ಸಾಮಾಜಿಕ ಜಾಲತಾಣದಲ್ಲಿ ದುರ್ಗಾ ಪೂಜೆಯ ಪೋಸ್ಟ್; ಹೆಂಡತಿ, ಅತ್ತೆಯನ್ನು ಕಡಿದು ಕೊಂದ ಪತಿ

ಪೊಲೀಸರ ಪ್ರಕಾರ, ಮೃತಳಾಗಿರುವ ಮಹಿಳೆ ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅದು ಆಕೆಯ ವಿಚ್ಛೇದಿತ ಪತಿಗೆ ಕೋಪ ತರಿಸಿತ್ತು. ನಂತರ, ಆ ಮಹಿಳೆ ತನ್ನ ತಾಯಿಯ ಜೊತೆ ದುರ್ಗಾ ಪೂಜೆಯ ಜಾತ್ರೆಯಿಂದ ಮನೆಗೆ ಬರುತ್ತಿದ್ದಾಗ ಆಕೆಯ ಮಾಜಿ ಗಂಡ ಅವರಿಬ್ಬರನ್ನೂ ಕೊಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ದುರ್ಗಾ ಪೂಜೆಯ ಪೋಸ್ಟ್; ಹೆಂಡತಿ, ಅತ್ತೆಯನ್ನು ಕಡಿದು ಕೊಂದ ಪತಿ
ಸಾಂದರ್ಭಿಕ ಚಿತ್ರ
Follow us
|

Updated on: Oct 14, 2024 | 3:44 PM

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ಒಂದು ವರ್ಷದಿಂದ ತನ್ನ ಹೆಂಡತಿಯಿಂದ ಬೇರೆಯಾಗಿ ಬೇರೆ ಕಡೆ ಬದುಕುತ್ತಿದ್ದ ವ್ಯಕ್ತಿಯೊಬ್ಬರು ಹೆಂಡತಿಯ ಫೇಸ್​ಬುಕ್ ಪೋಸ್ಟ್ ನೋಡಿ ಕೋಪದಿಂದ ಆಕೆ ಮತ್ತು ಆಕೆಯ ತಾಯಿಯನ್ನು ಕೊಂದಿದ್ದಾರೆ. ಆರೋಪಿಯು ತನ್ನ ಪತ್ನಿಯೊಂದಿಗೆ ವಾಸಿಸುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 51 ವರ್ಷದ ಹರೆಯದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಆರಂಭಿಸಿದ್ದಾರೆ.

“ಸೆಪಾಹಿಜಾಲಾ ಜಿಲ್ಲೆಯ ಮಧುಪುರ್‌ನ ಕೋಳಿ ಸಾಕಾಣಿಕೆ ಮಾಡುವ ವ್ಯಕ್ತಿ ಮಧುಪುರದಲ್ಲಿ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಅವರ ವಿರುದ್ಧ ವಿಚ್ಛೇದನದ ಪ್ರಕರಣವನ್ನು ದಾಖಲಿಸಿದ ಅವರ ಹೆಂಡತಿ ತನ್ನ ತಾಯಿಯೊಂದಿಗೆ ಒಂದೂವರೆ ವರ್ಷದಿಂದ ಪಶ್ಚಿಮ ತ್ರಿಪುರಾ ಜಿಲ್ಲೆಯ ನೇತಾಜಿನಗರದಲ್ಲಿ ವಾಸಿಸುತ್ತಿದ್ದಳು” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಹಿಂದಿನ ಅಸಲಿ ಕಾರಣ ಬಹಿರಂಗ

ಭಾನುವಾರ, ಅವರ ಪತ್ನಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಇಬ್ಬರು ಪುರುಷ ಸ್ನೇಹಿತರೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದರು. ಆ ಫೋಟೋಗಳನ್ನು ನೋಡಿದ ಪತಿ ಕೋಪಗೊಂಡು ಅವಳನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Baba Siddique: ಬಾಬಾ ಸಿದ್ದಿಕಿ ಕೊಲೆ ಹಿಂದಿದೆಯಾ ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್ ಕೈವಾಡ?

ಪೂಜೆ ಮುಗಿಸಿಕೊಂಡು ತಾಯಿ ಮತ್ತು ಮಗಳು ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಗಳು ಅವರಿಬ್ಬರ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ತ್ರಿಪುರದ ಎಸ್ಪಿ ಕಿರಣ್ ಕುಮಾರ್ ಕೆ. ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಘಟನೆಯ ಸ್ಥಳಕ್ಕೆ ಪೊಲೀಸ್ ತಂಡ ಆಗಮಿಸಿ ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳು ಪತ್ತೆಯಾಗಿತ್ತು. ಆರೋಪಿಯನ್ನು ಒಂದು ಗಂಟೆಯೊಳಗೆ ಬಂಧಿಸಲಾಯಿತು.

ಈ ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ
ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್​ ಆಗದ ಟ್ರಾಫಿಕ್​​​
ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್​ ಆಗದ ಟ್ರಾಫಿಕ್​​​
ಸಂಡೂರು ಅಭ್ಯರ್ಥಿ ಆಯ್ಕೆ ಜಮೀರ್ ಅಹ್ಮದ್ ನೀಡುವ ಸಲಹೆ ಅಂತಿಮವಾಗುವ ಸಾಧ್ಯತೆ
ಸಂಡೂರು ಅಭ್ಯರ್ಥಿ ಆಯ್ಕೆ ಜಮೀರ್ ಅಹ್ಮದ್ ನೀಡುವ ಸಲಹೆ ಅಂತಿಮವಾಗುವ ಸಾಧ್ಯತೆ
ಸಿಎಂರನ್ನೂ ವಿಚಾರಣೆಗೆ ಒಳಪಡಿಸಿ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ
ಸಿಎಂರನ್ನೂ ವಿಚಾರಣೆಗೆ ಒಳಪಡಿಸಿ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ
ಮಳೆಯಿರಲಿ ಅಥವಾ ಬಿಸಿಲು; ಪ್ರೀ-ವೆಡ್ಡಿಂಗ್ ಶೂಟ್ ಮಾತ್ರ ಆಗಲೇಬೇಕು!
ಮಳೆಯಿರಲಿ ಅಥವಾ ಬಿಸಿಲು; ಪ್ರೀ-ವೆಡ್ಡಿಂಗ್ ಶೂಟ್ ಮಾತ್ರ ಆಗಲೇಬೇಕು!
ಮಳೆಗೆ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಕಾರಣವೇ?
ಮಳೆಗೆ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಕಾರಣವೇ?
ಮೈಸೂರು: ಮಹಿಳಾ ಪೊಲೀಸ್​ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ
ಮೈಸೂರು: ಮಹಿಳಾ ಪೊಲೀಸ್​ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ