ನಿಮ್ಮ ಧೈರ್ಯವನ್ನು ಮೆಚ್ಚಲೇ ಬೇಕು, ಲಾಲು ಮಗಳ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಬಿಜೆಪಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 06, 2022 | 11:20 AM

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಯಾದವ್ ಅವರು ಸೋಮವಾರ ಸಿಂಗಾಪುರದಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದು, ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಂದೆಗಾಗಿ ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಿದ್ದಾರೆ.

ನಿಮ್ಮ ಧೈರ್ಯವನ್ನು ಮೆಚ್ಚಲೇ ಬೇಕು, ಲಾಲು ಮಗಳ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಬಿಜೆಪಿ
Your courage must be admired, BJP praised Lalu's daughter for her work
Follow us on

ದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಸೋಮವಾರ ಸಿಂಗಾಪುರದಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದು, ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಂದೆಗಾಗಿ ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಲಾಲು ಯಾದವ್ ಮತ್ತು ರೋಹಿಣಿ ಆಚಾರ್ಯ ಇಬ್ಬರೂ ಕೂಡ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಲಾಲು ಅವರ ಕುಟುಂಬ ತಿಳಿಸಿದೆ.

ಲಾಲು ಅವರ ಹಿರಿಯ ಮಗಳು ಮಿಸಾ ಭಾರತಿ ನಿನ್ನೆ ಸಂಜೆ ಶಸ್ತ್ರಚಿಕಿತ್ಸೆಯ ನಂತರ ಹಲವಾರು ವೀಡಿಯೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಮಿಸಾ ಮತ್ತು ರೋಹಿಣಿ ಅವರ ಕಿರಿಯ ಸಹೋದರರು ಕೂಡ ಆಸ್ಪತ್ರೆಯ ಈ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ:  ಕಿಡ್ನಿ ಕಸಿಗೆ ಸಿಂಗಾಪುರಕ್ಕೆ ತೆರಳಿದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್

ತಂದೆಯವರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ, ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಸ್ಥಳಾಂತರಿಸಲಾಯಿತು. ಅಕ್ಕ ರೋಹಿಣಿ ಆಚಾರ್ಯ ಇಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು ಎಂದು ಅವರು ಬರೆದಿದ್ದಾರೆ.

ತೇಜಸ್ವಿ ಯಾದವ್ ಮತ್ತು ಮಿಸಾ ಭಾರತಿ ಅವರು ತಮ್ಮ ತಂದೆಯೊಂದಿಗೆ ಸಿಂಗಾಪುರದಲ್ಲಿ ಉಳಿದುಕೊಂಡಿದ್ದಾರೆ. ಕೆಲ ಸಮಯದಿಂದ ಅಸ್ವಸ್ಥರಾಗಿದ್ದ ಲಾಲು ಯಾದವ್ ಅವರಿಗೆ ಈ ವರ್ಷದ ಆರಂಭದಲ್ಲಿ ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಲಾಗಿತ್ತು.

ಚಿಕಿತ್ಸೆಯ ಕೆಲವು ಗಂಟೆಗಳ ಮೊದಲು, ರೋಹಿಣಿ ತನ್ನ ತಂದೆಯೊಂದಿಗೆ ಶಸ್ತ್ರಚಿಕಿತ್ಸೆಯ ಪೂರ್ವ ಭಾವಚಿತ್ರವನ್ನು ಹಂಚಿಕೊಂಡರು. ರಾಕ್ ಅಂಡ್ ರೋಲ್ ಮಾಡಲು ಸಿದ್ಧವಾಗಿದೆ. ನನಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ ಹವನ’ದಿಂದ ‘ಮಹಾಮೃತ್ಯುಂಜಯ ಜಪ’ದವರೆಗೆ, ಬಿಹಾರದಾದ್ಯಂತ ದೇವಾಲಯಗಳಲ್ಲಿ ಶಸ್ತ್ರಚಿಕಿತ್ಸೆಗೆ ಮುನ್ನ ಲಾಲು ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥನೆಗಳನ್ನು ನಡೆಸಲಾಯಿತು.


40 ರ ಹರೆಯದ ಆಚಾರ್ಯ ಅವರು ತಮ್ಮ ಕಿಡ್ನಿಯನ್ನು 74 ವರ್ಷದ ತನ್ನ ದಾನ ಮಾಡಿದ್ದಕ್ಕಾಗಿ ಪ್ರಶಂಸೆ ಗಳಿಸಿದ್ದಾರೆ. ಇದೊಂದು ದೊಡ್ಡ ನಿರ್ಧಾರ ಎಂದು ಹೇಳಿದ್ದಾರೆ. ಲಾಲು ಯಾದವ್ ಅವರನ್ನು ತುಂಬಾ ಟೀಕಾಕಾರರಲ್ಲಿ ಒಬ್ಬರಾದ ಫೈರ್‌ಬ್ರಾಂಡ್ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಕೂಡ ರೋಹಿಣಿ ತಮ್ಮ ಈ ಕೆಸಲದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ರೋಹಿಣಿ ಆಚಾರ್ಯ ಆದರ್ಶ ಮಗಳು. ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ಭವಿಷ್ಯದ ಪೀಳಿಗೆಗೆ ನೀವು ಮಾದರಿಯಾಗಿದ್ದೀರಿ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ