ಬಿಜೆಪಿ, ಆದಿತ್ಯನಾಥರನ್ನು ಅಧಿಕಾರದಿಂದ ಕೆಳಗಿಳಿಸಲು ರೈತರ ಪ್ರತಿಭಟನೆ ನಡೆಸಿದ್ದು ಎಂದು ಒಪ್ಪಿಕೊಂಡ ಯೋಗೇಂದ್ರ ಯಾದವ್ ​​; ವಿಡಿಯೊ ವೈರಲ್

| Updated By: ರಶ್ಮಿ ಕಲ್ಲಕಟ್ಟ

Updated on: Mar 22, 2022 | 8:53 PM

ಚರ್ಚೆಯಲ್ಲಿ ಯುಪಿ ವಿಧಾನಸಭಾ ಚುನಾವಣಾ ಫಲಿತಾಂಶಗಳ ಮೇಲೆ ರೈತರ ಪ್ರತಿಭಟನೆಗಳ ಪರಿಣಾಮ ಏಕೆ ಕಂಡುಬಂದಿಲ್ಲ ಎಂದು ವಿವರಿಸಲು ಕುಮಾರ್ ಯಾದವ್ ಅವರನ್ನು ಕೇಳಿದಾಗ, "ಯಾವುದೇ ಪರಿಣಾಮವಿಲ್ಲ ಎಂದು ಹೇಳಲು ಇದು ತುಂಬಾ ಬೇಗ. ಬಿಜೆಪಿ ಪಕ್ಷವನ್ನು ಶಿಕ್ಷಿಸುವಂತೆ ನಾವು ಜನರನ್ನು ಒತ್ತಾಯಿಸಿದರೂ ಬಿಜೆಪಿ ಗೆಲ್ಲುತ್ತಿರುವುದು ನಿಜ.

ಬಿಜೆಪಿ, ಆದಿತ್ಯನಾಥರನ್ನು ಅಧಿಕಾರದಿಂದ ಕೆಳಗಿಳಿಸಲು ರೈತರ ಪ್ರತಿಭಟನೆ ನಡೆಸಿದ್ದು ಎಂದು ಒಪ್ಪಿಕೊಂಡ ಯೋಗೇಂದ್ರ ಯಾದವ್ ​​; ವಿಡಿಯೊ ವೈರಲ್
ಯೋಗೇಂದ್ರ ಯಾದವ್
Follow us on

ಮಾರ್ಚ್ 21 ರಂದು ಈಗ ರದ್ದುಗೊಂಡಿರುವ ಕೃಷಿ ಕಾನೂನುಗಳ (Farm laws) ಕುರಿತು ಸುಪ್ರೀಂಕೋರ್ಟ್ (Supreme Court) ನೇಮಿಸಿದ ಸಮಿತಿಯ ಪ್ಯಾನೆಲಿಸ್ಟ್‌ಗಳಲ್ಲಿ ಒಬ್ಬರಾದ ಅನಿಲ್ ಘನವಟ (Anil Ghanwat) ಅವರು ಸಮಿತಿಯ ಸಂಶೋಧನೆಗಳನ್ನು ಬಹಿರಂಗಗೊಳಿಸಿದ್ದರು. ಮೂರು ಬಾರಿ ವರದಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ವರದಿಯಲ್ಲಿ, ಶೇ 87 ರೈತ ಸಂಘಗಳು ಮೂರು ಕೃಷಿ ಕಾನೂನುಗಳ ಪರವಾಗಿವೆ ಎಂದು ಉಲ್ಲೇಖಿಸಲಾಗಿದೆ. ವರದಿ ಬಿಡುಗಡೆಯಾದ ನಂತರ ‘ಆಂದೋಲನಜೀವಿ’ ಯೋಗೇಂದ್ರ ಯಾದವ್ ಅವರ ವಿಡಿಯೊ ತುಣುಕೊಂದನ್ನು ಬಿಜೆಪಿ ನಾಯಕ ಮತ್ತು ರಾಷ್ಟ್ರೀಯ ವಕ್ತಾರ ಶೆಹಜಾದ್ ಜೈ ಹಿಂದ್ ಅವರು ಹಂಚಿಕೊಂಡಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ರೈತ ಪ್ರತಿಭಟನೆಗಳು ಹೇಗೆ ನಡೆಯುತ್ತವೆ ಎಂಬುದನ್ನು ಯೋಗೇಂದ್ರ ವಿಡಿಯೊದಲ್ಲಿ ವಿವರಿಸಿದ್ದಾರೆ.  ಯೋಗೇಂದ್ರ ಯಾದವ್ ಮತ್ತು ರಾಕೇಶ್ ಟಿಕಾಯತ್ ಅವರು ನಿರ್ವಹಿಸಿದ ಪಾತ್ರವನ್ನು ವಿವರಿಸುತ್ತಾರೆ. ಯೋಗಿಜೀ ಅವರ ವಿಕೆಟ್ ಪಡೆಯಲು ನಾವು ಪಿಚ್ ಸಿದ್ಧಪಡಿಸುತ್ತಿದ್ದೆವು. ನಾವು ಪಿಚ್ ಸಿದ್ಧಪಡಿಸಿ ಅದರ ಮೇಲೆ ಭಾರದ ರೋಲರ್​​ನ್ನು ಕೂಡಾ ಹರಿಸಿದ್ದೆವು. ಆದರೆ ಬೌಲಿಂಗ್ ಮಾಡಿದ್ದು ಅಖಿಲೇಶ್ ಯಾದವ್. ಇದನ್ನೇ ಮ್ಯಾಚ್ ಫಿಕ್ಸಿಂಗ್ ಅಂತಾರೆ ಎಂದು ಶೆಹಜಾದ್ ವಿಡಿಯೊ ಟ್ವೀಟ್ ಮಾಡಿ ಬರೆದಿದ್ದಾರೆ.

ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಮತ್ತು ಪತ್ರಕರ್ತ ಅಶುತೋಷ್ ಒಡೆತನದ ಯೂಟ್ಯೂಬ್ ಸುದ್ದಿ ಚಾನೆಲ್ ಸತ್ಯ ಹಿಂದಿಯಲ್ಲಿ ಯಾದವ್ ಅವರು ಡಾ ಮುಖೇಶ್ ಕುಮಾರ್ ಅವರೊಂದಿಗೆ ನಡೆಸಿದ ಚರ್ಚೆಯ ವಿಡಿಯೊದ ತುಣುಕು ಇದಾಗಿದೆ.


ಚರ್ಚೆಯಲ್ಲಿ ಯುಪಿ ವಿಧಾನಸಭಾ ಚುನಾವಣಾ ಫಲಿತಾಂಶಗಳ ಮೇಲೆ ರೈತರ ಪ್ರತಿಭಟನೆಗಳ ಪರಿಣಾಮ ಏಕೆ ಕಂಡುಬಂದಿಲ್ಲ ಎಂದು ವಿವರಿಸಲು ಕುಮಾರ್ ಯಾದವ್ ಅವರನ್ನು ಕೇಳಿದಾಗ, “ಯಾವುದೇ ಪರಿಣಾಮವಿಲ್ಲ ಎಂದು ಹೇಳಲು ಇದು ತುಂಬಾ ಬೇಗ. ಬಿಜೆಪಿ ಪಕ್ಷವನ್ನು ಶಿಕ್ಷಿಸುವಂತೆ ನಾವು ಜನರನ್ನು ಒತ್ತಾಯಿಸಿದರೂ ಬಿಜೆಪಿ ಗೆಲ್ಲುತ್ತಿರುವುದು ನಿಜ. ನಾವು ಸೂಕ್ಷ್ಮ ಮಟ್ಟದಲ್ಲಿ ಪರಿಣಾಮವನ್ನು ನೋಡಬೇಕು ಎಂದು ನಾನು ಭಾವಿಸುತ್ತೇನೆ. ಬಿಜೆಪಿಯ ಮತಗಳಿಕೆ ಎಲ್ಲಿ ಕಡಿಮೆಯಾಗಿದೆ ಎಂಬುದನ್ನು ಪರಿಶೀಲಿಸಬೇಕು. ಪ್ರತಿ ಪ್ರದೇಶದಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ? ನೋಡಿ, ರೈತರ ಪ್ರತಿಭಟನೆ ಇಲ್ಲಿ ಸ್ಪರ್ಧಿ ಆಗಿರಲಿಲ್ಲ. ರೈತರ ಪ್ರತಿಭಟನೆಯ ಪಾತ್ರವು ಚುನಾವಣೆಯಲ್ಲಿ ಪಿಚ್ ಅನ್ನು ಸೃಷ್ಟಿಸುವುದಾಗಿತ್ತು ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.

ನಾವು ಪಿಚ್ ಮಾಡಿದ್ದು. ‘ಸೀಮರ್’ ಮತ್ತು ‘ವೇಗದ ಬೌಲರ್’ ಲಾಭ ಪಡೆಯಲು ನಾವು ಅದರ ಮೇಲೆ ಹೆವಿ ರೋಲರ್ ಅನ್ನು ಓಡಿಸಿದ್ದೇವೆ. ಆದರೆ ನಾವು ಆಟದಲ್ಲಿ ಬಾಲ್ ಮಾಡಬಾರದು. ಅಖಿಲೇಶ್ ಅವರಿಂದ ಬಾಲ್ ಮಾಡಬೇಕಿತ್ತು. ಅವರು ಯೋಗಿ ಜಿಯನ್ನು ಸೋಲಿಸಲು ವಿಫಲವಾದರೆ, ಪಿಚ್ ಸೃಷ್ಟಿಕರ್ತನನ್ನು ದೂಷಿಸಬೇಡಿ. ಇದು ಬಾಲ್ ಮತ್ತು ಬ್ಯಾಟಿಂಗ್ ಸಂದರ್ಭ. ಕೊನೆಯಲ್ಲಿ ಇದು ಅವರ ಆಟವಾಗಿತ್ತು. ಹೌದು, ರೈತ ಪ್ರತಿಭಟನೆಗಳು ಮಾಡಿದ ಪ್ರಯತ್ನಗಳಲ್ಲಿ ಸ್ವಲ್ಪ ಕೊರತೆ ಇದ್ದಿರಬೇಕು. ಪ್ರಧಾನಮಂತ್ರಿಯವರ ಮಾತಿನಲ್ಲಿ ಹೇಳುವುದಾದರೆ, ನಮ್ಮ ತಪಸ್ಸುಗಳಲ್ಲಿ ಕೆಲವು ಪ್ರಯತ್ನಗಳ ಕೊರತೆಯಿದ್ದಿರಬೇಕು.

ನಮ್ಮಲ್ಲಿ ಕೊರತೆ ಎಲ್ಲಿದೆ ಎಂದು ನೋಡಬೇಕು. ಆದರೆ ರೈತರ ಪ್ರತಿಭಟನೆಯಿಂದ ಯಾವುದೇ ಪರಿಣಾಮವಿಲ್ಲ ಎಂದು ನಾವು ಭಾವಿಸಬಾರದು. ನೀವಿಗ ಹೇಳಿ, ರೈತರ ಪ್ರತಿಭಟನೆಗಳು ಉತ್ತುಂಗಕ್ಕೇರುವ ಮೊದಲು, ಉತ್ತರ ಪ್ರದೇಶದಲ್ಲಿ ಏನಾದರೂ ವಿರೋಧಪಕ್ಷವಿತ್ತೆ? ಅವರು ನಿಲ್ಲಲು ಸಹ ಧೈರ್ಯ ಮಾಡಲಿಲ್ಲ. ರೈತರ ಪ್ರತಿಭಟನೆಗಳೇ ಅವರಿಗೆ ನಿಲ್ಲಲು ವೇದಿಕೆ ಕಲ್ಪಿಸಿದವು. ನಾವು ಅವರಿಗೆ ನಿಲ್ಲಲು ವೇದಿಕೆಯನ್ನು ನೀಡಿದ್ದೇವೆ, ಆದರೆ ಅವರಿಗೆ ಗೆಲುವು ತಂದುಕೊಡುವುದು ನಮ್ಮ ಕರ್ತವ್ಯವಲ್ಲ. ನಾವು ಆಟದಲ್ಲಿ ಪ್ರಮುಖ ಆಟಗಾರರಾಗಿರಲಿಲ್ಲ ಎಂದಿದ್ದಾರೆ ಯೋಗೇಂದ್ರ ಯಾದವ್.

ರೈತರ ಭವಿಷ್ಯವನ್ನು ಆಂದೋಲನ ಜೀವಿಗಳು ಹಾಳು ಮಾಡುತ್ತಿದ್ದಾರೆ ಎಂದ ನೆಟ್ಟಿಗರು
ಕ್ಲಿಪ್ ವೈರಲ್ ಆದ ತಕ್ಷಣ ಹಲವಾರು ನೆಟಿಜನ್‌ಗಳು ವೃತ್ತಿಪರ ಪ್ರತಿಭಟನಾಕಾರರಾದ ಯೋಗೇಂದ್ರ ಯಾದವ್ ಮತ್ತು ರಾಕೇಶ್ ಟಿಕಾಯತ್ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ರೈತರ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ದೂರಿದರು.


ಟ್ವಿಟರ್ ಬಳಕೆದಾರರಾದ ಶಿವಕುಮಾರ್ ಅವರು ಸುಪ್ರೀಂಕೋರ್ಟ್ ಅನ್ನು ಪ್ರಶ್ನಿಸಿದ್ದು ಯಾದವ್ ಮತ್ತು ಟಿಕಾಯತ್ ಅವರಂತಹ ಜನರು ದೇಶವನ್ನು ದಾರಿತಪ್ಪಿಸಿದ್ದಾರೆ ಎಂಬುದಕ್ಕೆ ಈ ವಿಡಿಯೊ ಕ್ಲಿಪ್ ಅನ್ನು ಪುರಾವೆ ಎಂದು ಪರಿಗಣಿಸುತ್ತೀರಾ ಎಂದು ಕೇಳಿದರು.


ಮತ್ತೊಬ್ಬ ಟ್ವೀಟಿಗ  ದೇವ್ ಗೌರ್  ಎಂಬವರು ಕಾನೂನುಗಳಲ್ಲಿ ಯಾವುದೇ ತಪ್ಪಿಲ್ಲ. ಅಖಿಲೇಶ್ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಬಿಜೆಪಿ ವಿರುದ್ಧ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಗುರಿಯಾಗಿತ್ತು. ಯೋಗೇಂದ್ರ ಯಾದವ್ ಅವರಂತಹವರು ಈ ಮಟ್ಟಕ್ಕೆ ಇಳಿದರು. ಈ ಜನರು ತಮ್ಮ ಲಾಭಕ್ಕಾಗಿ ಅವರನ್ನು ದಾರಿ ತಪ್ಪಿಸುವುದರಿಂದ ಕೋಟಿಗಟ್ಟಲೆ ರೈತರು ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಟ್ವಿಟರ್ ಬಳಕೆದಾರರಾದ ಕೌಶಿಕ್, ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದ ರೈತರ ಸಾವಿಗೆ ಯಾದವ್ ಅವರನ್ನು ದೂಷಿಸಿದ್ದಾರೆ. “ಕೊವಿಡ್ ಇದ್ದಿದ್ದಕ್ಕೆ ದೇವರಿಗೆ ಧನ್ಯವಾದಗಳು, ಇಲ್ಲದಿದ್ದರೆ ಅದು ದುರಂತವಾಗುತ್ತಿತ್ತು” ಎಂದು ಅವರು ಹೇಳಿದರು.

ಮಾರ್ಚ್ 10 ರಂದು ಯುಪಿ ಅಸೆಂಬ್ಲಿ ಚುನಾವಣಾ ಫಲಿತಾಂಶಗಳನ್ನು ಚರ್ಚಿಸುವಾಗ ಯಾದವ್ ಎನ್‌ಡಿಟಿವಿಯಲ್ಲಿ ನಡೆದ ಚರ್ಚೆಯಲ್ಲಿ ಅದೇ ಹೇಳಿಕೆಯನ್ನು ನೀಡಿದ್ದರು. ಯುಪಿಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳಿಗೆ ಅಡಿಪಾಯವನ್ನು ನಿರ್ಮಿಸುವಲ್ಲಿ ರೈತ ಚಳುವಳಿ ಪ್ರಮುಖ ಪಾತ್ರ ವಹಿಸಿದೆ, ಆದರೆ ವಿರೋಧ ಪಕ್ಷಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ.

ಇಡೀ ಸಂಯುಕ್ತ ಕಿಸಾನ್ ಮೋರ್ಚ್ (ಎಸ್‌ಕೆಎಂ) ಉತ್ತರ ಪ್ರದೇಶ ಚುನಾವಣೆಗೆ ಮುನ್ನ ತಂತ್ರವನ್ನು ರೂಪಿಸಿದೆ. ಮುಂಬರುವ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ಬಿಜೆಪಿಯನ್ನು ಶಿಕ್ಷಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು ಎಂದು ಅವರು ಹೇಳಿದರು. “ರಾಕೇಶ್ ಟಿಕಾಯತ್ ಮತ್ತು ನಾನು ಇಡೀ ಉತ್ತರ ಪ್ರದೇಶದಲ್ಲಿ ಪ್ರವಾಸ ಮಾಡಿದೆವು. ಆದರೆ ನೆನಪಿಡಿ, ನಾವು ಆಟಗಾರರಲ್ಲ. ಇದನ್ನು ಕ್ರಿಕೆಟ್ ನಂತೆ ವಿವರಿಸಿದ ಅವರು ನಮ್ಮ ಕೆಲಸವು ‘ಪಿಚ್ ರೋಲರ್’ನಂತೆಯೇ ಇತ್ತು. ನಾವು ವೇಗದ ಬೌಲರ್‌ಗಳು ಮತ್ತು ಸೀಮರ್‌ಗಳಿಗೆ ಅನುಕೂಲಕರವಾದ ಪಿಚ್ ಅನ್ನು ಹಾಕಿದ್ದೇವೆ, ಆದರೆ ಬೌಲಿಂಗ್ ನಮ್ಮ ಕೆಲಸವಲ್ಲ ಎಂದು ಯಾದವ್ ಹೇಳಿದ್ದರು.

ಇದನ್ನೂ ಓದಿ: ಬಹುತೇಕ ರೈತ ಸಂಘಟನೆಗಳು 3 ಕೃಷಿ ಕಾನೂನುಗಳನ್ನು ಬೆಂಬಲಿಸಿವೆ: ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯ ವರದಿಯಿಂದ ಬಹಿರಂಗ

Published On - 8:34 pm, Tue, 22 March 22