ಮಹಿಳೆಯರು 70 ಗಂಟೆಗಿಂತ ಹೆಚ್ಚು ದುಡಿಯುತ್ತಾರೆ: ನಾರಾಯಣ ಮೂರ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಧಿಕಾ ಗುಪ್ತಾ

|

Updated on: Oct 30, 2023 | 4:13 PM

ಭಾರತೀಯ ಮಹಿಳೆಯರು ದಶಕಗಳಿಂದ ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರು, ಯಾರೂ ಅದರ ಬಗ್ಗೆ ಗಮನ ಹರಿಸಿಲ್ಲ. ಕಚೇರಿಗಳು ಮತ್ತು ಮನೆಗಳ ನಡುವೆ, ಅನೇಕ ಭಾರತೀಯ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಜತೆಗೆ ಮುಂದಿನ ಪೀಳಿಗೆಯ ಮಕ್ಕಳನ್ನು ನಿರ್ಮಾಣ ಮಾಡಲು ಎಪ್ಪತ್ತು ಗಂಟೆಗಳಿಗಿಂತ ಹೆಚ್ಚು ಕಾಲ ದುಡಿಯುತ್ತಿದ್ದಾರೆ ಎಂದು ನಾರಾಯಣ ಮೂರ್ತಿ ಹೇಳಿಕೆಗೆ ಎಡೆಲ್‌ವೀಸ್ ಮ್ಯೂಚುವಲ್ ಫಂಡ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ರಾಧಿಕಾ ಗುಪ್ತಾ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳೆಯರು 70 ಗಂಟೆಗಿಂತ ಹೆಚ್ಚು ದುಡಿಯುತ್ತಾರೆ: ನಾರಾಯಣ ಮೂರ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಧಿಕಾ ಗುಪ್ತಾ
ರಾಧಿಕಾ ಗುಪ್ತಾ ಮತ್ತು ನಾರಾಯಣ ಮೂರ್ತಿ
Follow us on

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Narayan Murthy) ಅವರ ಹೇಳಿಕೆ, ಈಗ ಎಲ್ಲ ಕಡೆ ಭಾರೀ ಚರ್ಚೆಗೆ ಕಾರಣವಾಗಿದೆ. ದೇಶದ ಒಟ್ಟಾರೆ ಕೆಲಸದ ಉತ್ಪಾದಕತೆ ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ಭಾರತದ ಯುವಕರು ಪ್ರತಿ ವಾರ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಅನೇಕರು ಬೆಂಬಲಿಸಿದರೆ, ಇನ್ನು ಕೆಲವರು ವಿರೋಧಿಸಿದ್ದಾರೆ. ನಾರಾಯಣ ಮೂರ್ತಿ ಅವರ ಈ ಹೇಳಿಕೆಯನ್ನು JSW ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರು ಬೆಂಬಲಿಸಿದರು. ಆದರೆ ಇದೀಗ ನಾರಾಯಣ ಮೂರ್ತಿ ಮಾತನ್ನು ಎಡೆಲ್‌ವೀಸ್ ಮ್ಯೂಚುವಲ್ ಫಂಡ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ರಾಧಿಕಾ ಗುಪ್ತಾ (Radhika Gupta) ಅವರು ವಿಭಿನ್ನವಾಗಿ ವಾದಿಸಿದ್ದಾರೆ. ಭಾರತೀಯ ಮಹಿಳೆಯರು ದಶಕಗಳಿಂದ ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರು, ಯಾರೂ ಅದರ ಬಗ್ಗೆ ಗಮನ ಹರಿಸಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್​​​ನಲ್ಲಿ (ಈ ಹಿಂದಿನ ಟ್ವಿಟರ್​​) ರಾಧಿಕಾ ಗುಪ್ತಾ ಅವರು ಹಂಚಿಕೊಂಡಿದ್ದಾರೆ. ಕಚೇರಿಗಳು ಮತ್ತು ಮನೆಗಳ ನಡುವೆ, ಅನೇಕ ಭಾರತೀಯ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಜತೆಗೆ ಮುಂದಿನ ಪೀಳಿಗೆಯ ಮಕ್ಕಳನ್ನು ನಿರ್ಮಾಣ ಮಾಡಲು ಎಪ್ಪತ್ತು ಗಂಟೆಗಳಿಗಿಂತ ಹೆಚ್ಚು ಕಾಲ ದುಡಿಯುತ್ತಿದ್ದಾರೆ. ಆದರೆ ಈ ಬಗ್ಗೆ ಯಾರು ಕೂಡ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ. ಈ ಪೋಸ್ಟ್​​​​ ಎಕ್ಸ್​​ನಲ್ಲಿ 74,000 ಜನ ವೀಕ್ಷಣೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಅನೇಕ ಬಳಕೆದಾರರೂ ಪ್ರತಿಕ್ರಿಯೆ ನೀಡಿದ್ದಾರೆ.

ಒಬ್ಬ ಬಳಕೆದಾದರೂ ಭಾರತೀಯ ಮಹಿಳೆಯರ ದಣಿವರಿಯದ ಸಮರ್ಪಣೆ ಮನ್ನಣೆಗೆ ಅರ್ಹವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಇದು ನಿಜವಾದ ಮಾತು, ಮಹಿಳೆಯರು ಮನೆ ಸೇರಿದಂತೆ ಹೊರಗೆ ಕೂಡ 70 ಗಂಟೆಗಿಂತಲ್ಲೂ ಹೆಚ್ಚಾಗಿ ಕೆಲಸ ಮಾಡುತ್ತಾರೆ. ವಾರದ ಪ್ರತಿದಿನ ಅವರು ಕೆಲಸ ಮಾಡುತ್ತಾರೆ. ಆದರೆ ಅವರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಹೇಳಿದ್ದಾರೆ.

ರಾಧಿಕಾ ಗುಪ್ತಾ ಅವರು ಟ್ವೀಟ್​​

ಇದನ್ನೂ ಓದಿ:ಜನರು ಶಿಸ್ತು, ಶ್ರಮ ಹಾಕದಿದ್ದರೆ ಯಾವ ಸರ್ಕಾರ ಬಂದರೂ ಅಷ್ಟೇ; ಯುವಕರು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು: ಇನ್ಫೋಸಿಸ್ ನಾರಾಯಣಮೂರ್ತಿ

ಮಹಿಳೆ ಕಚೇರಿಗೆ ಹೋಗಿ ಕೆಲಸ ಮಾಡದಿದ್ದರು, ಮನೆಯಲ್ಲಿ ಎಲ್ಲರ ಸೇವೆಯನ್ನು ಮಾಡುತ್ತಾರೆ. ಇದು ಮನೆಯವರ ಕೆಲಸದಲ್ಲಿ ಮಹಿಳೆಯರು ತೆಗೆದುಕೊಳ್ಳವ ಜವಾಬ್ದಾರಿ. ಮನೆಯವರ ಶ್ರಮಕ್ಕೆ ಹಾಗೂ ಭವಿಷ್ಯದ ಮಕ್ಕಳ ಜೀವನಕ್ಕೆ 70 ಗಂಟೆಗಳ ಕಾಲ ದುಡಿಯುತ್ತಾರೆ ಎಂದು ಮತ್ತೊಬ್ಬ ವ್ಯಕ್ತಿ ರಿಟ್ವೀಟ್​​ ಮಾಡಿದ್ದಾರೆ. ಈ ಪಿತೃಪ್ರಧಾನ ಸಮಾಜವನ್ನು ಮೊದಲು ಬದಲಾವಣೆ ಮಾಡಬೇಕು. ಮಹಿಳೆಯರು ಪ್ರತಿದಿನ ಗುಲಾಮರಾಗಿ ಬದುಕಬೇಕಾಗಿದೆ. ಅವರಿಗೂ ಕೆಲಸಕ್ಕೆ ಹೋಗುವ ಅವಕಾಶ ನೀಡಬೇಕು. ಪುರುಷ ಮತ್ತು ಮಹಿಳೆಯನ್ನು ಸಮಾನವಾಗಿ ನೋಡುವವರೆಗೆ ಈ ಸ್ಥಿತಿ ಬದಲಾಗುವುದಿಲ್ಲ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Mon, 30 October 23