿದ್ದಳು. ಹೀಗೆ ಅನಿತಾಳ ಮಗಳ ಆತ್ಮಹತ್ಯೆ ಕೇಸಲ್ಲಿ ಅನೀತಾ ಹಾಗೂ ಅಳಿಯ ನವೀನ ಮೇನಲ್ಲಿ ಜೈಲಿನಿಂದ ಹೊರಬಂದಿದ್ರು. ಸಹಜೀವನ ನಡೆಸುತ್ತಿದ್ರು. ಆದರೆ ದಿಢೀರ್ ನಡೆಯಬಾರದ್ದು ನಡೆದೇ ಹೋಗಿದೆ.

16 ಬಾರಿ ಇರಿದು ಅಳಿಯನ ಬರ್ಬರ ಕೊಲೆ ಇನ್ನು ಸಹಜೀವನ ನಡೆಸುತ್ತಿದ್ದ ನವೀನ ಹಾಗೂ ಅನಿತಾ ಕಿತ್ತಾಡಿಕೊಂಡಿದ್ದಾರೆ. ಅನಿತಾ ಮಗಳು ನವೀನ ಎಂಬ ಕಿರಾತಕನ ಕಾಟ ತಡೆಯಲಾಗದೆ ಮದುವೆಯಾಗಿ 4 ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ಳು. ಇದಾದ ಬಳಿಕ ನವೀನ ತನ್ನ ಅತ್ತೆ ಅನಿತಾಗೂ ಕಿರುಕುಳ ನೀಡುತ್ತಿದ್ದ. ಆದರೆ ಅನಿತಾ ತನ್ನ ಮಗಳಂತೆ ಆತ್ಮಹತ್ಯೆ ಮಾಡಿಕೊಳ್ಳದೆ ತನ್ನ ಅಳಿಯ ಹಾಗೂ ಪ್ರಿಯಕರ ನವೀನನಿಗೆ ಒಂದು ಗತಿ ಕಾಣಿಸಿದ್ದಾಳೆ. 16 ಬಾರಿ ಕತ್ತಿಯಿಂದ ಚುಚ್ಚಿ ಚುಚ್ಚಿ ಕೊಂದಿದ್ದಾಳೆ.

ಪ್ರಿಯಕರ ನವೀನನ್ನ ಕೊಂದ ಬಳಿಕ ಅನಿತಾ ಪೊಲೀಸ್ರಿಗೆ ಶರಣಾಗಿದ್ದಾಳೆ. ಹೈದರಾಬಾದ್ನ ಉಪ್ಪಲ್ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತ್ತಿದ್ದಾರೆ. ಆದ್ರೆ ಸಂಬಂಧಗಳ ಅರ್ಥ ತಿಳಿಯದೆ ಅನಾಚಾರವೆಸಗಿದ್ದ ತಾಯಿ, ಮಗಳ ಸಾವಿಗೆ ಕಾರಣವಾಗಿದ್ದೂ ಅಲ್ಲದೆ, ಅಳಿಯನನ್ನೂ ಕೊಂದಿದ್ದು ದುರಂತವೇ ಸರಿ.