AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ಯೋಜನೆಗಳಿಗೆ ಶಂಕು, ಕಲ್ಲಿದ್ದಲು ಉತ್ಪಾದನೆ ಹೆಚ್ಚಳದತ್ತ ಗಮನ ಹರಿಸಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿವಿಮಾತು

Pralhad Joshi: ವಿದ್ಯುತ್​ ಉತ್ಪಾದನಾ ವಲಯಕ್ಕೆ ನಿರಂತರವಾಗಿ ಕಲ್ಲಿದ್ದಲು ಸರಬರಾಜು ಮಾಡುವುದು ಆದ್ಯತೆಯ ವಿಷಯವಾಗಬೇಕು ಎಂದು ಒತ್ತಿ ಹೇಳಿದ ಸಚಿವ ಪ್ರಲ್ಹಾದ್ ಜೋಶಿ ಅವರು ಸಿಐಎಲ್ ಮತ್ತು ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳು ತಕ್ಷಣವೇ ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಆಲೋಚನೆ ನಡೆಸಬೇಕು ಎಂದು ಸೂಚಿಸಿದರು.

ನಾಲ್ಕು ಯೋಜನೆಗಳಿಗೆ ಶಂಕು, ಕಲ್ಲಿದ್ದಲು ಉತ್ಪಾದನೆ ಹೆಚ್ಚಳದತ್ತ ಗಮನ ಹರಿಸಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿವಿಮಾತು
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
TV9 Web
| Edited By: |

Updated on: Mar 22, 2022 | 9:55 PM

Share

ಕೇಂದ್ರ ಕಲ್ಲಿದ್ದಲು, ಗಣಿಗಾರಿಕೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಸದ್ಯದಲ್ಲೇ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವನ್ನು ಸಂಪರ್ಕಿಸಿ, ನಿಯಮಾವಳಿಗಳಲ್ಲಿ ಸ್ವಲ್ಪಮಟ್ಟಿಗೆ ರಿಯಾಯ್ತಿ ಕಲ್ಪಿಸುವುದರ ಮೂಲಕ ಒಟ್ಟಾರೆಯಾಗಿ ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಳ ಮಾಡುವುದಕ್ಕೆ ಅನುವು ಮಾಡಿಕೊಡಬೇಕು ಎಂದು ಕೋರುವ ಸಾಧ್ಯತೆಯಿದೆ. ನಾರ್ತರನ್ ಕೋಲ್​ ಫೀಲ್ಡ್​ ಸಂಸ್ಥೆಯ (Northern Coalfields Ltd -NCL) ನಾಲ್ಕು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವ ವರ್ಚುಯಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರು (Union Minister of Coal, Mines and Parliamentary Affairs Pralhad Joshi) ಎನ್​ಸಿಎಲ್ ಮತ್ತು ಅದರ ಅಂಗ ಸಂಸ್ಥೆಗಳು ಕಲ್ಲಿದ್ದಲು ಉತ್ಪಾದನೆಯಲ್ಲಿ ನಿಗದಿತ ಗುರಿ ತಲುಪಲು ಉತ್ಪಾದನೆಯನ್ನು ಹೆಚ್ಚಳ ಮಾಡಬೇಕು (Coal Production) ಎಂದು ಕರೆ ನೀಡಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ವಿಪರೀತ ಏರಿಕೆಯಾದ್ದರಿಂದ ದೇಶೀಯವಾಗಿ ಕಲ್ಲಿದ್ದಲು ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ವಿದ್ಯುತ್​ ಉತ್ಪಾದನಾ ವಲಯಕ್ಕೆ ನಿರಂತರವಾಗಿ ಕಲ್ಲಿದ್ದಲು ಸರಬರಾಜು ಮಾಡುವುದು ಆದ್ಯತೆಯ ವಿಷಯವಾಗಬೇಕು ಎಂದು ಒತ್ತಿ ಹೇಳಿದ ಸಚಿವ ಪ್ರಲ್ಹಾದ್ ಜೋಶಿ ಅವರು ಸಿಐಎಲ್ ಮತ್ತು ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳು ತಕ್ಷಣವೇ ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಆಲೋಚನೆ ನಡೆಸಬೇಕು ಎಂದು ಸೂಚಿಸಿದರು. ಕೋಲ್​ ಇಂಡಿಯಾ ಸಂಸ್ಥೆಯು ನಿಗದಿತ ಅವಧಿಯೊಳಕ್ಕೆ 35 ಮೊದಲ ಮೈಲು ಸಂಪರ್ಕ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಈ ಮಧ್ಯೆ, ಕಲ್ಲಿದ್ದಲು ಉತ್ಪಾದನೆ ಗುರಿಯನ್ನು ತಲುಪಿದ ನಾರ್ತರನ್ ಕೋಲ್​ ಫೀಲ್ಡ್​ ಸಂಸ್ಥೆಯನ್ನು ಸಚಿವರು ಅಭಿನಂದಿಸಿದರು.

ವಾರ್ಷಿಕ 10 ದಶ ಲಕ್ಷ ಟನ್ ಸಾಮರ್ಥ್ಯದ ನಿಗಾಹಿ ಕೋಲ್ ಹ್ಯಾಂಡ್ಲಿಂಗ್​ ಪ್ಲಾಂಟ್ (Nigahi Coal Handling Plant), ವಾರ್ಷಿಕ 9.5 ದಶ ಲಕ್ಷ ಟನ್ ಸಾಮರ್ಥ್ಯದ ಬೀನಾ-ಕಕ್ರಿ ಕೋಲ್ ಹ್ಯಾಂಡ್ಲಿಂಗ್​ ಪ್ಲಾಂಟ್ (Bina-Kakri Coal Handling Plant), ಜಯಂತ್​ ನಿಂದ ಸಿಂಗ್ರೋಲಿಗೆ 3.1 ಕಿ. ಮೀ. ದೂರದ 5 ಪಥದ ಕಾಂಕ್ರೀಟ್​ ರಸ್ತೆ ನಿರ್ಮಾಣ ಕಾರ್ಯ ಮತ್ತು NCL ಯೋಜನೆಗಳಲ್ಲಿ ಕಲ್ಲಿದ್ದಲು ಸಾಗಣೆಗಾಗಿ 49.6 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ‘ರೀಡಿಫೈನಿಂಗ್ ಗ್ರೀನ್​’ ಎಂಬ ಇ-ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕೋಲ್ ಇಂಡಿಯಾ ಲಿಮಿಟೆಡ್​ ಸಂಸ್ಥೆಯ ಸಿಎಂಡಿ​ ಪ್ರಮೋದ್​ ಅಗರ್​ವಾಲ್​, ಮತ್ತಿತರ ಉನ್ನತಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಇದನ್ನೂ ಓದಿ: ಹಿಜಾಬ್ ತೀರ್ಪು: ಜಡ್ಜ್​ಗಳಿಗೆ ಬೆದರಿಕೆ, ಬಾಡಿ ವಾರೆಂಟ್ ಮೂಲಕ ಆರೋಪಿ ರಹಮತ್ ಬೆಂಗಳೂರಿಗೆ, 8 ದಿನ ಬೆಂಗಳೂರು ಪೊಲೀಸರ ವಶಕ್ಕೆ

ಇದನ್ನೂ ಓದಿ: ಇದೇನಿದು, ವಿಜಯನಗರ ಸಾಮ್ರಾಜ್ಯದ ಕಲ್ಲಿನ ರಥ ಹೊಸಪೇಟೆ ರೈಲ್ವೆ ನಿಲ್ದಾಣದ ಮಹಾದ್ವಾರದ ಬಳಿ ಬಂದು ನಿಂತಿದೆಯಾ!?