ಛತ್ತೀಸ್‌ಗಢ ಮತ್ತು ಜಾರ್ಖಂಡ್ ನಕ್ಸಲ್ ಪೀಡಿತ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಜ್ಜಾದ ಭದ್ರತಾ ಪಡೆ
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಐಟಿಬಿಪಿ ಮತ್ತು ಸಿಐಎಸ್‌ಎಫ್‌ನಂತಹ ಇತರ ಅರೆಸೇನಾ ಪಡೆಗಳಿಗೂ ನಕ್ಸಲರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಕಾರ್ಯಾಚರಣೆಗಳನ್ನು ಯೋಜಿಸಲು ತಿಳಿಸಲಾಗಿದೆ.
ದೆಹಲಿ: ದೇಶದಲ್ಲಿ ಮುಂಗಾರು ಮಳೆಗಾಲ ಮುಕ್ತಾಯವಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಇನ್ನೂ ಕಾಶ್ಮೀರ ಮಾದರಿಯಲ್ಲಿ ನಕ್ಸಲರ ವಿರುದ್ಧ ದಾಳಿ ನಡೆಸಲು ಭದ್ರತಾ ಪಡೆಗಳು ಸಜ್ಜಾಗಿವೆ. ವರ್ಷದಿಂದ ವರ್ಷಕ್ಕೆ ದೇಶದಲ್ಲಿ ನಕ್ಸಲ್ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಈಗ ಜಾರ್ಖಂಡ್, ಛತ್ತೀಸ್‌ಗಢ ರಾಜ್ಯಗಳಲ್ಲಿ ಮಾತ್ರ ನಕ್ಸಲ್ ಹಾವಳಿ ಹೆಚ್ಚಾಗಿದೆ. ಈ ರಾಜ್ಯಗಳಲ್ಲೂ ಈಗ ಭದ್ರತಾ ಪಡೆಗಳು ದೊಡ್ಡ ಮಟ್ಟದ ದಾಳಿ ನಡೆಸಲಿವೆ.
ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶೀಘ್ರದಲ್ಲೇ ಭದ್ರತಾ ಪಡೆಗಳ ಕಾಶ್ಮೀರದ ಮಾದರಿಯ ದಾಳಿ ನಡೆಸಲಿವೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಗಾಲ ಮುಕ್ತಾಯವಾಗಿರುವುದರಿಂದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ದೊಡ್ಡ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಕ್ಸಲರ ವಿರುದ್ಧದ ದೊಡ್ಡ ಕಾರ್ಯಾಚರಣೆಗಳತ್ತ ಗಮನಹರಿಸುವಂತೆ ಕೋಬ್ರಾ, ನಕ್ಸಲ್ ವಿರೋಧಿ ವಿಶೇಷ ಪಡೆ ಮತ್ತು ಈ ಪ್ರದೇಶಗಳ ಭದ್ರತಾ ಪಡೆಗಳ ಮುಖ್ಯಸ್ಥರಿಗೆ ಸಂದೇಶವನ್ನು ನೀಡಲಾಗಿದೆ. ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಯಾವ ರೀತಿ ದಾಳಿ ಮಾಡುತ್ತಿವೆಯೋ ಅದೇ ರೀತಿಯ ಆಕ್ರಮಣಶೀಲತೆಯನ್ನು ಈ ಕಾರ್ಯಾಚರಣೆಯು ಹೊಂದಿರುತ್ತದೆ. ಶೀಘ್ರದಲ್ಲೇ, ಕೆಲವು ದೊಡ್ಡ ಕಾರ್ಯಾಚರಣೆಗಳು ನಡೆಯಲಿವೆ ಎಂದು ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದರು.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಐಟಿಬಿಪಿ ಮತ್ತು ಸಿಐಎಸ್‌ಎಫ್‌ನಂತಹ ಇತರ ಅರೆಸೇನಾ ಪಡೆಗಳಿಗೂ ನಕ್ಸಲರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಕಾರ್ಯಾಚರಣೆಗಳನ್ನು ಯೋಜಿಸಲು ತಿಳಿಸಲಾಗಿದೆ. ಅಂತೆಯೇ, ಪಡೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಕೇಂದ್ರದ ಉನ್ನತ ಅಧಿಕಾರಿಗಳು ಈ ನಕ್ಸಲ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಕೇಂದ್ರ ಸರ್ಕಾರದ ಉದ್ದೇಶದ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.
ಮಳೆಗಾಲದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಅಪಾಯಕಾರಿ. ಹೀಗಾಗಿ ಮಳೆಗಾಲ ಮುಗಿಯುವುದನ್ನೇ ಭದ್ರತಾ ಪಡೆಗಳು ಕಾಯುತ್ತಿದ್ದವು, ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಸೈನಿಕರು ವಿವಿಧ ಸ್ಥಳಗಳಿಂದ ನಕ್ಸಲ್ ಪೀಡಿತ ಪ್ರದೇಶಕ್ಕೆ ಆಗಮಿಸಬಹುದು. ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಬಹುದು ಎಂದು ಅಧಿಕಾರಿ ಹೇಳಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಿಆರ್‌ಪಿಎಫ್ ತನ್ನ ಕಾರ್ಯತಂತ್ರವನ್ನು ಬದಲಾಯಿಸಿದೆ. ಕೆಲವು ವಾರಗಳ ಹಿಂದೆ ಹಂಚಿಕೊಂಡ ಮಾಹಿತಿ ಪ್ರಕಾರ, ನಕ್ಸಲರು ಇತ್ತೀಚೆಗೆ ಕೆಲ ಶಿಬಿರಗಳನ್ನು ಮಾಡಿದ್ದಾರೆ. ಅಲ್ಲದೆ, ಅವರ ಕಾರ್ಯಕರ್ತರು ಭದ್ರತಾ ಪಡೆಗಳ ವಿರುದ್ಧ ಪ್ರಭಾವ ಬೀರಲು ಮತ್ತು ಸರ್ಕಾರಿ ಯೋಜನೆಗಳನ್ನು ಬಹಿಷ್ಕರಿಸಲು ಸ್ಥಳೀಯರನ್ನು ರಹಸ್ಯವಾಗಿ ಭೇಟಿ ಮಾಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.
ಈ ವರ್ಷದ ಆರಂಭದಲ್ಲಿ, ಗೃಹ ಸಚಿವಾಲಯವು ಸಂಸತ್ತಿನಲ್ಲಿ ನೀಡಿದ್ದ ಮಾಹಿತಿ ಪ್ರಕಾರ, ಎಡಪಂಥೀಯ ಉಗ್ರವಾದದ ಘಟನೆಯಿಂದ 2009 ರಲ್ಲಿ ಸಾರ್ವಕಾಲಿಕ ಗರಿಷ್ಠ 2,258 ಮಂದಿ ಸಾವನ್ನಪ್ಪಿದ್ದರು. ಆದರೇ, 2020 ರಲ್ಲಿ 665 ಮಂದಿ ನಕ್ಸಲ್ ದಾಳಿಯಿಂದ ಸಾವನ್ನಪ್ಪಿದ್ದರು. ನಕ್ಸಲ್ ದಾಳಿಯ ಸಾವಿನ ಪ್ರಮಾಣ ಶೇ 70 ರಷ್ಟು ಕಡಿಮೆಯಾಗಿದೆ.
ಅಂತೆಯೇ, ಫಲಿತಾಂಶದ ಸಾವುಗಳು (ನಾಗರಿಕರು + ಭದ್ರತಾ ಪಡೆಗಳು) 2010 ರಲ್ಲಿ ಸಾರ್ವಕಾಲಿಕ ಗರಿಷ್ಠ 1,005 ರಿಂದ 2020 ರಲ್ಲಿ 183 ಕ್ಕೆ ಇಳಿದಿತ್ತು. ಅಂದರೇ, ಶೇ 82 ರಷ್ಟು ಕಡಿಮೆಯಾಗಿದೆ. ಎಡಪಂಥೀಯ ಹಿಂಸಾಚಾರದ ಭೌಗೋಳಿಕ ಹರಡುವಿಕೆಯು ಸಹ ಸಂಕುಚಿತಗೊಂಡಿದೆ. ನಕ್ಸಲ್ ಹಿಂಸಾಚಾರವನ್ನು ವರದಿ ಮಾಡುವ ಜಿಲ್ಲೆಗಳನ್ನು 76 (2013) ರಿಂದ 53 (2020) ಕ್ಕೆ ಇಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Naxals Attack: ಛತ್ತೀಸ್ಗಢದಲ್ಲಿ ನಕ್ಸಲರಿಂದ ಎಸ್ಯುವಿ ಕಾರು ಸ್ಫೋಟ; ಓರ್ವ ಸಾವು, 11 ಜನರಿಗೆ ಗಾಯ