ಮರಾಠ ಮೀಸಲಾತಿ ಹೋರಾಟ: ಎನ್‌ಸಿಪಿ ಶಾಸಕನ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು
Maratha Reservation Protest: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ(Maratha Reservation) ವಿಚಾರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ, ಇಲ್ಲಿನ ಬೀಡ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಎಎನ್ಐ ಹಂಚಿಕೊಂಡ ವಿಡಿಯೋದಲ್ಲಿ ಸೋಲಂಕೆ ಅವರ ಮನೆಯು ಧಗಧಗನೆ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಮನೆಯಿಂದ ದಟ್ಟ ಹೊಗೆ ಏರುತ್ತಿತ್ತು.
ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ(Maratha Reservation) ವಿಚಾರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ, ಇಲ್ಲಿನ ಬೀಡ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಎಎನ್ಐ ಹಂಚಿಕೊಂಡ ವಿಡಿಯೋದಲ್ಲಿ ಸೋಲಂಕೆ ಅವರ ಮನೆಯು ಧಗಧಗನೆ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಮನೆಯಿಂದ ದಟ್ಟ ಹೊಗೆ ಏರುತ್ತಿತ್ತು.
ಶಾಸಕ ಸೋಲಂಕೆ ಮಾತನಾಡಿ, ದಾಳಿ ನಡೆದಾಗ ನಾನು ಮನೆಯೊಳಗಿದ್ದೆ, ಅದೃಷ್ಟವಶಾತ್ ನನ್ನ ಕುಟುಂಬಕ್ಕೆ ಹಾಗೂ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಆದರೆ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿದೆ ಎಂದು ಹೇಳಿದ್ದಾರೆ.
ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ನಿವಾಸದ ಮೇಲೆ ಮರಾಠಾ ಮೀಸಲಾತಿ ಪರ ಪ್ರತಿಭಟನಾಕಾರರು ನಡೆಸಿದ ದಾಳಿಗೆ ಸಿಎಂ ಏಕನಾಥ್ ಶಿಂಧೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಭಟನೆ ಯಾವ ತಿರುವು ಪಡೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಮನೋಜ ಜಾರಂಗೆ ಪಾಟೀಲ್ (ಮರಾಠಾ ಮೀಸಲಾತಿ ಹೋರಾಟಗಾರ) ಗಮನಹರಿಸಬೇಕು ಎಂದರು.
ಮತ್ತಷ್ಟು ಓದಿ: ಮರಾಠಾ ಮೀಸಲಾತಿ ಪ್ರತಿಭಟನೆ: ಜಲ್ನಾದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿ ಪ್ರಹಾರ
ಮರಾಠ ಸಮುದಾಯಕ್ಕೆ ಶಾಶ್ವತ ಮೀಸಲಾತಿ ಕಲ್ಪಿಸಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಭರವಸೆ ನೀಡಿದರು. ಮರಾಠರ ನಾಡಾಗಿರುವ ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಮರಾಠರ ಮೀಸಲಾತಿಯ ವಿಷಯ ಬಿರುಸುಗೊಳ್ಳುತ್ತಿದೆ.
Maharashtra NCP MLA Prakash Solanke, whose residence in Beed has been attacked by Maratha reservation protestors says, “I was inside my home when it was attacked. Fortunately, none of my family members or staff were injured. We are all safe but there is a huge loss of property… https://t.co/WBjTmWvP5r
— ANI (@ANI) October 30, 2023
ವಾಸ್ತವವಾಗಿ, ಮರಾಠ ಸಮುದಾಯದ ಜನರು ಹಿಂದುಳಿದ ಜಾತಿಗಳಿಗೆ ಸಿಗುವ ಅದೇ ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣದಲ್ಲಿ ಪಡೆಯಬೇಕೆಂದು ಒತ್ತಾಯಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮರಾಠಾ ಮೀಸಲಾತಿಗೆ ಆಗ್ರಹಿಸಿ ಮರಾಠ ಮೋರ್ಚಾ ಸಂಚಾಲಕ ಮನೋಜ ಜಾರಂಗೆ ಪಾಟೀಲ ನೇತೃತ್ವದಲ್ಲಿ ಚಳವಳಿ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ