ಉತ್ತರ ಪ್ರದೇಶದಲ್ಲಿ ಪುರುಷನಾದ ಮಹಿಳಾ ಶಿಕ್ಷಕಿ! ಯಾಕೆ ಗೊತ್ತಾ?
ಇದೇ ವರ್ಷದ 3 ತಿಂಗಳ ಹಿಂದೆ, ಸರಿತಾ ಮಧ್ಯಪ್ರದೇಶದ ಇಂದೋರ್‌ನಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತತ್ಫಲವಾಗಿ ಸಂಪೂರ್ಣವಾಗಿ ಪುರುಷರಾದರು.

ಲಕ್ನೋ: ತಾನು ಹುಟ್ಟಿ ಬೆಳೆದ ಜಾತಿ, ಧರ್ಮಕ್ಕೆ ಕ್ಷಣಮಾತ್ರದಲ್ಲಿ ತಿಲಾಂಜಲಿಯಿಟ್ಟು ಮತಾಂತರಗೊಳ್ಳುವಂತೆ ಇತ್ತೀಚೆಗೆ ತಾನು ಹುಟ್ಟಿ ಬೆಳೆದ ಲಿಂಗ ಬದಲಾವಣೆಗೂ ಸೈ ಅನ್ನುತ್ತಿದ್ದಾರೆ ಜನ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಮಹಿಳಾ ಶಿಕ್ಷಕಿಯೊಬ್ಬರು (Woman Teacher) ಲಿಂಗ ಬದಲಾವಣೆಗೆ (Gender Change) ಒಳಗಾಗಿ ಪುರುಷರಾಗಿದ್ದಾರೆ.
ಖುದಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಾವಡ (Nawada village) ಗ್ರಾಮದ ಸರಿತಾಸಿಂಗ್ ವಿಕಲಚೇತನ ಮಹಿಳೆ. ಅಂಗವಿಕಲ ಮಹಿಳೆಯಾಗಿದ್ದ ಅವರು ಬಾಲ್ಯದಿಂದಲೂ ಪುರುಷರ ಬಟ್ಟೆಗಳನ್ನು ಧರಿಸುತ್ತಿದ್ದರಂತೆ ಮತ್ತು ಪುರುಷರಂತೆ ಕೂದಲನ್ನು ಸ್ಟೈಲ್ ಆಗಿ ಮಾಡುತ್ತಿದ್ದರು. ಅಂಗವಿಕಲಳಾದ ಆಕೆ ವೀಲ್ ಚೇರ್ ಗೆ ಸೀಮಿತವಾಗಿದ್ದಾಳೆ. ಸರಿತಾಗೆ 2020 ರಲ್ಲಿ ಶಾಲಾ ಸಹಾಯಕಿಯಾಗಿ ಕೆಲಸ ಸಿಕ್ಕಿತು. ಅದೇ ವರ್ಷದಲ್ಲಿ, ಸರಿತಾ ಲೈಂಗಿಕ ಬದಲಾವಣೆಗೆ ಒಳಗಾಗಲು ನಿರ್ಧರಿಸಿದರು. ಲಕ್ನೋದಲ್ಲಿ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಗೆ ಒಳಗಾದ ನಂತರ, ಪುರುಷರಂತೆ ಗಂಟಲು ಒಡೆದು ಮತ್ತು ಮುಖದಲ್ಲಿ ಗಡ್ಡ ಕಾಣಿಸಿಕೊಂಡು ಬದಲಾವಣೆ ಕಂಡುಕೊಂಡಿದ್ದಾರೆ.
ಇದನ್ನೂ ಓದಿ: Narendra Modi: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ, ಪ್ರಯಾಣಿಕರೊಂದಿಗೆ ಅದ್ಭುತ ಕ್ಷಣಗಳನ್ನು ಕಳೆದ ಮೋದಿ
ಇದೇ ವರ್ಷದ 3 ತಿಂಗಳ ಹಿಂದೆ, ಸರಿತಾ ಮಧ್ಯಪ್ರದೇಶದ ಇಂದೋರ್‌ನಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತತ್ಫಲವಾಗಿ ಸಂಪೂರ್ಣವಾಗಿ ಪುರುಷರಾದರು. ಇದೀಗ ತಮ್ಮ ಹೆಸರನ್ನು ಶರತ್ ಸಿಂಗ್ ಎಂದು ಬದಲಾಯಿಸಿಕೊಂಡಿದ್ದಾರೆ. ಇದಕ್ಕಾಗಿ ಶಹಜಹಾನ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಉಮೇಶ್ ಪ್ರತಾಪ್ ಸಿಂಗ್ ಅವರು ಲಿಂಗ ಬದಲಾವಣೆ ದೃಢೀಕರಣ ಪ್ರಮಾಣಪತ್ರವನ್ನೂ ಪಡೆದರು. ಬಾಲ್ಯದಿಂದಲೂ ತನ್ನ ಪಕ್ಕದಲ್ಲೇ ಇದ್ದ ಸವಿತಾ ಸಿಂಗ್ ಎಂಬ ಯುವತಿಯನ್ನು ವಿವಾಹವಾಗಲು ಶರತ್ ಸಿಂಗ್ ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಇಬ್ಬರೂ ಮದುವೆಯಾಗಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ