ಮಾವೊವಾದಿಗಳಿಂದ ಎಂಜಿನಿಯರ್ ಅಪಹರಣ: ಗಂಡನ ಹುಡುಕಿ ಕಾಡಿಗೆ ತೆರಳಿದ ಪತ್ನಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 16, 2022 | 6:10 PM

ತನ್ನ ಪತಿಯನ್ನು ಬಿಡುಗಡೆ ಮಾಡಬೇಕು ಎಂದು ಸೊನಾಲಿ ಪವಾರ್ ಭಾವುಕ ಮನವಿ ಮಾಡಿಕೊಂಡಿದ್ದರು. ನಂತರ ಸ್ವತಃ ತಾವೇ ಅವರನ್ನು ಹುಡುಕಿ ವಾಪಸ್ ಕರೆತರುವುದಾಗಿ ಅಬುಧ್​ಮದ್ ಕಾಡಿಗೆ ತೆರಳಿದರು.

ಮಾವೊವಾದಿಗಳಿಂದ ಎಂಜಿನಿಯರ್ ಅಪಹರಣ: ಗಂಡನ ಹುಡುಕಿ ಕಾಡಿಗೆ ತೆರಳಿದ ಪತ್ನಿ
ಛತ್ತೀಸಗಡದಲ್ಲಿ ನಕ್ಸಲ್ ಚಟುವಟಿಕೆ
Follow us on

ರಾಯಪುರ: ಮಾವೊವಾದಿಗಳು ಅಪಹರಿಸಿರುವ ತನ್ನ ಎಂಜಿನಿಯರ್ ಗಂಡನನ್ನು ಪತ್ತೆಹಚ್ಚಲೆಂದು ಆತನ ಪತ್ನಿಯು ಹಸುಗೂಸಿನೊಂದಿಗೆ ಕಾಡಿಗೆ ತೆರಳಿರುವ ಘಟನೆ ಛತ್ತೀಸಗಡದಲ್ಲಿ ನಡೆದಿದೆ. ತನ್ನ ಪತಿಯನ್ನು ಬಿಡುಗಡೆ ಮಾಡಬೇಕು ಎಂದು ಸೊನಾಲಿ ಪವಾರ್ ಭಾವುಕ ಮನವಿ ಮಾಡಿಕೊಂಡಿದ್ದರು. ನಂತರ ಸ್ವತಃ ತಾವೇ ಅವರನ್ನು ಹುಡುಕಿ ವಾಪಸ್ ಕರೆತರುವುದಾಗಿ ಅಬುಧ್​ಮದ್ ಕಾಡಿಗೆ ತೆರಳಿದರು. ಈ ಕಾಡಿನಲ್ಲಿ ಮಾವೋವಾದಿಗಳು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಈ ನಡುವೆ ಮಾವುವಾದಿಗಳು ಮಂಗಳವಾರವೇ ಎಂಜಿನಿಯರ್ ಅಶೋಕ್ ಪವಾರ್ ಮತ್ತು ಅವರೊಂದಿಗೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಆನಂದ್ ಯಾದವ್ ಅವರನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಸೊನಾಲಿ ಮಾತ್ರ ಇಂದಿಗೂ ಕಾಡಿನಲ್ಲಿಯೇ ಇದ್ದಾರೆ ಎಂದು ಮೂಲಗಳು ಹೇಳಿವೆ. ಸ್ಥಳೀಯ ಪತ್ರಕರ್ತರ ಸಹಕಾರದಿಂದ ಅವರನ್ನು ವಾಪಸ್ ಕರೆಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಅಸೋಕ್ ಪವಾರ್ ಮತ್ತು ಯಾದವ್ ಅವರನ್ನು ಪ್ರಸ್ತುತ ಬಿಜಾಪುರದಲ್ಲಿ ಇರಿಸಲಾಗಿದೆ ಎಂದು ಎಎಸ್​ಪಿ ಪಂಕಜ್ ಶುಕ್ಲ ಹೇಳಿದ್ದಾರೆ. ಮಾವೋವಾದಿಗಳ ಭದ್ರಕೋಟೆಯಾಗಿರುವ ಕಾಡಿನಿಂದ ಹಿಂದಿರುಗಿದ ನಂತರ ಸೊನಾಲಿ ಅವರು ಅಲ್ಲಿಗೇ ಬಂದು, ಪತಿಯನ್ನು ಭೇಟಿಯಾಗಲಿದ್ದಾರೆ. ‘ನಮ್ಮ ಹೆಣ್ಣುಮಕ್ಕಳು ಮುಖ ನೋಡಿ, ಪತಿಯನ್ನು ಬಿಡುಗಡೆ ಮಾಡಿ’ ಎಂದು ಸೊನಾಲಿ ಪವಾರ್ ಭಾವುಕತೆಯ ವಿಡಿಯೊ ಸಂದೇಶ ಹರಿಬಿಟ್ಟಿದ್ದರು. ಹಿಂದಿ ದಿನಪತ್ರಿಕೆಯೊಂದರ ಪತ್ರಕರ್ತೆಯ ಸಹಾಯದಿಂದ ಸ್ಥಳೀಯರ ಸಂಪರ್ಕ ಸಾಧಿಸಿದ ಸೊನಾಲಿ ಪತಿಯನ್ನು ಹುಡುಕುತ್ತಾ ಕಾಡು ಪ್ರವೇಶಿಸಿದರು. ಈ ವೇಳೆ ತಮ್ಮೊಂದಿಗೆ ಎರಡೂವರೆಗೆ ವರ್ಷದ ಮಗಳನ್ನು ಕರೆದೊಯ್ದರು. ಐದು ವರ್ಷದ ಅವರ ಹಿರಿಯ ಮಗಳನ್ನು ತಮ್ಮ ಕುಟುಂಬದೊಂದಿಗೆ ಬಿಟ್ಟಿದ್ದಾರೆ.

ಕಳೆದ ಫೆಬ್ರುವರಿ 11ರಂದು ಎಂಜಿನಿಯರ್ ಅಶೋಕ್ ಪವಾರ್​ ಅವರನ್ನು ಅವರು ಕೆಲಸ ಮಾಡುತ್ತಿದ್ದ ಸ್ಥಳದಿಂದ ನಕ್ಸಲರು ಅಪಹರಿಸಿದ್ದರು. ಅದಾದ ನಂತರ ಸೊನಾಲಿ ಅವರು ಹುಡುಕಾಟ ಆರಂಭಿಸಿದರು. ಅವರು ಇನ್ನೂ ಕಾಡಿನಲ್ಲಿಯೇ ಇದ್ದಾರೆ. ಕುಟ್ರು ಪೊಲೀಸ್ ಠಾಣೆಯಲ್ಲಿಯೇ ಸೊನಾಲಿ ಅವರು ತಮ್ಮ ಪತ್ನಿಯನ್ನು ಭೇಟಿಯಾಗಲಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಪತ್ರಕರ್ತೆಯು ‘ಎಂಜಿನಿಯರ್ ಅಶೋಕ್ ಪವಾರ್ ಅವರನ್ನು ನಕ್ಸಲರು ಯಾವುದೇ ತೊಂದರೆಯಿಲ್ಲದೆ ಎಂಜಿನಿಯರ್ ಪವಾರ್ ಮತ್ತು ಕಾರ್ಮಿಕ ಯಾದವ್ ಅವರಿಗೆ ತಲಾ ₹ 2 ಸಾವಿರ ಕೊಟ್ಟು ಬಿಡುಗಡೆ ಮಾಡಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿರುವ ಬೇದ್ರೆ-ನುಗುರ್ ಗ್ರಾಮದ ಇಂದ್ರಾವತಿ ನದಿಗೆ ಅಡ್ಡಲಾಗಿ ಇವರು ಸೇತುವೆ ಕಟ್ಟುತ್ತಿದ್ದರು. ಆಗಲೇ ಇವರನ್ನು ನಕ್ಸಲರು ಅಪಹರಣ ಮಾಡಿದ್ದರು. ಪವಾರ್ ಕುಟುಂಬವು ಮಧ್ಯಪ್ರದೇಶದಿಂದ ಬಂದಿದೆ.

ಇದನ್ನೂ ಓದಿ: Naxal Kishanda: ಅವರ ಜೊತೆ ಮಾತು ಕಷ್ಟ, ಯಾಮಾರಿದ್ರೆ ನಮ್ಮನ್ನೂ ನಕ್ಸಲ್ ಮಾಡಿಬಿಡ್ತಾರೆ: ಪೊಲೀಸ್ ಮುಖ್ಯಸ್ಥರೇ ಹೀಗೆ ಒಪ್ಪಿಕೊಂಡ ಕಿಶನ್​ದಾ ಬದುಕಿನ ಇತಿವೃತ್ತಾಂತ ಇಲ್ಲಿದೆ

ಇದನ್ನೂ ಓದಿ: ಛತ್ತೀಸ್‌ಗಢ ಮತ್ತು ಜಾರ್ಖಂಡ್‌ ನಕ್ಸಲ್ ಪೀಡಿತ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಜ್ಜಾದ ಭದ್ರತಾ ಪಡೆ