ಚಿತಾಗಾರದಲ್ಲಿ ಅತ್ಯಾಚಾರಕ್ಕೆ ಒಳಗಾದವಳ ಪಾಲಕರ ಫೋಟೋ ಶೇರ್​ ಮಾಡಿದ ರಾಹುಲ್​ ಗಾಂಧಿಗೆ ಸಂಕಷ್ಟ..!

ಇತ್ತೀಚೆಗೆ ದೆಹಲಿಯ ನಂಗಲ್​ ಏರಿಯಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವನ್ನು ಆತಂಕಕ್ಕೆ ದೂಡಿದೆ. ಚಿತಾಗಾರದ ಕೂಲರ್​ನಿಂದ ತಣ್ಣನೆಯ ನೀರು ತರಲು ಹೋಗಿದ್ದವಳ ಮೇಲೆ ಅಲ್ಲಿನ ಅರ್ಚಕ ಮತ್ತು ಸಹಚರರಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಚಿತಾಗಾರದಲ್ಲಿ ಅತ್ಯಾಚಾರಕ್ಕೆ ಒಳಗಾದವಳ ಪಾಲಕರ ಫೋಟೋ ಶೇರ್​ ಮಾಡಿದ ರಾಹುಲ್​ ಗಾಂಧಿಗೆ ಸಂಕಷ್ಟ..!
ರಾಹುಲ್ ಗಾಂಧಿ
Follow us
TV9 Web
| Updated By: Lakshmi Hegde

Updated on: Aug 05, 2021 | 1:41 PM

ದೆಹಲಿ: ರಾಷ್ಟ್ರರಾಜಧಾನಿಯಲ್ಲಿ 9 ವರ್ಷದ ಬಾಲಕಿಯೊಬ್ಬಳನ್ನು ಚಿತಾಗಾರದಲ್ಲಿ ಅತ್ಯಾಚಾರ ಮಾಡಿ, ಹತ್ಯೆಗೈದ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳು ಕಂಡುಬರುತ್ತಿವೆ. ಮೃತ ಬಾಲಕಿಯ ಕುಟುಂಬದವರನ್ನು ಬುಧವಾರ ಭೇಟಿಯಾಗಿದ್ದ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ (Rahul Gandhi) ವಿರುದ್ಧ ದೆಹಲಿ ಮೂಲದ ವಕೀಲರಾದ ವಿನೀತ್​ ಜಿಂದಾಲ್​ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ಪಾಲಕರ ಫೋಟೋವನ್ನು ಬಹಿರಂಗಪಡಿಸಿದ್ದು ಕಾನೂನು ಪ್ರಕಾರ ತಪ್ಪು. ಆದರೆ ರಾಹುಲ್​ ಗಾಂಧಿ ಅವರನ್ನು ಭೇಟಿಯಾದ ಬಳಿಕ ಟ್ವಿಟರ್(Twitter)​ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ(POCSO)ಯ 23ನೇ ವಿಭಾಗದಡಿ ರಾಹುಲ್ ಗಾಂಧಿ ಮಾಡಿದ್ದು ಅಪರಾಧ ಎಂದು ಕೂಡ ವಕೀಲರು ಹೇಳಿದ್ದಾರೆ.

ಸಂತ್ರಸ್ತೆಯ ಪಾಲಕರ ಫೋಟೋಗಳನ್ನು ರಾಹುಲ್ ಗಾಂಧಿ ತಮ್ಮ ಟ್ವಿಟರ್ ಅಕೌಂಟ್​​ನಲ್ಲಿ ಬಹಿರಂಗಗೊಳಿಸುತ್ತಿದ್ದಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ (NCPCR) ಟ್ವಿಟರ್​ ಇಂಡಿಯಾಕ್ಕೆ ನೋಟಿಸ್​ ನೀಡಿತ್ತು. ಪೋಕ್ಸೊ ಕಾಯ್ದೆಯ ನಿಯಮ ಉಲ್ಲಂಘನೆ ಮಾಡಿದ ರಾಹುಲ್ ಗಾಂಧಿ ಟ್ವಿಟರ್​ ಅಕೌಂಟ್​​ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿತ್ತು. ಅದಾದ ಬೆನ್ನಲ್ಲೇ ಈ ವಕೀಲರೂ ಸಹ ರಾಹುಲ್​ ಗಾಂಧಿ ವಿರುದ್ಧ ದೂರು ನೀಡಿದ್ದಾರೆ.

ಇತ್ತೀಚೆಗೆ ದೆಹಲಿಯ ನಂಗಲ್​ ಏರಿಯಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವನ್ನು ಆತಂಕಕ್ಕೆ ದೂಡಿದೆ. ಚಿತಾಗಾರದ ಕೂಲರ್​ನಿಂದ ತಣ್ಣನೆಯ ನೀರು ತರಲು ಹೋಗಿದ್ದವಳ ಮೇಲೆ ಅಲ್ಲಿನ ಅರ್ಚಕ ಮತ್ತು ಸಹಚರರಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆದರೆ ಪಾಲಕರು ಅಲ್ಲಿಗೆ ಬಂದಾಗ, ಆಕೆ ವಿದ್ಯುತ್​ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ನಂಬಿಸಲಾಗಿತ್ತು. ಸದ್ಯ, ಅರ್ಚಕ ರಾಧೆಶ್ಯಾಂ ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ತ್ರಿಪುರಾ ಗಡಿ ಭಾಗದಲ್ಲಿ ಉಗ್ರರ ಗುಂಡಿನ ದಾಳಿಗೆ ಕಲಬುರಗಿ ಯೋಧ ಹುತಾತ್ಮ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ

A delhi Lawyer Filed Complaint agianst Congress Leader Rahul Gandhi in Delhi Police Station