ಸನ್ಯಾಸಿಗಳು ಯಾವಾಗ ಮುಖ್ಯಮಂತ್ರಿಯಾಗ್ತಾರೋ ನಮಗ್ಯಾರಿಗೂ ಗೊತ್ತಿಲ್ಲ: ಪರೋಕ್ಷವಾಗಿ ಯೋಗಿ ವಿರುದ್ಧ ವಾಗ್ದಾಳಿ ನಡೆಸಿದ್ರಾ ವರುಣ್ ಗಾಂಧಿ

|

Updated on: Aug 30, 2023 | 10:15 AM

ಬಿಜೆಪಿ ಸಂಸದ ವರುಣ್ ಗಾಂಧಿ ಸಮಯ ಸಿಕ್ಕಾಗೆಲ್ಲಾ ತಮ್ಮ ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿರುವುದು ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಸನ್ಯಾಸಿಗಳು ಯಾವಾಗ ಮುಖ್ಯಮಂತ್ರಿಯಾಗುತ್ತಾರೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮ ಕ್ಷೇತ್ರವಾದ ಫಿಲಿಬಿಟ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಓರ್ವ ಸನ್ಯಾಸಿ ಕೂಡ ಇದ್ದರು

ಸನ್ಯಾಸಿಗಳು ಯಾವಾಗ ಮುಖ್ಯಮಂತ್ರಿಯಾಗ್ತಾರೋ ನಮಗ್ಯಾರಿಗೂ ಗೊತ್ತಿಲ್ಲ: ಪರೋಕ್ಷವಾಗಿ ಯೋಗಿ ವಿರುದ್ಧ ವಾಗ್ದಾಳಿ ನಡೆಸಿದ್ರಾ ವರುಣ್ ಗಾಂಧಿ
ವರುಣ್ ಗಾಂಧಿ
Follow us on

ಬಿಜೆಪಿ ಸಂಸದ ವರುಣ್ ಗಾಂಧಿ(Varun Gandhi) ಸಮಯ ಸಿಕ್ಕಾಗೆಲ್ಲಾ ತಮ್ಮ ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿರುವುದು ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಸನ್ಯಾಸಿಗಳು ಯಾವಾಗ ಮುಖ್ಯಮಂತ್ರಿಯಾಗುತ್ತಾರೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮ ಕ್ಷೇತ್ರವಾದ ಫಿಲಿಬಿಟ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಓರ್ವ ಸನ್ಯಾಸಿ ಕೂಡ ಇದ್ದರು. ವರುಣ್ ಗಾಂಧಿ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು, ಅಷ್ಟರಲ್ಲಿ ಅಲ್ಲಿದ್ದ ಸಾಧುಗಳ ಮೊಬೈಲ್​ಗೊಂದು ಕರೆ ಬಂದಿತ್ತು, ಆಗ ವರುಣ್ ಗಾಂಧಿ ಸಾಧುವನ್ನು ನೋಡಿದರು, ಆಗ ಸಾಧು ಕರೆಯನ್ನು ಕಟ್ ಮಾಡಿದ್ದಾರೆ.

ಬಳಿಕ ವರುಣ್ ತಮ್ಮ ಮಾತುಗಳನ್ನು ನಿಲ್ಲಿಸಿ ಸಾಧುಗೆ ಕಾಲ್ ರಿಸೀವ್ ಮಾಡುವಂತೆ ಸೂಚಿಸಿದರು. ಆಗ ಪಕ್ಷದ ಕಾರ್ಯಕರ್ತರು ಸಾಧುಗಳಿಗೆ ವೇದಿಕೆಯಿಂದ ಹೊರನಡೆಯುವಂತೆ ಸೂಚಿಸಿದರು.

ಆಗ ವರುಣ್ ಪಕ್ಷದ ಕಾರ್ಯಕರ್ತರನ್ನು ತಡೆದು, ಅವರು ಕರೆ ಸ್ವೀಕರಿಸಲು ಅದರಿಂದ ತೊಂದರೆಯಾದರೂ ಏನಿದೆ, ಮಹಾರಾಜ್​ ಜೀ ಯಾವಾಗ ಮುಖ್ಯಮಂತ್ರಿಯಾಗುತ್ತಾರೋ ಗೊತ್ತಿಲ್ಲ, ನಾವಿರುವ ಕಾಲವನ್ನು ಅರ್ಥಮಾಡಿಕೊಳ್ಳಿ ಎಂದು ಪರೋಕ್ಷವಾಗಿ ಯೋಗಿ ಆದಿತ್ಯನಾಥ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ಓದಿ: ವರುಣ್ ಗಾಂಧಿಯವರ ಸಿದ್ಧಾಂತ ಬೇರೆ, ಅದನ್ನು ಒಪ್ಪಲಾರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ವರುಣ್ ಗಾಂಧಿ ಹಾಗೂ ಸಾಧು ನಡುವಿನ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ವರುಣ್ ಗಾಂಧಿ ಕಾಂಗ್ರೆಸ್ ಸೇರುತ್ತಾರಾ ಎನ್ನುವ ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ.

ವರುಣ್ ಗಾಂಧಿ ವಿಡಿಯೋ

ಮತ ಹಾಕಲು ಕುರಿಗಳ ತಂತ್ರ ಅನುಸರಿಸಬೇಡಿ, ಯಾರಾದರೂ ಬಂದು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರೆ ಅವರಿಗೆ ಮತ ಹಾಕಬೇಡಿ, ನೀವು ಮತ ಚಲಾಯಿಸಿದ ಬಳಿಕ ಕೇವಲ ಸಂಖ್ಯೆಯಾಗಬೇಕು ವ್ಯಕ್ತಿಯಾಗಬಾರದು ಎಂದು ನಾನು ಬಯಸುವುದಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:13 am, Wed, 30 August 23