Naxals Attack: ಛತ್ತೀಸ್​ಗಢದಲ್ಲಿ ನಕ್ಸಲರಿಂದ ಎಸ್​ಯುವಿ ಕಾರು ಸ್ಫೋಟ; ಓರ್ವ ಸಾವು, 11 ಜನರಿಗೆ ಗಾಯ

Naxals Attack: ಛತ್ತೀಸ್​ಗಢದಲ್ಲಿ ನಕ್ಸಲರಿಂದ ಎಸ್​ಯುವಿ ಕಾರು ಸ್ಫೋಟ; ಓರ್ವ ಸಾವು, 11 ಜನರಿಗೆ ಗಾಯ
ಸಾಂದರ್ಭಿಕ ಚಿತ್ರ

Chhattisgarh Naxal Attack: ಛತ್ತೀಸ್​ಗಢದ ದಂತೇವಾಡದಲ್ಲಿ ಇಂದು ಮುಂಜಾನೆ ನಕ್ಸಲರು ಎಸ್​ಯುವಿ ಕಾರನ್ನು ಸ್ಫೋಟಿಸಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಇನ್ನೂ 11 ಜನರಿಗೆ ಗಂಭೀರವಾದ ಗಾಯಗಳಾಗಿವೆ.

TV9kannada Web Team

| Edited By: Sushma Chakre

Aug 05, 2021 | 1:40 PM

ನವದೆಹಲಿ: ಛತ್ತೀಸ್​ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮುಂದುವರೆಸಿದ್ದು, ದಂತೇವಾಡ ಜಿಲ್ಲೆಯಲ್ಲಿ ಎಸ್​ಯುವಿ ವಾಹನವೊಂದನ್ನು ಸ್ಫೋಟಿಸಿದ್ದಾರೆ. ಈ ದುರಂತದಲ್ಲಿ ಒಬ್ಬರು ಸಾವನ್ನಪ್ಪಿದ್ದು, 11 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಛತ್ತೀಸ್​ಗಢದ ದಂತೇವಾಡ ಜಿಲ್ಲೆಯ ರಸ್ತೆಯಲ್ಲಿ ಸ್ಫೋಟಕಗಳನ್ನು ಬಳಸಿ ಎಸ್​ಯುವಿ ವಾಹನವೊಂದನ್ನು ಸ್ಫೋಟಿಸಲಾಗಿದೆ. ಮಾಲೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 7.30ರ ವೇಳೆಗೆ ಈ ಘಟನೆ ನಡೆದಿದೆ. ನಾರಾಯಣಪುರದಿಂದ ದಂತೇವಾಡಕ್ಕೆ ರಸ್ತೆ ಮಾರ್ಗದ ಕಾಮಗಾರಿ ನಡೆಯುತ್ತಿತ್ತು. ಈ ಮಾರ್ಗದಲ್ಲಿಯೇ ಎಸ್​ಯುವಿ ಕಾರನ್ನು ಸ್ಫೋಟ ಮಾಡಲಾಗಿದೆ.

ಗಂಭೀರವಾಗಿ ಗಾಯಗೊಂಡ 11 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇತ್ತೀಚೆಗೆ ದಂತೇವಾಡದ ಸುತ್ತಮುತ್ತಲೂ ನಕ್ಸಲರ ಹಾವಳಿ ಹೆಚ್ಚಾಗಿದೆ. ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಕ್ಸಲರು ಈ ದಾಳಿ ನಡೆಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಭದ್ರತಾ ಸಿಬ್ಬಂದಿಯ ವಾಹನದ ಬದಲಾಗಿ ಸಾರ್ವಜನಿಕರ ಕಾರನ್ನು ಸ್ಫೋಟಿಸಿರುವ ಸಾಧ್ಯತೆಯಿದೆ.

ಸಾವನ್ನಪ್ಪಿರುವ ವ್ಯಕ್ತಿ ತಮ್ಮ ಊರಾದ ತೆಲಂಗಾಣಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಆ ವೇಳೆ ಅವರ ಕಾರು ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 11 ಜನರಲ್ಲಿ ಮಹಿಳೆಯೂ ಸೇರಿದ್ದು ಇಬ್ಬರ ಪರಿಸ್ಥಿತಿ ತುಂಬ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Jammu Kashmir: ಕಾಶ್ಮೀರದ ಪೊಲೀಸರಿಂದ 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ

Pulwama Encounter: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಪುಲ್ವಾಮಾ ದಾಳಿಯ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ

(Naxals Attack: 1 Killed 11 Injured as Naxal Blast SUV in Chhattisgarh Dantewada on Today Morning)

Follow us on

Related Stories

Most Read Stories

Click on your DTH Provider to Add TV9 Kannada