ದೆಹಲಿಯಿಂದ ಕದ್ದ ಎಸ್ಯುವಿ ರಾಜಸ್ಥಾನದಲ್ಲಿ ಪತ್ತೆ; ಐ ಲವ್ ಇಂಡಿಯಾ ಎಂಬ ಚೀಟಿ ಅಂಟಿಸಿದ್ದ ಕಳ್ಳ
ವಿಂಡ್‌ಸ್ಕ್ರೀನ್‌ನಲ್ಲಿ ಬರೆದ ಚೀಟಿಯಲ್ಲಿ “ಈ ಕಾರನ್ನು ದೆಹಲಿಯಿಂದ ಕಳವು ಮಾಡಲಾಗಿದೆ. ದಯವಿಟ್ಟು ಪೊಲೀಸರಿಗೆ ತುರ್ತು ಕರೆ ಮಾಡಿ ತಿಳಿಸಿ..”ಎಂದು ಬರೆಯಲಾಗಿದೆ. ಜೈಪುರ ಬಿಕಾನೇರ್ ಹೆದ್ದಾರಿಯ ರಸ್ತೆ ಬದಿಯ ಹೋಟೆಲ್ ಬಳಿ ವಾಹನ ನಿಲ್ಲಿಸಿದ್ದನ್ನು ಕಂಡ ನಿವಾಸಿಯೊಬ್ಬರು ಭಾನುವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಪುರ ಅಕ್ಟೋಬರ್ 14: ಬಿಕಾನೇರ್‌ನ (Bikaner) ನಪಾಸರ್ ಪಟ್ಟಣದಲ್ಲಿ ನಂಬರ್ ಪ್ಲೇಟ್ ಇಲ್ಲದೇ ಬಿಟ್ಟುಹೋಗಿರುವ ಸ್ಕಾರ್ಪಿಯೋ ಕಾರನ್ನು (Scorpio car) ಪೊಲೀಸರು ಪತ್ತೆ ಮಾಡಿದ್ದಾರೆ. ದೆಹಲಿಯ ಪಾಲಂ ಕಾಲೋನಿಯಲ್ಲಿರುವ ವ್ಯಕ್ತಿಯೊಬ್ಬರಿಗೆ ಸೇರಿದ್ದ ಕಾರು ಇದಾಗಿದ್ದು, ಈ ಕಾರಿನಲ್ಲಿ ಅಂಟಿಸಿದ್ದ ಮೂರು ಚೀಟಿಗಳು ಮಾಲೀಕರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಹಾಯ ಮಾಡಿದೆ. ಸ್ಕಾರ್ಪಿಯೋ ಹಿಂದಿನ ಗ್ಲಾಸ್‌ಗೆ ಎರಡು ಚೀಟಿ ಅಂಟಿಸಲಾಗಿದ್ದು, ಅದರಲ್ಲಿ ಈ ಕಾರನ್ನು ದೆಹಲಿಯ ಪಾಲಂನಿಂದ ಕಳವು ಮಾಡಲಾಗಿದೆ, ಕ್ಷಮಿಸಿ ಎಂದು ಬರೆಯವಾಗಿದೆ. ಇನ್ನೊಂದು ಚೀಟಿಯಲ್ಲಿ “DL 9 CA Z2937″ ಎಂಬ ಕಾರ್ ಸಂಖ್ಯೆಯನ್ನು ಸಹ ಬರೆಯಲಾಗಿದೆ. ಇದು ಕಾರಿನ ಮಾಲೀಕರನ್ನು ಕಂಡುಹಿಡಿಯಲು ಪೊಲೀಸರಿಗೆ ಸಹಾಯ ಮಾಡಿತ್ತು. ಜೊತೆಗೆ ಅಂಟಿಕೊಂಡಿರುವ ಇನ್ನೊಂದು ಚೀಟಿಯಲ್ಲಿ ” ಐ ಲವ್ ಇಂಡಿಯಾ ” ಎಂದು ಬರೆದಿತ್ತು.
ವಿಂಡ್‌ಸ್ಕ್ರೀನ್‌ನಲ್ಲಿ ಬರೆದ ಚೀಟಿಯಲ್ಲಿ “ಈ ಕಾರನ್ನು ದೆಹಲಿಯಿಂದ ಕಳವು ಮಾಡಲಾಗಿದೆ. ದಯವಿಟ್ಟು ಪೊಲೀಸರಿಗೆ ತುರ್ತು ಕರೆ ಮಾಡಿ ತಿಳಿಸಿ..”ಎಂದು ಬರೆಯಲಾಗಿದೆ. ಜೈಪುರ ಬಿಕಾನೇರ್ ಹೆದ್ದಾರಿಯ ರಸ್ತೆ ಬದಿಯ ಹೋಟೆಲ್ ಬಳಿ ವಾಹನ ನಿಲ್ಲಿಸಿದ್ದನ್ನು ಕಂಡ ನಿವಾಸಿಯೊಬ್ಬರು ಭಾನುವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಕಾರಿನ ನೋಂದಣಿ ಸಂಖ್ಯೆಯನ್ನು ಬಳಸಿ ಕಾರಿನ ಮಾಲೀಕ ದೆಹಲಿಯ ಪಾಲಂ ಕಾಲೋನಿಯ ನಿವಾಸಿ ಎಂದು ಪತ್ತೆ ಹಚ್ಚಿದ್ದಾರೆ. ಅಕ್ಟೋಬರ್ 10 ರಂದು ಮಾಲೀಕರು ಎಫ್‌ಐಆರ್ ದಾಖಲಿಸಿದ್ದರು. ಬಿಕಾನೇರ್ ದೆಹಲಿಯಿಂದ 450 ಕಿಲೋಮೀಟರ್ ದೂರದಲ್ಲಿದೆ. ವಾಹನವನ್ನು ಅಪರಾಧಕ್ಕಾಗಿ ಬಳಸಿ ಅಲ್ಲಿ ಬಿಟ್ಟುಹೋಗಿರಬಹುದು ಎಂದು ಪೊಲೀಸರು ನಂಬಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ: ಮೂವರು ದುರ್ಮರಣ
ದೆಹಲಿ ಪೊಲೀಸರ ತಂಡವು ವಾಹನದ ಮಾಲೀಕ ವಿನಯ್ ಕುಮಾರ್ ಅವರೊಂದಿಗೆ ಬಿಕಾನೇರ್ ತಲುಪಿದೆ. ನಾವು ವಾಹನವನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸುತ್ತಿದ್ದೇವೆ ಎಂದು ನಪಾಸರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಸ್ವೀರ್ ಸಿಂಗ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. “ಈ ವಾಹನವನ್ನು ಅಪರಾಧವನ್ನು ಕಾರ್ಯಗತಗೊಳಿಸಲು ಬಳಸಲಾಗಿದೆಯೇ ಅಥವಾ ಇಲ್ಲವೇ ಎಂದು ನಾವು ಹೇಳಲು ಸಾಧ್ಯವಿಲ್ಲ. ಅದು ತನಿಖೆಯ ವಿಷಯವಾಗಲಿದೆ. ಕದ್ದ ವಾಹನಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಎಫ್‌ಐಆರ್ ದಾಖಲಾಗಿರುವುದರಿಂದ ದೆಹಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ