‘ಯಾರ್ ತೇರಾ ಗ್ಯಾಂಗ್​​ಸ್ಟರ್’ ಎಂಬ ಸ್ಟೇಟಸ್ ಹಾಕಿದ್ದ ಬಾಬಾ ಸಿದ್ದಿಕ್ ಹಂತಕ

ಮೇ 26 ರಂದು ಈತ "ಕೆಜಿಎಫ್" ನ ಹಿನ್ನೆಲೆ ಸಂಗೀತದ ಜೊತೆಗೆ  “Powerful people make places powerful” ಎಂಬ ಡೈಲಾಗ್ ಜತೆ ನಗರದ ಸ್ಕೈಲೈನ್‌ನ ಸಂಕ್ಷಿಪ್ತ ವಿಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಬಾಬಾ ಸಿದ್ದಿಕ್  ಕೊಲೆಯಾದ ನಂತರ, ಶಿವಕುಮಾರ್ ಗೌತಮ್ ಅವರ Instagram ಅನುಯಾಯಿಗಳು ದ್ವಿಗುಣಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ

ಯಾರ್ ತೇರಾ ಗ್ಯಾಂಗ್​​ಸ್ಟರ್ ಎಂಬ ಸ್ಟೇಟಸ್ ಹಾಕಿದ್ದ ಬಾಬಾ ಸಿದ್ದಿಕ್ ಹಂತಕ
ಬಾಬಾ ಸಿದ್ದಿಕ್ ಅಂತಿಮ ಮೆರವಣಿಗೆ

Updated on: Oct 14, 2024 | 6:04 PM

ಮುಂಬೈ ಅಕ್ಟೋಬರ್ 14: ಮುಂಬೈ ರಾಜಕಾರಣಿ ಬಾಬಾ ಸಿದ್ದಿಕ್ (Baba Siddique) ಅವರನ್ನು ಕೊಂದ ಮೂವರು ಸದಸ್ಯರ ಗ್ಯಾಂಗ್‌ನ ಭಾಗವಾಗಿದ್ದ ಉತ್ತರ ಪ್ರದೇಶ ಮೂಲದ ಶಿವಕುಮಾರ್ ಗೌತಮ್ (Shiv Kumar Gautam) ತಲೆಮರೆಸಿಕೊಂಡಿದ್ದು, ಹಲವಾರು ತಿಂಗಳುಗಳಿಂದ ಸಾಮಾಜಿಕ ಮಾಧ್ಯಮದಲ್ಲಿ  ಗ್ಯಾಂಗ್​​ಸ್ಟರ್ ಎಂದೇ ಸ್ಟೇಟಸ್ ಹಾಕಿಕೊಂಡಿದ್ದಾನೆ. ಜುಲೈ 24 ರಂದು Instagram ನಲ್ಲಿ ಪೋಸ್ಟ್‌ನಲ್ಲಿ, “ಯಾರ್ ತೇರಾ ಗ್ಯಾಂಗ್​​ಸ್ಟರ್ ಹೈ ಜಾನಿ (ನಿಮ್ಮ ಸ್ನೇಹಿತ ದರೋಡೆಕೋರ)” ಎಂದು ಬರೆದಿದ್ದು, ಬೈಕ್ ನಲ್ಲಿ ಕುಳಿತಿರುವ ಪ್ರೊಫೈಲ್ ಫೋಟೊ ಇದೆ.

ಶಿವಕುಮಾರ್ ಗೌತಮ್ ಬಹ್ರೈಚ್‌ನ ಗಂದಾರಾ ಗ್ರಾಮದವರು. ಆತನಿಗೆ ಯಾವುದೇ ಅಪರಾಧ ಇತಿಹಾಸವಿಲ್ಲ. ಈತ ಪುಣೆಯ ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡಲು ಮಹಾರಾಷ್ಟ್ರಕ್ಕೆ ಹೋಗಿದ್ದ. “ಶರೀಫ್ ಬಾಪ್ ಹೈ… ಹಮ್ ನಹೀನ್ (ನನ್ನ ತಂದೆ ಪ್ರಾಮಾಣಿಕ ವ್ಯಕ್ತಿ, ನಾನಲ್ಲ) ಎಂದು ಆತ ಬರೆದಿದ್ದಾನೆ ಎಂದು ಜುಲೈ 8 ರಂದು, ಪಿಟಿಐ ವರದಿ ಮಾಡಿತ್ತು.

ಮೇ 26 ರಂದು ಈತ “ಕೆಜಿಎಫ್” ನ ಹಿನ್ನೆಲೆ ಸಂಗೀತದ ಜೊತೆಗೆ  “Powerful people make places powerful” ಎಂಬ ಡೈಲಾಗ್ ಜತೆ ನಗರದ ಸ್ಕೈಲೈನ್‌ನ ಸಂಕ್ಷಿಪ್ತ ವಿಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಬಾಬಾ ಸಿದ್ದಿಕ್  ಕೊಲೆಯಾದ ನಂತರ, ಶಿವಕುಮಾರ್ ಗೌತಮ್ ಅವರ Instagram ಅನುಯಾಯಿಗಳು ದ್ವಿಗುಣಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಾಬಾ ಸಿದ್ದಿಕ್ ನನ್ನು ಕೊಂದಿದ್ದು ಆತನ ತಂದೆ ಸುಮನ್ ಗೆ ನಂಬಲಾಗಲಿಲ್ಲ. ಸುಮನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಹೋಳಿ ಹಬ್ಬದ ವೇಳೆ ಕೊನೆಯ ಬಾರಿಗೆ ಗಂಡಾರೆಗೆ ಮಗ ಭೇಟಿ ನೀಡಿದ್ದ. ಭೇಟಿಯ ನಂತರ ಗೌತಮ್ ಏಪ್ರಿಲ್ ಮೊದಲ ವಾರದಲ್ಲಿ ಪುಣೆಗೆ ತೆರಳಿದ್ದ ಎಂದಿದ್ದಾರೆ.

66 ವರ್ಷದ ಬಾಬಾ ಸಿದ್ದಿಕ್ ಅವರನ್ನು ಅವರ ಕಚೇರಿಯ ಹೊರಗೆ ಮೂರು ಜನರು ಗುಂಡಿಕ್ಕಿ ಕೊಂದಿದ್ದಾರೆ. ಆತನಿಗೆ ಮೂರು ಗುಂಡುಗಳು ತಗುಲಿದ್ದವು. ಇಬ್ಬರು ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಗೌತಮ್ ತಲೆಮರೆಸಿಕೊಂಡಿದ್ದಾನೆ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹತ್ಯೆಯ ಹೊಣೆ ಹೊತ್ತುಕೊಂಡಿದೆ. ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ನಟ ಸಲ್ಮಾನ್ ಖಾನ್ ಅವರ ಸಾಮೀಪ್ಯದಿಂದಾಗಿ ಸಿದ್ದಿಕ್ ಅವರನ್ನು ಕೊಲ್ಲಲಾಗಿದೆ.

ಪುಣೆಯಲ್ಲಿ ಪ್ರವೀಣ್ ಲೋಂಕರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಪಿತೂರಿಗಾರರಲ್ಲಿ ಒಬ್ಬ ಎಂದು ಹೇಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಬರೆದಿರುವ ಅವರ ಸಹೋದರ ಶುಭಂ ಲೋಂಕರ್ ಅವರನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಬಾಬಾ ಸಿದ್ದಿಕ್ ಹತ್ಯೆಗೆ ಗುಜರಾತ್ ನಂಟು ಇದೆ, ಅಮಿತ್ ಶಾ ರಾಜೀನಾಮೆ ನೀಡಲಿ: ಸಂಜಯ್ ರಾವತ್

ಪ್ರವೀಣ್ ಮತ್ತು ಶುಭಂ ಇಬ್ಬರು ಶೂಟರ್‌ಗಳನ್ನು ಸೇರಿಸಿಕೊಂಡಿದ್ದಾರೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ. ಉತ್ತರ ಪ್ರದೇಶದ ನಿವಾಸಿಗಳಾದ ಧರ್ಮರಾಜ್ ರಾಜೇಶ್ ಕಶ್ಯಪ್ ಮತ್ತು ಗೌತಮ್. ಮೂರನೇ ಶೂಟರ್ ಗುರ್ಮೈಲ್ ಬಲ್ಜಿತ್ ಸಿಂಗ್ ಹರ್ಯಾಣದವ ಎಂದು ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ