ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾರೆ; ಜಡಿ ಮಳೆ,ಸುಡು ಬಿಸಿಲು ಏನೇ ಬರಲಿ ನಾವು ಹಿಂದೆ ಸರಿಯುವುದಿಲ್ಲ: ಬಜರಂಗ್ ಪುನಿಯಾ

|

Updated on: May 27, 2023 | 3:41 PM

ಈ ಹಿಂದೆ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಇದೇ ರೀತಿಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಕುಸ್ತಿಪಟುಗಳು ದೆಹಲಿಯಲ್ಲಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಿದ್ದಾರೆ. ಟ್ವಿಟರ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡ ಫೋಗಟ್, ಮಳೆ ಮತ್ತು ಗಾಳಿಯಿಂದಾಗಿ ನಮ್ಮ ಟೆಂಟ್ ಇಂದು ನೆಲಸಮವಾಗಿದೆ ಎಂದಿದ್ದರು.

ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾರೆ; ಜಡಿ ಮಳೆ,ಸುಡು ಬಿಸಿಲು ಏನೇ ಬರಲಿ ನಾವು ಹಿಂದೆ ಸರಿಯುವುದಿಲ್ಲ: ಬಜರಂಗ್ ಪುನಿಯಾ
ಕುಸ್ತಿಪಟುಗಳ ಪ್ರತಿಭಟನೆ
Follow us on

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಲ್ಲಿ (Wrestlers Protest)ಒಬ್ಬರಾದ ಬಜರಂಗ್ ಪುನಿಯಾ (Bajrang Punia) ಅವರು ಶನಿವಾರ ಬೆಳಿಗ್ಗೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ಗುಡುಗು ಸಹಿತ ಮಳೆಯಿಂದಾಗಿ ಟೆಂಟ್ ಹಾರುತ್ತಿರುವ ಫೋಟೊ ಟ್ವೀಟ್ ಮಾಡಿದ್ದಾರೆ.ಇಂದು ಬೆಳಿಗ್ಗೆ ಬಲವಾದ ಗಾಳಿ ಮತ್ತು ಮಳೆಯನ್ನು ಎದುರಿಸಬೇಕಾಯಿತು. ಸುಡುವ ಬಿಸಿಲು ಮತ್ತು ಭಾರೀ ಮಳೆಯನ್ನು ಎದುರಿಸುವಂತೆ ಮಾಡುವ ಮೂಲಕ ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಎಷ್ಟೇ ಸವಾಲುಗಳು ಬಂದರೂ ನ್ಯಾಯಕ್ಕಾಗಿ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಪುನಿಯಾ ಟ್ವೀಟ್ ಮಾಡಿದ್ದಾರೆ.

ಬಲವಾದ ಗಾಳಿಯ ವಿರುದ್ಧ ಕುಸ್ತಿಪಟುಗಳು ಟೆಂಟ್‌ಗಳನ್ನು ಹಿಡಿದಿಡಲು ಪ್ರಯತ್ನಿಸುತ್ತಿರುವ ವಿಡಿಯೊವನ್ನು ಪುನಿಯಾ ಹಂಚಿಕೊಂಡಿದ್ದಾರೆ.


ಈ ಹಿಂದೆ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಇದೇ ರೀತಿಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಕುಸ್ತಿಪಟುಗಳು ದೆಹಲಿಯಲ್ಲಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಿದ್ದಾರೆ. ಟ್ವಿಟರ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡ ಫೋಗಟ್, ಮಳೆ ಮತ್ತು ಗಾಳಿಯಿಂದಾಗಿ ನಮ್ಮ ಟೆಂಟ್ ಇಂದು ನೆಲಸಮವಾಗಿದೆ. ಇಂದು ರಾತ್ರಿ ಒದ್ದೆಯಾದ ಹಾಸಿಗೆಗಳ ಮೇಲೆ ಮಲಗುತ್ತೇವೆ. ಬಾಲ್ಯದಿಂದಲೂ ಕಷ್ಟಗಳನ್ನು ಕಂಡಿದ್ದೇನೆ, ಈ ಕಷ್ಟದ ರಾತ್ರಿಯೂ ಹಾದುಹೋಗುತ್ತದೆ. ಜಂತರ್ ಮಂತರ್‌ನಲ್ಲಿ ಕುಳಿತಿರುವ ನಮ್ಮೆಲ್ಲ ಕುಸ್ತಿಪಟುಗಳಿಂದ ನಿಮಗೆಲ್ಲರಿಗೂ ಶುಭ ರಾತ್ರಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.


ಶನಿವಾರದಂದು ಭಾರೀ ಮಳೆ ಮತ್ತು ಬಿರುಗಾಳಿ ಬೀಸಿದ್ದು ಮಳೆಯ ರಭಸಕ್ಕೆ ಮರಗಳು ನೆಲಕ್ಕುರುಳಿವೆ. ನಗರದಲ್ಲಿ ವಿಮಾನ ಸಂಚಾರದ ಮೇಲೂ ಪರಿಣಾಮ ಬೀರಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಬೆಳಿಗ್ಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ಮೋಡ ಆವೃತವಾಗಿವೆ.ಇಲ್ಲಿ ಗುಡುಗು ಸಹಿತ ಸಾಧಾರಣ ತೀವ್ರತೆಯ ಮಳೆ ಮತ್ತು 40-70 ಕಿಮೀ / ಗಂಟೆ ವೇಗದಲ್ಲಿ ಬಿರುಗಾಳಿಯ ಗಾಳಿಯು ಮುಂದಿನ 2 ಸಮಯದಲ್ಲಿ ದೆಹಲಿ-ಎನ್‌ಸಿಆರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಮುಂದುವರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: NITI Aayog Meeting: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ NITI ಆಯೋಗ ಸಭೆಗೆ 7 ಮುಖ್ಯಮಂತ್ರಿಗಳು ಗೈರು

ವಿನೇಶ್, ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವಾರು ಕುಸ್ತಿಪಟುಗಳು ಎಪ್ರಿಲ್ 23 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಪೈಲ್ವಾನರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸಿಂಗ್ ಅವರನ್ನು ಬಂಧಿಸಬೇಕೆಂದು ಇವರು ಒತ್ತಾಯಿಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ