ಮಹಾರಾಷ್ಟ್ರ: ಮಹಿಳೆಯರು ಬ್ಯಾಗ್​ನಲ್ಲಿ ಲಿಪ್​ಸ್ಟಿಕ್​ ಜತೆಗೆ ಚಾಕು, ಮೆಣಸಿನ ಪುಡಿ ಇಟ್ಟುಕೊಂಡಿರಬೇಕು

ಮಹಿಳೆಯರು ತಮ್ಮ ಬ್ಯಾಗ್​ನಲ್ಲಿ ಲಿಪ್​ಸ್ಟಿಕ್​ ಜತೆಗೆ ಆತ್ಮರಕ್ಷಣೆಗೆಂದು ಚಾಕು ಹಾಗೂ ಮೆನಿಸಿನ ಪುಡಿ ಇಟ್ಟುಕೊಂಡಿರಬೇಕು ಎಂದು ಮಹಾರಾಷ್ಟ್ರ ಸಚಿವ ಗುಲಾಬ್​ರಾವ್ ಪಾಟೀಲ್​ ಹೇಳಿದ್ದಾರೆ. ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಸಲಹೆ ನೀಡಿದರು. ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳಾದ ಎಂಎಸ್‌ಆರ್‌ಟಿಸಿ ಬಸ್ ದರವನ್ನು ಅರ್ಧದಷ್ಟು ಕಡಿತಗೊಳಿಸುವುದು, ಲಡ್ಕಿ ಬಹಿನ್ ಯೋಜನೆ ಮತ್ತು ಬಾಲಕಿಯರಿಗೆ ಉಚಿತ ಶಿಕ್ಷಣವನ್ನು ಬಗ್ಗೆ ಮಾತನಾಡಿದರು.

ಮಹಾರಾಷ್ಟ್ರ: ಮಹಿಳೆಯರು ಬ್ಯಾಗ್​ನಲ್ಲಿ ಲಿಪ್​ಸ್ಟಿಕ್​ ಜತೆಗೆ ಚಾಕು, ಮೆಣಸಿನ ಪುಡಿ ಇಟ್ಟುಕೊಂಡಿರಬೇಕು
ಗುಲಾಬ್​ರಾವ್
Image Credit source: India Today

Updated on: Mar 09, 2025 | 11:42 AM

ಮಹಾರಾಷ್ಟ್ರ, ಮಾರ್ಚ್​ 09: ಮಹಿಳೆಯರು ತಮ್ಮ ಬ್ಯಾಗ್​ನಲ್ಲಿ ಲಿಪ್​ಸ್ಟಿಕ್​ ಜತೆಗೆ ಆತ್ಮರಕ್ಷಣೆಗೆಂದು ಚಾಕು ಹಾಗೂ ಮೆನಿಸಿನ ಪುಡಿ ಇಟ್ಟುಕೊಂಡಿರಬೇಕು ಎಂದು ಮಹಾರಾಷ್ಟ್ರ ಸಚಿವ ಗುಲಾಬ್​ರಾವ್ ಪಾಟೀಲ್​ ಹೇಳಿದ್ದಾರೆ. ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಸಲಹೆ ನೀಡಿದರು.

ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳಾದ ಎಂಎಸ್‌ಆರ್‌ಟಿಸಿ ಬಸ್ ದರವನ್ನು ಅರ್ಧದಷ್ಟು ಕಡಿತಗೊಳಿಸುವುದು, ಲಡ್ಕಿ ಬಹಿನ್ ಯೋಜನೆ ಮತ್ತು ಬಾಲಕಿಯರಿಗೆ ಉಚಿತ ಶಿಕ್ಷಣವನ್ನು ಬಗ್ಗೆ ಮಾತನಾಡಿದರು.
ನಾವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರೂ ಸಹ, ಇಂದು ಕೆಟ್ಟ ಘಟನೆಗಳು ನಡೆಯುತ್ತಿವೆ ಎಂದರು.

ಬಾಳಾಠಾಕ್ರೆ ಅಂದು ಮಹಿಳೆಯರು ಲಿಪ್ಸ್ಟಿಕ್ ಜೊತೆಗೆ ಮೆಣಸಿನ ಪುಡಿ ಮತ್ತು ರಾಮಪುರಿ ಚಾಕುವನ್ನು ಒಯ್ಯಬೇಕು ಎಂದು ಹೇಳಿದ್ದಕ್ಕಾಗಿ ಪತ್ರಕರ್ತರು ಅವರನ್ನು ತೀವ್ರವಾಗಿ ಟೀಕಿಸಿದ್ದರು ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಯುವತಿ ಜತೆಗಿದ್ದ ಸ್ನೇಹಿತನಿಂದಲೇ ಅತ್ಯಾಚಾರ ಮಾಡಿಸಿ, ವಿಡಿಯೋ ಮಾಡಿ ಇಬ್ಬರು ಪರಾರಿ

ಆದರೆ ಇಂದಿನ ಪರಿಸ್ಥಿತಿಯೂ ಹಾಗೆಯೇ ಇದೆ. ಇಂದಿನ ಯುವತಿಯರು ತಮ್ಮ ಆತ್ಮರಕ್ಷಣೆಗಾಗಿ ಇದನ್ನು ಮಾಡಲೇ ಬೇಕಿದೆ ಎಂದು ಪಾಟೀಲ್ ಹೇಳಿದರು.

ಫೆಬ್ರವರಿ 25 ರಂದು ಪುಣೆಯ ಎಂಎಸ್‌ಆರ್‌ಟಿಸಿ ಡಿಪೋದಲ್ಲಿ 26 ವರ್ಷದ ಯುವತಿ ಮೇಲಿನ ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧದ ಇತ್ತೀಚಿನ ಅಪರಾಧ ಪ್ರಕರಣಗಳನ್ನು ಅವರು ಉಲ್ಲೇಖಿಸಿದರು. ಸ್ವರ್ಗೇಟ್​ ಬಳಿ ಬಸ್​ಗಾಗಿ ಕಾಯುತ್ತಿದ್ದ ಯುವತಿಗೆ ಬಸ್ ಬೇರೆಡೆ ಬರುತ್ತದೆ ಎಂದು ಹೇಳಿ ಕರೆದೊಯ್ದು ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ