ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ನೌಕರಿ ಆದೇಶ ಪತ್ರ! ಉದ್ಯೋಗ ವಂಚನೆ ಆರೋಪದ ಮೇಲೆ ಯುವಕನ ಬಂಧನ

|

Updated on: Dec 21, 2023 | 2:57 PM

ಜಿಲ್ಲಾಧಿಕಾರಿ ವಿನಯ್ ಕೃಷ್ಣಾ ರೆಡ್ಡಿ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ಚೈತನ್ಯ ಜೈನಿ ಅವರುಗಳ ನಕಲಿ ಸಹಿ ಮಾಡಿ, ಸ್ಟಾಂಪ್ ಮಾಡಿ ಸಂತ್ರಸ್ತರಿಗೆ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಆದೇಶಗಳನ್ನು ನೀಡತೊಡಗಿದ್ದ. ತಾನು ಸೂಚಿಸಿದ ಸಮಯಕ್ಕೆ ಕೆಲಸಕ್ಕೆ ಸೇರಿಕೊಳ್ಳುವಂತೆ ಸಲಹೆ ನೀಡಿದ. ಆದರೆ ಕೆಲವರಿಗೆ ತಡವಾಗುತ್ತಿದೆ ಎಂದು ಸಬೂಬು ಹೇಳತೊಡಗಿದ.

ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ನೌಕರಿ ಆದೇಶ ಪತ್ರ! ಉದ್ಯೋಗ ವಂಚನೆ ಆರೋಪದ ಮೇಲೆ ಯುವಕನ ಬಂಧನ
ಉದ್ಯೋಗ ವಂಚನೆ ಆರೋಪದ ಮೇಲೆ ಯುವಕನ ಬಂಧನ
Follow us on

ಆ ಯುವಕ  ಓದಿದ್ದು ಇಂಟರ್ ಮೀಡಿಯೇಟ್. ಐಷಾರಾಮಿ ಜೀವನಕ್ಕೆ ಒಗ್ಗಿ, ಇಚ್ಚಾನುಸಾರ ಅಲೆದಾಡಿದ. ವಿಲಾಸಿ ಜೀವನಕ್ಕೆ ಒಗ್ಗಿಕೊಂಡುಬಿಟ್ಟ. ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ವಂಚಿಸುವುದನ್ನೇ ಕಾಯಕವಾಗಿಸಿಕೊಂಡಿದ್ದ. ನಿರುದ್ಯೋಗಿಗಳಿಂದ ಲಕ್ಷಗಟ್ಟಲೆ ಹಣ ಸಂಗ್ರಹಿಸಿದ. ಮೇಲಧಿಕಾರಿಗಳ ಹೆಸರಿನಲ್ಲಿ ನಕಲಿ ನೇಮಕಾತಿ ದಾಖಲೆ ಸೃಷ್ಟಿಸಿ ಭಾರೀ ವಂಚನೆಗೆ ಇಳಿದುಬಿಟ್ಟಿದ್ದ. ಕೊನೆಗೆ ಸಂತ್ರಸ್ತರ ದೂರುಗಳು ಹೆಚ್ಚಾದಾಗ ಫೀಲ್ಡಿಗೆ ಇಳಿದ ಪೊಲೀಸರು ಯುವಕನೊಬ್ಬನನ್ನು ಜಾಲಾಡಿ, ಜೈಲಿಗೆ ಟ್ಟಿದ್ದಾರೆ.

ಆಲೇಟಿ ನವೀನ್ ಯಾದಾದ್ರಿ ಜಿಲ್ಲೆಯ ಮೋಟಕೊಂಡೂರು ಮಂಡಲದ ವರ್ತೂರು ಮೂಲದ. ಇಂಟರ್ ಮೀಡಿಯೇಟ್ ವರೆಗೆ ಓದಿದ್ದ. ಚಟಗಳಿಗೆ ದಾಸನಾಗಿದ್ದ ಆತ ವಿಲಾಸಿಯಂತೆ ಅಲೆದಾಡುತ್ತಿದ್ದ. ಆದರೆ ಸುಲಭವಾಗಿ ಹಣ ಗಳಿಸಲು ಅಡ್ಡ ಮಾರ್ಗ ಹಿಡಿದ. ಸರ್ಕಾರದ ನಾನಾ ಇಲಾಖೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಗರಣಗಳನ್ನು ಮಾಡತೊಡಗಿದ. ಭುವನಗಿರಿ ಪಟ್ಟಣದ ಸಂಜೀವ್ ನಗರದ ರಾಜಮಣಿ ಎಂಬ ಮಹಿಳೆಯ ಮೂಲಕ 11 ಮಂದಿಯಿಂದ ಲಕ್ಷ ಲಕ್ಷ ರೂ. ಗುಡ್ಡೆ ಹಾಕಿದ.

ಜಿಲ್ಲಾಧಿಕಾರಿ ವಿನಯ್ ಕೃಷ್ಣಾ ರೆಡ್ಡಿ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ಚೈತನ್ಯ ಜೈನಿ ಅವರುಗಳ ನಕಲಿ ಸಹಿ ಮಾಡಿ, ಸ್ಟಾಂಪ್ ಮಾಡಿ ಸಂತ್ರಸ್ತರಿಗೆ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಆದೇಶಗಳನ್ನು ನೀಡತೊಡಗಿದ್ದ. ತಾನು ಸೂಚಿಸಿದ ಸಮಯಕ್ಕೆ ಕೆಲಸಕ್ಕೆ ಸೇರಿಕೊಳ್ಳುವಂತೆ ಸಲಹೆ ನೀಡಿದ. ಆದರೆ ಕೆಲವರಿಗೆ ತಡವಾಗುತ್ತಿದೆ ಎಂದು ಸಬೂಬು ಹೇಳತೊಡಗಿದ. ಇದರಿಂದ ಕೆಲ ಸಂತ್ರಸ್ತರನ್ನು ಸರ್ಕಾರಿ ಕಚೇರಿಗಳಲ್ಲಿ ವಿಚಾರಿಸಿದಾಗ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಇದರಿಂದ ಆತನ ಮೂಲ ಬಂಡವಾಳ ಬಯಲಾಗಿದೆ.

ಸಂತ್ರಸ್ತರಿಗೆ ನೀಡಿರುವ ಆದೇಶಗಳು ನಕಲಿ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ತಾವು ನೀಡಿರುವ ಹಣವನ್ನು ಹಿಂದಿರುಗಿಸಬೇಕೆಂದು ನವೀನನನ್ನು ಸಂತ್ರಸ್ತರು ಕೇಳತೊಡಗಿದ್ದಾರೆ. ಆದರೆ ಅದು ಬಡ ಪೆಟ್ಟಿಗೆ ನಿರಾಕರಿಸಿದ್ದಾನೆ. ಪಂಚಾಯಿತಿ ನಡೆಸಿ, ಹಿರಿಯರ ಸಮ್ಮುಖದಲ್ಲಿ ಸಂತ್ರಸ್ತರಿಗೆ ಹಣ ಮರುಪಾವತಿಸುವಂತೆ ಬಾಂಡ್ ಪೇಪರ್ ಬರೆದುಕೊಟ್ಟಿದ್ದಾನೆ. ಆದರೂ ಹಣ ಪಾವತಿಯಾಗದ ಕಾರಣ ಸಂತ್ರಸ್ತರು ಭುವನಗಿರಿ ಪಟ್ಟಣ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ನವೀನನ ವಿರುದ್ಧ ಪ್ರಕರಣ ದಾಖಲಿಸಿkಒಂಡು, ರಿಮಾಂಡ್‌ಗೆ ಕಳುಹಿಸಿದ್ದಾರೆ.