ಮರಾಠಾ ಮೀಸಲಾತಿ ಪ್ರತಿಭಟನೆ: ಜಲ್ನಾದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿ ಪ್ರಹಾರ
Maratha Reservation Protest:ಜಲ್ನಾದಲ್ಲಿ ಲಾಠಿ ಚಾರ್ಜ್ ಘಟನೆಯಿಂದಾಗಿ ಮರಾಠಾ ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ. ಧುಳೆ-ಸೋಲಾಪುರ ಹೆದ್ದಾರಿಯಲ್ಲಿ ಮರಾಠಾ ಚಳವಳಿಗಾರರು ವಾಹನ ಬೆಂಕಿ ಹಚ್ಚಿದರು. ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಹೆದ್ದಾರಿಯ ಮೇಲೂ ಕಲ್ಲು ತೂರಾಟ ನಡೆದಿದೆ. ಎಲ್ಲಾ ಪ್ರತಿಭಟನಾಕಾರರು ಶಾಂತವಾಗಿರುವಂತೆ ಪ್ರತಿಭಟನಾಕಾರ ಮನೋಜ ಜಾರಂಗೆ ಪಾಟೀಲ್ ಹೇಳಿದ್ದಾರೆ.
ಜಲ್ನಾ ಸೆಪ್ಟೆಂಬರ್ 1: ಮರಾಠ ಮೀಸಲಾತಿಗಾಗಿ ಮರಾಠ ಪ್ರತಿಭಟನಾಕಾರರು (Maratha protest) ಚಳವಳಿ ನಡೆಸುತ್ತಿದ್ದ ಜಲ್ನಾದಲ್ಲಿ (Jalna) ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಪ್ರತಿಭಟನಾಕಾರರು ನಿರ್ಮಿಸಿದ್ದ ಟೆಂಟ್‌ಗೆ ಪೊಲೀಸರು ನುಗ್ಗಿದ್ದು,ಪೊಲೀಸರು ಭಾರೀ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಟಿವಿ9 ಮರಾಠಿ ವರದಿ ಮಾಡಿದ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಈ ಸಂಬಂಧ ಘಟನೆ ನಡೆದಿದೆ. ಮರಾಠಾ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಕೆಲವು ಜನರೊಂದಿಗೆ ಉಪವಾಸ ಆರಂಭಿಸಿದರು. ಕಳೆದ ನಾಲ್ಕು ದಿನಗಳಿಂದ ಮನೋಜ್ ಜಾರಂಜ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ನೇರವಾಗಿ ಮೀಸಲಾತಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮನೋಜ ಜಾರಂಗೆ ಪಾಟೀಲ್ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಉಪವಾಸ ಕೈಬಿಡುವಂತೆ ಹಲವರು ಮನವಿ ಮಾಡಿದರು. ಆದರೆ ಅವರು ಉಪವಾಸದ ಕೈ ಬಿಡುವುದಿಲ್ಲ ಎಂದು ಅವರು ಹೇಳಿದ್ದರ. ಈ ಆಂದೋಲನದಲ್ಲಿ ಹಲವಾರು ಗ್ರಾಮಸ್ಥರು, ಸಂಘ-ಸಂಸ್ಥೆಗಳು ಭಾಗವಹಿಸಿವೆ. ಆದರೆ ಪೊಲೀಸರು ಈ ಚಳವಳಿಯನ್ನು ತಡೆಯಲು ಪ್ರಯತ್ನಿಸಿದ್ದರು.
#WATCH | Maharashtra | A clash broke out between Police and protesters demanding Maratha Reservation, in Jalna earlier today. Police resorted to lathi charge to disperse the protesters. Injuries reported. pic.twitter.com/tZ9uHAkF6B
— ANI (@ANI) September 1, 2023
ಲಾಠಿಚಾರ್ಜ್‌ಗೂ ಮುನ್ನ ಪೊಲೀಸರು ಮನೋಜ ಜರಂಗೆ ಪಾಟೀಲ್ ಮತ್ತು ಗ್ರಾಮಸ್ಥರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಪ್ರತಿಭಟನಾ ಸ್ಥಳದಲ್ಲಿ ಐದು ಸಾವಿರ ಜನ ಜಮಾಯಿಸಿದ್ದರು. ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರಿಂದ ಭಾರೀ ಲಾಠಿ ಪ್ರಹಾರ ನಡೆದಿದೆ ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮುಗಿದೇ ಹೋಯ್ತು ಅಂತೀರಿ, ಹಾಗಾದರೆ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿದ್ದು ಯಾರು?: ರಾಹುಲ್ ಗಾಂಧಿ
ಧುಳೆ-ಸೋಲಾಪುರ ಹೆದ್ದಾರಿಯಲ್ಲಿ ವಾಹನಗಳಿಗೆ ಬೆಂಕಿ
ಜಲ್ನಾದಲ್ಲಿ ಲಾಠಿ ಚಾರ್ಜ್ ಘಟನೆಯಿಂದಾಗಿ ಮರಾಠಾ ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ. ಧುಳೆ-ಸೋಲಾಪುರ ಹೆದ್ದಾರಿಯಲ್ಲಿ ಮರಾಠಾ ಚಳವಳಿಗಾರರು ವಾಹನ ಬೆಂಕಿ ಹಚ್ಚಿದರು. ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಹೆದ್ದಾರಿಯ ಮೇಲೂ ಕಲ್ಲು ತೂರಾಟ ನಡೆದಿದೆ. ಎಲ್ಲಾ ಪ್ರತಿಭಟನಾಕಾರರು ಶಾಂತವಾಗಿರುವಂತೆ ಪ್ರತಿಭಟನಾಕಾರ ಮನೋಜ ಜಾರಂಗೆ ಪಾಟೀಲ್ ಹೇಳಿದ್ದಾರೆ. ಏತನ್ಮಧ್ಯೆ, ಲಾಠಿ ಚಾರ್ಜ್‌ನಲ್ಲಿ ಕೆಲವು ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಗೃಹ ಸಚಿವರನ್ನು ಟಾರ್ಗೆಟ್ ಮಾಡಿದ ಶರದ್ ಪವಾರ್
ಈ ಘಟನೆಯಲ್ಲಿ ಶರದ್ ಪವಾರ್, ದೇವೇಂದ್ರ ಫಡ್ನವೀಸ್ ಅವರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. . ಜಲ್ನಾದಲ್ಲಿ ವ್ಯಕ್ತಪಡಿಸಿದ ಚಿತ್ರವನ್ನು ನಾವು ನೋಡಿದ್ದೇವೆ. ಅದಕ್ಕೆ ಪೊಲೀಸರನ್ನು ದೂಷಿಸುವುದು ಏನು? ಇದರ ಸಂಪೂರ್ಣ ಹೊಣೆ ರಾಜ್ಯ ಸರ್ಕಾ, ಗೃಹ ಇಲಾಖೆ ಮೇಲಿದೆ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಶರದ್ ಪವಾರ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ