WFI Elections: ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆ

ಈ ಹಿಂದೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದು ವಿವಾದಕ್ಕೀಡಾಗಿದ್ದ  ಡಬ್ಲ್ಯುಎಫ್‌ಐನ ನಿರ್ಗಮಿತ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತ ಸಂಜಯ್ ಸಿಂಗ್  ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

WFI Elections: ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆ
ಸಂಜಯ್ ಸಿಂಗ್
Follow us
ರಶ್ಮಿ ಕಲ್ಲಕಟ್ಟ
|

Updated on:Dec 21, 2023 | 3:28 PM

ದೆಹಲಿ ಡಿಸೆಂಬರ್ 21: ಭಾರತೀಯ ಕುಸ್ತಿ ಫೆಡರೇಷನ್ (WFI) ಚುನಾವಣೆಗೆ ಇಂದು (ಗುರುವಾರ) ಮತದಾನ ನಡೆದಿದ್ದು, ಅಧ್ಯಕ್ಷ  ಸ್ಥಾನಕ್ಕೆ ಸಂಜಯ್ ಸಿಂಗ್ ಆಯ್ಕೆ ಆಗಿದ್ದಾರೆ.  ಈ ಹಿಂದೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದು ವಿವಾದಕ್ಕೀಡಾಗಿದ್ದ  ಡಬ್ಲ್ಯುಎಫ್‌ಐನ ನಿರ್ಗಮಿತ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ಅವರ ಆಪ್ತರಾಗಿದ್ದಾರೆ  ಸಂಜಯ್ ಸಿಂಗ್ (Sanjay Singh). ಅಧ್ಯಕ್ಷ ಸ್ಥಾನಕ್ಕೆ  ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ (Anita Sheoran) ಮತ್ತು ಸಂಜಯ್ ನಡುವೆ ಪೈಪೋಟಿ ನಡೆದಿತ್ತು. ಇಂದು ಬೆಳಗ್ಗೆ ಮತದಾನ ಪ್ರಕ್ರಿಯೆ ಮುಗಿದ ಕೂಡಲೇ ಮತ ಎಣಿಕೆ ಆರಂಭವಾಗಿತ್ತ

ಅಧ್ಯಕ್ಷ ಸ್ಥಾನ ಜತೆಗೆ ಹಿರಿಯ ಉಪಾಧ್ಯಕ್ಷ, ನಾಲ್ವರು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಚುನಾವಣೆ ನಡೆದಿದೆ. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಲ್ಲಿ ಒಬ್ಬರು ಹೊಸದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಮಾಜಿ ಕುಸ್ತಿಪಟು ಮೋಹನ್ ಯಾದವ್ ಆಗಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಉನ್ನತ ಹುದ್ದೆಯನ್ನು ಅಲಂಕರಿಸಿದ 12 ವರ್ಷಗಳ ನಂತರ ದೇಶದ ಉನ್ನತ ಕುಸ್ತಿ ಸಂಸ್ಥೆಗೆ ಮತದಾನದ ಮೂಲಕ ಹೊಸ ಅಧ್ಯಕ್ಷರ ನೇಮಕ ಆಗಿದೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೇಶದ ಅಗ್ರ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರಿಗೆ ಬ್ರಿಜ್ ಭೂಷಣ್ ಸಿಂಗ್ ಅವರ ಕುಟುಂಬದ ಸದಸ್ಯರು ಅಥವಾ ಸಹಾಯಕರು ಯಾರೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಹಾಗಾಗಿ ಬ್ರಿಜ್ ಭೂಷಣ್ ಅವರ ಪುತ್ರ ಪ್ರತೀಕ್ ಮತ್ತು ಅಳಿಯ ವಿಶಾಲ್ ಸಿಂಗ್ ರೇಸ್‌ಗೆ ಪ್ರವೇಶಿಸಲಿಲ್ಲ, ಆದರೆ ಅವರ ಸಹಾಯಕ ಸಂಜಯ್ ಸಿಂಗ್ ಅವರ ನಾಮನಿರ್ದೇಶನ ಮಾಡಲಾಗಿದೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್ ಬಗ್ಗೆ ದೆಹಲಿ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಹೇಳಿರುವುದೇನು?

WFI ಅಧ್ಯಕ್ಷರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕುಸ್ತಿಪಟುಗಳು ಶೆರಾನ್ ಅವರನ್ನು ಬೆಂಬಲಿಸಿದ್ದಾರೆ.

ಸಂಜಯ್ ಕುಮಾರ್ ಸಿಂಗ್ ಯಾರು? ಡಬ್ಲ್ಯುಎಫ್‌ಐನ ಹೊಸ ಅಧ್ಯಕ್ಷ ‘ಬಬ್ಲು’ ಎಂದು ಕರೆಯಲ್ಪಡುವ ಸಂಜಯ್ ಕುಮಾರ್ ಸಿಂಗ್  ಉತ್ತರ ಪ್ರದೇಶದ ಕುಸ್ತಿ ಅಸೋಸಿಯೇಷನ್ ​​ಮತ್ತು ರಾಷ್ಟ್ರೀಯ ಕುಸ್ತಿ ಸಂಸ್ಥೆ ಎರಡರಲ್ಲೂ ಪದಾಧಿಕಾರಿಯಾಗಿದ್ದಾರೆ. 2019 ರಲ್ಲಿ, ಅವರು ಭಾರತೀಯ ಕುಸ್ತಿ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅಂದರೆ, ಅವರು ಹಿಂದಿನ WFI ನ ಕಾರ್ಯಕಾರಿ ಮಂಡಳಿಯ ಭಾಗವಾಗಿದ್ದರು.

ಸಂಜಯ್ ಸಿಂಗ್ ಮೂಲತಃ ಉತ್ತರ ಪ್ರದೇಶದ ಚಂದೌಲಿಯವರು. ಗ್ರಾಮದ ಹೆಸರು ಝಾನ್ಸಿ, ಇದು ಚಂದೌಲಿಯ ಝಾನ್ಸಿ ಗ್ರಾಮ. ಸಂಜಯ್ ಸಿಂಗ್ ಅವರ ತಂದೆ ಮತ್ತು ತಾತ ಕುಸ್ತಿ ಆಯೋಜಿಸುತ್ತಿದ್ದರು. ಇದರಿಂದಾಗಿ ಸಂಜಯ್ ಸಿಂಗ್ ಕೂಡ ಯಾವಾಗಲೂ ಕುಸ್ತಿಯಲ್ಲಿ ಕೆಲಸ ಮಾಡುತ್ತಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ಸಂಜಯ್ ಸಿಂಗ್ 2008 ರಲ್ಲಿ ವಾರಣಾಸಿ ಕುಸ್ತಿ ಸಂಘದ ಜಿಲ್ಲಾ ಅಧ್ಯಕ್ಷರಾದರು. 2009ರಲ್ಲಿ ಉತ್ತರ ಪ್ರದೇಶ ಕುಸ್ತಿ ಅಸೋಸಿಯೇಷನ್ ​​ರಚನೆಯಾದಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ ರಾಜ್ಯಾಧ್ಯಕ್ಷ ಹಾಗೂ ಸಂಜಯ್ ಸಿಂಗ್ ಉಪಾಧ್ಯಕ್ಷರಾದರು.

ಸಂಜಯ್ ಕುಮಾರ್ ಸಿಂಗ್ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ. ಸಂಜಯ್ ಸಿಂಗ್ ಸ್ವತಃ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಅವರು ಕುಟುಂಬ ಸಂಬಂಧಗಳನ್ನು ಹೊಂದಿದ್ದಾರೆ. ಇಬ್ಬರೂ ಕಳೆದ ಮೂರು ದಶಕಗಳಿಂದ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಂದು ಬಿಬಿಸಿ ವರದಿ ಮಾಡಿದೆ.

Published On - 3:09 pm, Thu, 21 December 23