ಪ್ರಿಯಾಂಕಾ ಗಾಂಧಿ ವಾದ್ರಾ-ಜಯಂತ್​ ಚೌಧರಿ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ; ರಾಜಕೀಯ ವಲಯದಲ್ಲಿ ಭರ್ಜರಿ ಕುತೂಹಲ

ಜಯಂತ್​ ಚೌಧರಿ ಅವರ ವಿಮಾನ 5.30ರ ಹೊತ್ತಿಗೆ ಅಲ್ಲಿಂದ ಹೋಗುವುದಿತ್ತು. ಅವರು 4ಗಂಟೆಗೇ ಅಲ್ಲಿದ್ದರು. 5ಗಂಟೆ ಹೊತ್ತಿಗೆ ಪ್ರಿಯಾಂಕಾ ಗಾಂಧಿ ಏರ್​ಪೋರ್ಟ್​ಗೆ ಹೋದರು. ತಾವು ಹೋಗಲಿರುವ ಫ್ಲೈಟ್​ನಲ್ಲೇ ಬರುವಂತೆ ಜಯಂತ್​ ಚೌಧರಿಗೆ ಅವರು ಆಹ್ವಾನ ನೀಡಿದರು.

ಪ್ರಿಯಾಂಕಾ ಗಾಂಧಿ ವಾದ್ರಾ-ಜಯಂತ್​ ಚೌಧರಿ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ; ರಾಜಕೀಯ ವಲಯದಲ್ಲಿ ಭರ್ಜರಿ ಕುತೂಹಲ
ಜಯಂತ್ ಚೌಧರಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ
Follow us
TV9 Web
| Updated By: Lakshmi Hegde

Updated on: Nov 02, 2021 | 4:24 PM

ಲಖನೌ: ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಲಖನೌದ ಏರ್​ಪೋರ್ಟ್​​ನಲ್ಲಿ ಆರ್​ಎಲ್​ಡಿ (ರಾಷ್ಟ್ರೀಯ ಲೋಕ ದಳ) ಮುಖ್ಯಸ್ಥ ಜಯಂತ್​ ಚೌಧರಿ ಅವರನ್ನು ಭೇಟಿಯಾದರು. ಅದಾದ ಬಳಿಕ ಇಬ್ಬರೂ ಛತ್ತೀಸ್​ಗಢ್​ ಸರ್ಕಾರದ ಚಾರ್ಟರ್ಡ್​ ವಿಮಾನದಲ್ಲಿ ದೆಹಲಿಗೆ ತೆರಳಿದರು. ಈ ಹೊಸ ಬೆಳವಣಿಗೆ ಈಗಾಗಲೇ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.  

ಭಾನುವಾರ ಗೋರಖ್​ಪುರದಲ್ಲಿ ನಡೆದಿದ್ದ ಪ್ರತಿಜ್ಞಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿಗೆ ಹೋಗಲೆಂದು ಲಖನೌ ಏರ್​ಪೋರ್ಟ್​ಗೆ ಹೋಗಿದ್ದರು. ಅದೇ ಹೊತ್ತಿಗೆ ಜಯಂತ್​ ಚೌಧರಿ ಕೂಡ ಅಲ್ಲಿಗೆ ಆಗಮಿಸಿದ್ದಾರೆ.  ರಾಷ್ಟ್ರೀಯ ಲೋಕ ದಳ (ಆರ್​ಎಲ್​ಡಿ) ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್​ ಯಾದವ್​ ಅವರ ಸಮಾಜವಾದಿ ಪಕ್ಷ (SP)ದ ಮೈತ್ರಿ ಪಕ್ಷ. ಇದೀಗ ಆರ್​ಎಲ್​ಡಿ ಮತ್ತು ಕಾಂಗ್ರೆಸ್​ ಭೇಟಿ ಕುತೂಹಲ ಮೂಡಿಸಿದೆ.  ಮುಂದಿನ ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧ ಎಸ್​ಪಿ ಪಕ್ಷವನ್ನು ಹೆದರಿಸುವ ತಂತ್ರಗಾರಿಕೆಯಾ ಎಂಬಂಥ ಪ್ರಶ್ನೆಗಳೂ ಎದ್ದಿವೆ. ಈ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಮತ್ತು ಜಯಂತ್​ ಚೌಧರಿ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್​ಎಲ್​ಡಿ ಹಿರಿಯ ನಾಯಕರೊಬ್ಬರು, ಇವರಿಬ್ಬರದ್ದೂ ಶಿಷ್ಟಾಚಾರದ ಭೇಟಿಯಷ್ಟೇ. ಮೊದಲೆಲ್ಲ ಹೀಗೆ ಪ್ರತಿಪಕ್ಷಗಳ ನಾಯಕರು ಭೇಟಿಯಾಗುವುದು, ಒಟ್ಟಿಗೆ ಪ್ರಯಾಣ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆ ಸಂಸ್ಕೃತಿ ಮಾಯವಾಗಿದೆ. ಪ್ರತಿಪಕ್ಷಗಳ ನಾಯಕರು ಪರಸ್ಪರ ಶತ್ರುಗಳಂತೆ ವರ್ತಿಸುವಂತಾಗಿದೆ ಎಂದು ಹೇಳಿದ್ದಾರೆ.

ಜಯಂತ್​ ಚೌಧರಿ ಅವರ ವಿಮಾನ 5.30ರ ಹೊತ್ತಿಗೆ ಅಲ್ಲಿಂದ ಹೋಗುವುದಿತ್ತು. ಅವರು 4ಗಂಟೆಗೇ ಅಲ್ಲಿದ್ದರು. 5ಗಂಟೆ ಹೊತ್ತಿಗೆ ಪ್ರಿಯಾಂಕಾ ಗಾಂಧಿ ಏರ್​ಪೋರ್ಟ್​ಗೆ ಹೋದರು. ತಾವು ಹೋಗಲಿರುವ ಫ್ಲೈಟ್​ನಲ್ಲೇ ಬರುವಂತೆ ಜಯಂತ್​ ಚೌಧರಿಗೆ ಅವರು ಆಹ್ವಾನ ನೀಡಿದರು. ಆದರೆ ಮೊದಲು ಜಯಂತ್​ ಚೌಧರಿ ಒಪ್ಪಲಿಲ್ಲ. ಆದರೆ ಬಳಿಕ ಅವರ ವಿಮಾನ ವಿಳಂಬವಾಯಿತು. ಹೀಗಾಗಿ ಪ್ರಿಯಾಂಗಾ ಗಾಂಧಿಯವರು ದೆಹಲಿಗೆ ಹೋಗಲಿದ್ದ ವಿಮಾನಕ್ಕೆ ಹೋಗಿದ್ದಾರೆ. ಜಯಂತ್​ ಚೌಧರಿ ಜತೆ ಇನ್ನಿಬ್ಬರು ಆರ್​ಎಲ್​ಡಿ ನಾಯಕರೂ ಇದ್ದರು ಎಂದೂ ತಿಳಿಸಿದ್ದಾರೆ.

ಮೈತ್ರಿ ಬದಲಾಗಲಿದೆಯಾ? ಇದಿಷ್ಟು ಆಗಿದ್ದೇ ತಡ ಈಗ ಆರ್​ಎಲ್​ಡಿ ಮೈತ್ರಿ ಬದಲಾಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ರಾಜಕೀಯವಲಯದಲ್ಲಿ ಇದೇ ಗುಸುಗುಸು ಪ್ರಾರಂಭವಾಗಿದೆ. 2017ರ ಚುನಾವಣೆಯಲ್ಲಿ ಎಸ್​ಪಿ ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್​ ಈ ಬಾರಿ ಆರ್​ಎಲ್​ಡಿ ಸೆಳೆಯುವ ತಂತ್ರ ನಡೆಸುತ್ತಿದೆಯಾ ಎಂಬ ಪ್ರಶ್ನೆಯೂ ಎದ್ದಿದೆ. ಈ ಬಗ್ಗೆ ಆರ್​ಎಲ್​ಡಿಯ ಉತ್ತರ ಪ್ರದೇಶ ಅಧ್ಯಕ್ಷ ಮಸೂದ್​ ಅಹ್ಮದ್​ರನ್ನು ಪಿಟಿಐ ಸುದ್ದಿಸಂಸ್ಥೆ ಸಂಪರ್ಕಿಸಿದಾಗ, ಆರ್​ಎಲ್​ಡಿಯ ಚುನಾವಣಾ ಮೈತ್ರಿ ಎಂದಿಗೂ ಎಸ್​ಪಿ ಪಕ್ಷದೊಟ್ಟಿಗೆ. ಈ ಬಗ್ಗೆ ನಿರ್ಣಯವೂ ಆಗಿದೆ. ಸೀಟು ಹಂಚಿಕೆ ಕಾರ್ಯ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಳು ಮತ್ತು ನಗು ಎರಡೂ ಭಾವನೆಗಳೇ, ಅಳುವುದು ತಪ್ಪಲ್ಲ ಮತ್ತು ಬಲಹೀನತೆಯೂ ಅಲ್ಲ: ಡಾ ಸೌಜನ್ಯ ವಶಿಷ್ಠ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ