ವೈದ್ಯೆಯ ಯಡವಟ್ಟು: ಮೂರು ಆಸ್ಪತ್ರೆ ಅಲೆದರೂ ಉಳಿಯಲಿಲ್ಲ ಬಾಣಂತಿ ಜೀವ!

ಶಹಾಪುರ ತಾಲೂಕು ಆಸ್ಪತ್ರೆ ಮುಂದೆ ಈ ರೀತಿ ಪ್ರತಿಭಟನೆ ನಡೆಯುತ್ತಿರೋದ್ದಕ್ಕೆ ಕಾರಣ ಅಂದರೆ 25 ವರ್ಷದ ಭವಾನಿ ಎಂಬ ಬಾಣಂತಿ ಸಾವನ್ನಪ್ಪಿದ್ದಾಳೆ. ನಿನ್ನೆ ರಾತ್ರಿ ಇದೆ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಭವಾನಿ ಕೊನೆಯುಸಿರುವ ಎಳೆದಿದ್ದಾಳೆ. ಈ ಬಾಣಂತಿ ಭವಾನಿ ಸಾವಿಗೆ ಇದೆ ಆಸ್ಪತ್ರೆಯ ವೈದ್ಯೆ ಸರೋಜ ಪಾಟೀಲ್ ಎಂದು ಭವಾನಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ವೈದ್ಯೆಯ ಯಡವಟ್ಟು: ಮೂರು ಆಸ್ಪತ್ರೆ ಅಲೆದರೂ ಉಳಿಯಲಿಲ್ಲ ಬಾಣಂತಿ ಜೀವ!
ವೈದ್ಯೆಯ ಯಡವಟ್ಟು: ಮೂರು ಆಸ್ಪತ್ರೆ ಅಲೆದರೂ ಉಳಿಯಲಿಲ್ಲ ಬಾಣಂತಿ ಜೀವ!
Follow us
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2024 | 9:58 PM

ಯಾದಗಿರಿ, ಅಕ್ಟೋಬರ್​ 14: ಆ ದಂಪತಿಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ವರ್ಷದಲ್ಲೇ ಮುದ್ದಾದ ಮಗುವಿನ ನಿರೀಕ್ಷೆಯಲ್ಲಿದ್ದರು. ಒಂದು ವರ್ಷ ಅಲ್ಲದೇ ಹೋದರು ಎರಡು ವರ್ಷಕ್ಕೆ ಮಗುವಿನ ಜನ್ಮದ ನಿರೀಕ್ಷೆ ಮಾಡಿದರು. ನಿರೀಕ್ಷೆಯಂತೆ ಆಕೆ ಗರ್ಭಿಣಿಯಾಗಿ (pregnant) ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದರು. ಮುದ್ದಾದ ಮಗು ಮನೆ ಬರುತ್ತೆ ಅಂತ ಅಂದುಕೊಂಡವರಿಗೆ ವೈದ್ಯರ ನಿರ್ಲಕ್ಷ್ಯದಿಂದ ಶಾಕ್ ಆಗಿದೆ. ಮಗುವೇನು ಮನೆಗೆ ಬಂದಿದೆ ಆದರೆ ಮಗುವಿನ ತಾಯಿ ಮಾತ್ರ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ.

ಶಹಾಪುರ ತಾಲೂಕು ಆಸ್ಪತ್ರೆ ಮುಂದೆ ಈ ರೀತಿ ಪ್ರತಿಭಟನೆ ನಡೆಯುತ್ತಿರೋದ್ದಕ್ಕೆ ಕಾರಣ ಅಂದರೆ 25 ವರ್ಷದ ಭವಾನಿ ಎಂಬ ಬಾಣಂತಿ ಸಾವನ್ನಪ್ಪಿದ್ದಾಳೆ. ನಿನ್ನೆ ರಾತ್ರಿ ಇದೆ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಭವಾನಿ ಕೊನೆಯುಸಿರುವ ಎಳೆದಿದ್ದಾಳೆ. ಈ ಬಾಣಂತಿ ಭವಾನಿ ಸಾವಿಗೆ ಇದೆ ಆಸ್ಪತ್ರೆಯ ವೈದ್ಯೆ ಸರೋಜ ಪಾಟೀಲ್ ಎಂದು ಭವಾನಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ವೈದ್ಯೆ ಸರೋಜ ಚಿಕಿತ್ಸೆ ಕೊಡುವ ಬದಲು ನಿರ್ಲಕ್ಷ್ಯ ತೋರಿದ್ದಕ್ಕೆ ಭವಾನಿ ಸಾವನ್ನಪ್ಪಿದ್ದಾಳೆ ಅಂತ ಪೋಷಕರು ಆರೋಪಿಸುತ್ತಿದ್ದಾರೆ. ಅಷ್ಟಕ್ಕೂ ಇಲ್ಲಿ ಆಗಿದ್ದಾದ್ರು ಏನು ಅಂದ್ರೆ ಶಹಾಪುರ ತಾಲೂಕಿನ ದೋರನಹಳ್ಳಿಯ ಮಹಾಂತೇಶ್ ಪತ್ನಿ 25 ವರ್ಷದ ಸರೋಜ ಕಳೆದ ತಿಂಗಳು ಅಂದ್ರೆ ಸೆಪ್ಟಂಬರ್ 1 ರಂದು ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು, ಡಕಾಯಿತನ​ ಮೇಲೆ ಫೈರಿಂಗ್​

ಇದೆ ವೇಳೆ ಆಸ್ಪತ್ರೆಯಲ್ಲಿ ವೈದ್ಯೆ ಸರೋಜ ಡ್ಯೂಟಿಯಲ್ಲಿದ್ರು ಹೀಗಾಗಿ ಭವಾನಿಗೆ ತಪಾಸಣೆ ನಡೆಸಿದ್ದಾರೆ. ಹೆರಿಗೆ ನೋವು ಕಾಣಿಸಿಕೊಳ್ಳದಿದರು ಹೆರಿಗೆ ಮಾಡಬೇಕು ಅಂತ ಹೇಳಿದ್ರಂತೆ. ಆರಂಭದಲ್ಲಿ ನಾರ್ಮಲ್ ಹೆರಿಗೆ ಆಗುತ್ತೆ ಅಂತ ಹೇಳಿದ್ರು ಆದ್ರೆ ಮಾರನೇ ದಿನ ಸಿಜರಿನ್ ಮಾಡಿಯೇ ಹೆರಿಗೆ ಮಾಡಬೇಕು ಅಂತ ಹೇಳಿದ್ದಾರೆ. ಇದಕ್ಕೆ ಪೋಷಕರು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ವೈದ್ಯರು ಗರ್ಣಿಯಾಗಿದ್ದ ಭವಾನಿಯ ರಕ್ತ ಪರೀಕ್ಷೆ ನಡೆಸಲು ರಕ್ತದ ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆ ಕಳುಹಿಸಿದ್ದಾರೆ. ಆದರೆ ರಕ್ತದ ಮಾದರಿಯ ವರದಿ ಬರುವ ಮುನ್ನವೆ ಸಿಜರಿನ್ ಮಾಡಿ ಹೆರಿಕೆ ಮಾಡಿದ್ದಾರೆ. ರಕ್ತದ ಮಾದರಿಯ ವರದಿ ಬಂದಾಗ ಬಿಳಿ ರಕ್ತ ಕಣಗಳ ಕೊರತೆ ಹಾಗೂ ನಾನಾ ರೀತಿ ಕಾಯಿಗಳು ಪತ್ತೆಯಾಗಿವೆ ಇಷ್ಟೇಲ್ಲ ಇದ್ರು ಸಿಜರಿನ್ ಮಾಡಿದ್ದಕ್ಕೆ ಈ ರೀತಿ ಆಗಿದೆ ಅಂತ ಪೋಷಕರು ಆರೋಪಿಸುತ್ತಿದ್ದಾರೆ.

ಇನ್ನು ಹೆರಿಗೆ ಮಾಡಿದ ಬಳಿಕ ಭವಾನಿಗೆ ಗಂಡು ಮಗುವಾಗಿದೆ. ಆದರೆ ಹೆರಿಗೆ ಬಳಿಕ ನಾನಾ ರೀತಿಯ ಸಮಸ್ಯೆಗಳು ಉಲ್ಬಣಗೊಂಡಿವೆ. ಹೀಗಾಗಿ ಇದೆ ವೈದ್ಯೆ ಸರೋಜ ಹೆಚ್ಚಿನ ಚಿಕಿತ್ಸೆ ಬೇಕಾಗಿದೆ ಹೀಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲ ಮಾಡಬೇಕು ಅಂತ ಹೇಳಿದ್ದಾರೆ. ಹೀಗಾಗಿ ಖುದ್ದು ವೈದ್ಯ ಸರೋಜ ಭವಾನಿಗೆ ಆಂಬ್ಯೂಲೆನ್ಸ್​ನಲ್ಲಿ ಕಲಬುರಗಿಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ. ಕಲಬುರಗಿಯ ಖಾಸಗಿ ಆಸ್ಪತ್ರೆ ವೈದ್ಯರು ಮತ್ತೊಮ್ಮೆ ಶಸ್ತ್ರ ಚಿಕಿತ್ಸೆ ನಡೆಸಿ ಸುಮಾರು 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು 10 ಲಕ್ಷ ಬಿಲ್ ಮಾಡಿ ಕೈ ಬಿಟ್ಟಿದ್ದಾರೆ. ಹೀಗಾಗಿ ಭವಾನಿಗೆ ಮತ್ತಷ್ಟು ಚಿಕಿತ್ಸೆ ಕೊಡಿಸೋಕೆ ಪೋಷಕರು ಸೋಲ್ಲಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ನಾಲ್ವರು ಸ್ಥಳದಲ್ಲೇ ಸಾವು

ಅಲ್ಲಿಯೂ ಸಹ 6 ಲಕ್ಷ ಹಣ ಖರ್ಚು ಮಾಡಿದ್ದಾರೆ. ಆದರೆ ಸ್ವಲ್ಪ ರಿಕವರಿ ಆಗ್ತಾಯಿದ್ದಾಗ್ಲೇ ದುಡ್ಡು ಖಾಲಿಯಾಗಿದ್ದಕ್ಕೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ ಹೀಗಾಗಿ ವಾಪಸ್ ಊರಿಗೆ ಕರೆದುಕೊಂಡು ಬಂದು ನಿನ್ನೆ ಮತ್ತೆ ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ನಿನ್ನೆ ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಇದೆ ಡಾ.ಸರೋಜಾ ಚಿಕಿತ್ಸೆ ನೀಡುವ ಬದಲು ಇರುವಂತ ಸಿಬ್ಬಂದಿಗೆ ಒಪ್ಪಿಸಿ ಮನೆಗೆ ಹೋಗಿದ್ದಾರಂತೆ. ಡ್ಯೂಟಿಯಲ್ಲಿದ್ರು ಚಿಕಿತ್ಸೆ ನೀಡದೆ ಸಿಬ್ಬಂದಿಗೆ ಹೇಳಿ ನಿರ್ಲಕ್ಷ್ಯ ತೋರಿದಿದ್ದಾರೆ. ಇದೆ ಕಾರಣಕ್ಕೆ ಭವಾನಿ ಸಾವನ್ನಪ್ಪಿದ್ದಾಳೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ದೋರನಹಳ್ಳಿ ಮಹಾಂತೇಶ್ ಕಳೆದ ಎರಡು ವರ್ಷದ ಹಿಂದೆ ಭವಾನಿ ಜೊತೆ ಮದುವೆಯಾಗಿದ್ರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಮಹಾಂತೇಶ್ ಮನೆಗೆ ಗಂಡು ಮಗುವೇನು ಬಂದಿದೆ ಆದ್ರೆ ಪತ್ನಿಯನ್ನ ಕಳೆದುಕೊಂಡಿದ್ದಾರೆ. ಇದೆ ಕಾರಣಕ್ಕೆ ಪ್ರತಿಭಟನೆ ವೈದ್ಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪತ್ನಿ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿದ್ದಾನೆ.

ಮೊದಲ ಮಗುವಿನ ನಿರೀಕ್ಷೆಯಿಲ್ಲಿದ್ದ ಕುಟುಂಬಕ್ಕೆ ಮುದ್ದಾದ ಮಗು ಬಂದಿದೆ ಆದರೆ ಮಗುವಿನ ತಾಯಿ ಮಾತ್ರ ವೈದ್ಯರ ನಿರ್ಲಕ್ಷ್ಯದಿಂದ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಇನ್ನು ಭವಾನಿ ಕುಟುಂಬಸ್ಥರು ವೈದ್ಯೆ ವಿರುದ್ಧ ಕ್ರಮಕ್ಕಾಗಿ ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದಾಖಲಿಸಿಕೊಂಡು ಯಾವು ರೀತಿ ತನಿಖೆ ನಡೆಸುತ್ತಾರೆ ಅಂತ ಕಾದು ನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ